ಇಡಿ ಮುಂದೆ ರಾಹುಲ್ ಗಾಂಧಿ: ದೆಹಲಿಯ ಈ ಮಾರ್ಗಗಳಲ್ಲಿ ಹೋಗದಂತೆ ಸಲಹೆ
ನವದೆಹಲಿ ಜೂನ್ 14: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋಮವಾರ ಇಡಿ ಕಚೇರಿಯಲ್ಲಿ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸಲಾಯಿತು. ಈ ವಿಚಾರಣೆ ಸುಮಾರು 11 ಗಂಟೆಗಳ ಕಾಲ ನಡೆಯಿತು. ಇಂದು ಮತ್ತೊಮ್ಮೆ ಇಡಿ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಲಿದೆ. ನಿನ್ನೆ ವಿಚಾರಣೆಗೂ ಮುನ್ನ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ, ಹಲವು ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಈ ಕಾರಣದಿಂದಾಗಿ ದೆಹಲಿ ಟ್ರಾಫಿಕ್ ಪೊಲೀಸರು ನಿನ್ನೆ ಹಲವು ರಸ್ತೆ ಮಾರ್ಗಗಳನ್ನು ಬದಲಿಸಿದರು. ಇಂದು ಮತ್ತೊಮ್ಮೆ ಇಡಿ ಕಚೇರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದು, ಅಲ್ಲಿ ಅವರನ್ನು ವಿಚಾರಣೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ದೆಹಲಿ ಟ್ರಾಫಿಕ್ ಪೊಲೀಸರು ಮಾರ್ಗ ಬದಲಿಸುವಂತೆ ದೆಹಲಿ ಜನತೆಗೆ ಮತ್ತೊಮ್ಮೆ ಸಲಹೆ ನೀಡಿದ್ದಾರೆ.
ನಿನ್ನೆಯಂತೆ ಇಂದೂ ಕೂಡ ಕೆಲ ರಸ್ತೆ ಮಾರ್ಗಗಳನ್ನು ಬದಲಾಯಿಸಲಾಗಿದ್ದು. ರಸ್ತೆ ಬದಲಿಸುವಂತೆ ಕೋರಲಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಕೆಲ ರಸ್ತೆಗಳಲ್ಲಿ ಪ್ರಯಾಣ ಮಾಡದಂತೆ ದೆಹಲಿ ಜನರಿಗೆ ಟ್ರಾಫಿಕ್ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಟ್ರಾಫಿಕ್ ಪೊಲೀಸ್ ಮನವಿ
ದೆಹಲಿ ಟ್ರಾಫಿಕ್ ಪೊಲೀಸರು ನೀಡಿರುವ ಸಲಹೆಯಲ್ಲಿ, ಮೋತಿಲಾಲ್ ನೆಹರು ಮಾರ್ಗ, ಅಕ್ಬರ್ ರಸ್ತೆ, ಜನಪಥ್ ಮತ್ತು ಮಾನ್ ಸಿಂಗ್ ರಸ್ತೆ ಕಡೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಹೋಗಬೇಡಿ ಎಂದು ಹೇಳಲಾಗಿದೆ. ಈ ರಸ್ತೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ವಾಹನ ಸಂಚಾರವನ್ನು ಬದಲಾಯಿಸಲಾಗಿದೆ. ಹೀಗಾಗಿ ಈ ರಸ್ತೆಗಳಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಗೋಲ್ ಮೇಥಿ ಜಂಕ್ಷನ್, ತುಘಲಕ್ ಜಂಕ್ಷನ್, ಕ್ಲಾರಿಡ್ಜ್ ಜಂಕ್ಷನ್, ಕ್ಯೂ ಪಾಯಿಂಟ್ ಜಂಕ್ಷನ್, ಸುನ್ಹರಿ ಮಸೀದಿ ಜಂಕ್ಷನ್, ಮೌಲಾನಾ ಆಜಾದ್ ರಸ್ತೆ ಜಂಕ್ಷನ್ ಮತ್ತು ಮಾನ್ ಸಿಂಗ್ ರಸ್ತೆ ಜಂಕ್ಷನ್‌ಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಜನರು ತೆರಳದಂತೆ ಸೂಚಿಸಲಾಗಿದೆ.

