ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಷನಲ್ ಹೆರಾಲ್ಡ್ ಕೇಸ್ : ಮೂರೇ ನಿಮಿಷದಲ್ಲಿ ಜಾಮೀನು!

By Prasad
|
Google Oneindia Kannada News

ನವದೆಹಲಿ, ಡಿಸೆಂಬರ್ 19 : ಮೂರೇ ಮೂರು ನಿಮಿಷ! ಜಸ್ಟ್ 3 ಮಿನಿಟ್ಸ್!

ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಪಟಿಯಾಲಾ ಹೌಸ್ ನ್ಯಾಯಾಲಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡಲು ತೆಗೆದುಕೊಂಡಿರುವಂಥ ಸಮಯ.

ಕೋರ್ಟ್ ಸೋನಿಯಾ, ರಾಹುಲ್ ಮತ್ತಿತರನ್ನು ಜೈಲಿಗಟ್ಟುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ, ಟಿವಿಯಲ್ಲಿ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಹಂತದಲ್ಲಿ ಕೆಲವೇ ಕ್ಷಣಗಳಲ್ಲಿ ಜಾಮೀನು ಹಿಡಿದುಕೊಂಡು ಇಬ್ಬರೂ ಹೊರನಡೆದಿದ್ದಾರೆ.

ಆದರೆ, ಅವರೊಂದಿಗೆ ಬಂದವರು ಎಂತೆಂಥವರು? ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಖುದ್ದಾಗಿ ಸೋನಿಯಾ ಜೊತೆ ನ್ಯಾಯಾಲಯಕ್ಕೆ ಆಗಮಿಸಿದ್ದರು. ಅಂಥ ದೊಡ್ಡ ಹುದ್ದೆಯನ್ನು ಹತ್ತು ವರ್ಷಗಳ ಕಾಲ ಅಲಂಕರಿಸಿದವರಿಗೆ ನ್ಯಾಯಾಲಯಕ್ಕೆ ಬರುವುದು ಬೇಕಿತ್ತಾ? [ಹೆರಾಲ್ಡ್ : ಒಂದಿಷ್ಟು ತಮಾಷೆಯ, ಕೆಣಕುವ ಟ್ವೀಟುಗಳು]

National Herald Case : Much ado about nothing

ಜೊತೆಗೆ, ಮಾಜಿ ಕೇಂದ್ರ ಸಚಿವ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ, ಮಗಳು ಪ್ರಿಯಾಂಕಾ ವದ್ರಾ, ಅಳಿಯ ರಾಬರ್ಟ್ ವದ್ರಾ, ಗುಲಾಮ್ ನಬಿ ಆಜಾದ್, ಮಾಜಿ ಲೋಕಸಭಾಧ್ಯಕ್ಷೆ ಮೀರಾ ಕುಮಾರ್... ಇನ್ನೂ ಯಾರ್ಯಾರೋ! ಎಲ್ಲಿ ನೋಡಿದಲ್ಲಿ ಕಾಂಗ್ರೆಸ್ ಬೆಂಬಲಿಗರೇ ಅಲ್ಲಿ ನೆರೆದಿದ್ದರು.

ಈ ಮೂರು ಕ್ಷಣಗಳಿಗಾಗಿ ಮೂರು ದಿನಗಳಿಂದ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್, ದೆಹಲಿ ಪೊಲೀಸ್ ಮತ್ತು ಜಾಗೃತ ದಳ ಕೋರ್ಟಿನ ಸುತ್ತು ಹೊಡೆದು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದವು. ಕೋರ್ಟಿನ ಸುತ್ತಲೂ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಕೋರ್ಟ್ ಆವರಣದಲ್ಲಿದ್ದ ಎಲ್ಲಾ ಅಂಗಡಿಗಳಿಗೆ ಬೀಗ ಜಡಿಯಲಾಗಿತ್ತು. ವಿಚಾರಣೆ ನಡೆಸಲಿರುವ ಕೋರ್ಟ್ ಬಳಿಯಿರುವ 2ನೇ ಗೇಟ್ ಬಳಿ ಯಾರೂ ಸುಳಿಯದಂತೆ ನಿಗಾವಹಿಸಲಾಗಿತ್ತು. ಇಲ್ಲಿ ಎಲ್ಲೆಡೆ ಬಹುಸ್ತರದ ಭದ್ರತೆಯನ್ನು ಒದಗಿಸಲಾಗಿತ್ತು. [ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್]

ಯಾವುದೇ ಅವಘಡ ಸಂಭವಿಸದಂತೆ ತಡೆಯಲು ಸುಮಾರು 50 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರು ಹತ್ತಿರ ಕೂಡ ಸುಳಿಯದಂತೆ ಎಚ್ಚರವಹಿಸಲಾಗಿತ್ತು. ಇನ್ನೂ ರಾಹುಲ್ ಗಾಂಧಿ ಕೋರ್ಟಿಗೆ ಬರುತ್ತಿರುವಾಗ ಸೂಟ್ ಬೂಟ್ ಧಾರಿ ರಕ್ಷಣಾ ಸಿಬ್ಬಂದಿಗಳ ದಂಡೇ ನೆರೆದಿತ್ತು.

English summary
National Herald Case : Much ado about nothing. Patiala House court in Delhi granted bail to Sonia and Rahul Gandhi within few minutes. But, preparation to make security arrangements took 3 days. Was it necessary for people like Manmohan Singh to come to court?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X