ಈ ಸ್ಥಳಗಳಲ್ಲಿ ವಿಶೇಷ ವ್ಯವಸ್ಥೆ
ಇದರ ಹೊರತಾಗಿ ಹೊಸದಿಲ್ಲಿಯ ಮುಂಭಾಗದಲ್ಲಿ ಬಸ್ಸುಗಳನ್ನು ಅನುಮತಿಸಲಾಗುವುದಿಲ್ಲ. ಗೋಲ್ ದಕ್ ಖಾನಾ ಜಂಕ್ಷನ್, ಪಟೇಲ್ ಚೌಕ್, ವಿಂಡ್ಸರ್ ಪ್ಲೇಸ್, ತೀನ್ ಮೂರ್ತಿ ಚೌಕ್, ಪೃಥ್ವಿರಾಜ್ ರಸ್ತೆ ಕಡೆಗೆ ಬಸ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸ್ಥಳಗಳಲ್ಲಿ ವಿಶೇಷ ವ್ಯವಸ್ಥೆ ಇರುವ ಕಾರಣ ಮಾರ್ಗವನ್ನು ಬದಲಾಯಿಸಲಾಗುತ್ತದೆ.

ರಾಹುಲ್ ಗಾಂಧಿಗೆ ಮತ್ತೊಂದು ಸಮನ್ಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ರಾಹುಲ್ ಗಾಂದಿಯವರಿಗೆ ಸಮನ್ಸ್ ಜಾರಿ ಮಾಡಿದ್ದ ಜಾರಿ ನಿರ್ದೇಶನಾಲಯವು, ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿಯವರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಜೂನ್ 5 ರಂದು ಭಾರತಕ್ಕೆ ವಾಪಸ್ಸಾಗುತ್ತಿದ್ದೇನೆ. ತನಿಖೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹೊಸದಾಗಿ ಮತ್ತೊಂದು ಸಮನ್ಸ್ ಜಾರಿ ಮಾಡಿರುವ ಜಾರಿ ನಿರ್ದೇಶನಾಲಯವು, ಜೂನ್ 13ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸಮನ್ಸ್‌ನಂತೆ ನಿನ್ನೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಇನ್ನೂ ಬಾಕಿ ಇದ್ದು, ಇಂದೂ ಕೂಡ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

ಹಿರಿಯ ನಾಯಕರ ಬಂಧನ
ನಿನ್ನೆ (ಜೂನ್ 13) ರಾಹುಲ್ ಗಾಂಧಿ ಇಡಿ ವಿಚಾರಣೆ ಕುರಿತಂತೆ ದೆಹಲಿ ಮತ್ತು ರಾಜ್ಯ ರಾಜಧಾನಿಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ರಣದೀಪ್ ಸುರ್ಜೆವಾಲಾ ಮತ್ತು ಕೆ ಸಿ ವೇಣುಗೋಪಾಲ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಪಕ್ಷದ ಬೃಹತ್ ಶಕ್ತಿ ಪ್ರದರ್ಶನದ ಬಳಿಕ ಅವರನ್ನು ಬಂಧಿಸಲಾಯಿತು.
ವಿರೋಧ ಪಕ್ಷವು ತನ್ನ ಕೆಲವು ನಾಯಕರನ್ನು ಪೊಲೀಸರು ಅಮಾನುಷವಾಗಿ ನಡೆಸಿಕೊಂಡಿದ್ದು ಶಾಂತಿಯುತ ಪ್ರತಿಭಟನೆಗಳಿಗೆ 'ಅನುಮತಿ ನೀಡುತ್ತಿಲ್ಲ' ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗೇಟು ನೀಡಿದ್ದು, ಕೈ ನಾಯಕರು ಇಡಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಗಾಂಧಿ ಕುಟುಂಬದ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಕ್ರಮ ರಕ್ಷಣೆ ಆರೋಪ ಮಾಡಿದ - ಸ್ಮೃತಿ ಇರಾನಿ
'ರಾಹುಲ್ ಗಾಂಧಿ ಏನು ಕಾನೂನಿಗಿಂತ ಮೇಲಲ್ಲ ಎಂದು ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಜಕೀಯ ಕುಟುಂಬವು ತನ್ನ 'ಅಕ್ರಮ'ವನ್ನು ರಕ್ಷಿಸಲು ವಿಮೋಚನೆಗಾಗಿ ತನಿಖಾ ಸಂಸ್ಥೆಯನ್ನು ಹಿಡಿದಿಟ್ಟುಕೊಳ್ಳುವ ಇಂತಹ ಅಬ್ಬರದ ಪ್ರಯತ್ನವನ್ನು ಹಿಂದೆಂದೂ ಮಾಡಿರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications