ಸಿಬಿಐ ಅಧಿಕಾರಿ ವಿರುದ್ಧದ ತನಿಖೆಯಲ್ಲಿ ಅಜಿತ್ ದೋವಲ್ ಮೂಗು ತೂರಿಸಿದರೇ?
ನವದೆಹಲಿ, ನವೆಂಬರ್ 19: ಸಿಬಿಐನಲ್ಲಿ ಲಂಚ ಪ್ರಕರಣದ ವಿವಾದದಲ್ಲಿ ಸಿಲುಕಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ವಿರುದ್ಧದ ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಸ್ತಕ್ಷೇಪ ಮಾಡಿದ್ದಾರೆ. ಅಲ್ಲದೆ, ಅಸ್ಥಾನಾ ಅವರ ನಿವಾಸದ ಮೇಲೆ ನಡೆಯಬೇಕಿದ್ದ ದಾಳಿಯನ್ನೂ ತಡೆದಿದ್ದಾರೆ ಎಂದು ಸಿಬಿಐ ಉಪ ಪೊಲೀಸ್ ಮಹಾ ನಿರ್ದೇಶಕ ಎಂ.ಕೆ. ಸಿನ್ಹಾ ಆರೋಪಿಸಿದ್ದಾರೆ.
ಅಸ್ಥಾನಾ ವಿರುದ್ಧದ ಲಂಚ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದ ಸಿನ್ಹಾ ಅವರನ್ನು ಅಕ್ಟೋಬರ್‌ನಲ್ಲಿ ನಡೆದ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ವೇಳೆ ಬೇರೆಡೆ ವರ್ಗಾಯಿಸಲಾಗಿತ್ತು.
ದೋವಲ್ ಅವರಿಗೆ ಆಪ್ತರಾಗಿರುವ ಇಬ್ಬರು ಮಧ್ಯವರ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದೂ ಸಿನ್ಹಾ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣದ ದೂರುದಾರನಾದ ಉದ್ಯಮಿ ಸತೀಶ್ ಬಾಬು ಸನಾ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧುರಿ ಅವರು ಸಿಬಿಐಗೆ ಸಂಬಂಧಿಸಿದ ಅನೇಕ ವಿಚಾರಗಳಲ್ಲಿ ನೆರವಾಗಲು ಕೋಟ್ಯಂತರ ರೂಪಾಯಿಗಳನ್ನು ಲಂಚವಾಗಿ ಪಡೆದಿದ್ದಾರೆ ಎಂದು ತಮಗೆ ತಿಳಿಸಿದ್ದರು ಎಂಬುದಾಗಿ ಸಿನ್ಹಾ ಆರೋಪ ಮಾಡಿದ್ದಾರೆ.
ಗುಜರಾತ್‌ನ ಸಂಸದರಾಗಿರುವ ಚೌಧುರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದಾರೆ.

ದೋವಲ್‌ಗೆ ಪರಮಾಪ್ತರು
'ಮನೋಜ್ ಪ್ರಸಾದ್ (ಅಸ್ಥಾನಾ ವಿರುದ್ಧದ ಪ್ರಕರಣದಲ್ಲಿ ಬಂಧಿತನಾಗಿರುವ ಮಧ್ಯವರ್ತಿ), ಮನೋಜ್ ಮತ್ತು ಸೋಮೇಶ್ ಅವರ ತಂದೆ, ಸಂಶೋಧನೆ ಮತ್ತು ವಿಶ್ಲೇಷಣಾ ಘಟಕದ ನಿವೃತ್ತ ಜಂಟಿ ಕಾರ್ಯದರ್ಶಿಯಾಗಿದ್ದ ದಿನೇಶ್ವರ್ ಪ್ರಸಾದ್ ಅವರು ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಪರಮಾಪ್ತರಾಗಿದ್ದಾರೆ.

ಮನೋಜ್‌ಗೆ ಕೋಪ
ಸಿಬಿಐ ಕೇಂದ್ರ ಕಚೇರಿಗೆ ಕರೆದುಕೊಂಡ ಬಂದ ಸಂದರ್ಭದಲ್ಲಿ ಮನೋಜ್ ಬಹಿರಂಗಪಡಿಸಿದ ಮೊದಲ ಸಂಗತಿ ಇದು. ಅಲ್ಲದೆ, ತನಗೆ ಎನ್‌ಎಸ್‌ಎ ದೋವಲ್ ಅವರ ಸಾಮೀಪ್ಯದ ನಂಟು ಇದ್ದರೂ ಸಿಬಿಐ ತಮ್ಮನ್ನು ಹೇಗೆ ಬಂಧಿಸಿತು ಎಂಬುದು ಅವರಿಗೆ ಅಚ್ಚರಿ ಮತ್ತು ಕೋಪ ತರಿಸಿತ್ತು' ಎಂದು ಸಿನ್ಹಾ ವಿವರಿಸಿದ್ದಾರೆ.
|
ಇಂಟರ್ ಪೋಲ್ ಸ್ಪರ್ಧೆ
ದೋವಲ್ ಅವರಿಗೆ ಮಹತ್ವದ ಖಾಸಗಿ ವಿಚಾರದಲ್ಲಿ ತನ್ನ ಸಹೋದರ ಸೋಮೇಶ್ ಮತ್ತು ಸಮಂತ್ ಗೋಯಲ್ ನೆರವು ನೀಡಿದ್ದಾಗಿ ಮನೋಜ್ ಹೇಳಿದ್ದರು.
ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆದ ಇಂಟರ್‌ಪೋಲ್‌ನ ಸ್ಪರ್ಧೆಯಲ್ಲಿ ಭಾರತವೂ ಸ್ಪರ್ಧಿಸಲು ಮುಂದಾಗಿತ್ತು. ಜಂಟಿ ನಿರ್ದೇಶಕ ಎಕೆ ಶರ್ಮಾ ಅವರನ್ನು ಭಾರತ ನಾಮನಿರ್ದೇಶನ ಮಾಡಿತ್ತು.
ಈ ವರ್ಷದ ನವೆಂಬರ್ ಮೂರನೇ ವಾರದಲ್ಲಿ ಚುನಾವಣೆ ನಡೆಯಬೇಕಿತ್ತು. ಸೆಪ್ಟೆಂಬರ್‌ನಲ್ಲಿ ಎಕೆ ಶರ್ಮಾ ಅವರು ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳಬೇಕಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅದು ರದ್ದಾಯಿತು. ಅವರ ಪ್ರವಾಸ ಕೂಡ ರದ್ದುಗೊಂಡಿತು. ಭಾರತವು ಸ್ಪರ್ಧೆಯಿಂದ ಹಿಂದಕ್ಕೆ ಸರಿಯಿತು.

ಅಸ್ಥಾನಾ ವಿರುದ್ಧ ಎಫ್‌ಐಆರ್
ಅ.15ರಂದು ಅಸ್ಥಾನಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಅದನ್ನು ಎನ್‌ಎಸ್ಎಗೆ ಅ. 17ರಂದು ಮಾಹಿತಿ ನೀಡಿದ್ದರು.
ವಿಚಿತ್ರವೆಂದರೆ ಅದೇ ದಿನ ರಾತ್ರಿ ಎಫ್‌ಐಆರ್ ದಾಖಲಾದ ಬಗ್ಗೆ ರಾಕೇಶ್ ಅಸ್ಥಾನಾ ಅವರಿಗೆ ಎನ್‌ಎಸ್‌ಎ ಮಾಹಿತಿ ನೀಡಿತ್ತು. ಆಗ ಅಸ್ಥಾನಾ ತಮ್ಮನ್ನು ಬಂಧಿಸದಂತೆ ಎನ್‌ಎಸ್‌ಎ ಮನವಿ ಮಾಡಿದ್ದರು.
|
ಅನುಮತಿಯನ್ನೇ ನೀಡದ ದೋವಲ್
ಈ ಪ್ರಕರಣದ ತನಿಖಾಧಿಕಾರಿ ಎಕೆ ಬಸ್ಸಿ ಅವರು ಅಸ್ಥಾನಾ ಅವರ ಸೆಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲು ಮತ್ತು ತಪಾಸಣೆಗಳನ್ನು ನಡೆಸಲು ಅನುಮತಿ ಕೋರಿದ್ದರು. ಆದರೆ, ಸಿಬಿಐ ನಿರ್ದೇಶಕರು ಅದಕ್ಕೆ ಕೂಡಲೇ ಅನುಮತಿ ನೀಡಲಿಲ್ಲ. ಎನ್‌ಎಸ್‌ಎ ಕೂಡ ಅದೇ ರೀತಿ ಅನುಮತಿ ನೀಡಿಲ್ಲ ಎಂದು ಹೇಳಿದ್ದರು ಎಂಬುದಾಗಿ ಸಿನ್ಹಾ ಆರೋಪಿಸಿದ್ದಾರೆ.

ತಪಾಸಣೆ ನಿಲ್ಲಿಸಲು ಸೂಚನೆ
ಈ ಬಗ್ಗೆ ಅ.22ರಂದು ನಿರ್ದೇಶಕರಿಗೆ ಮನವಿ ಮಾಡಲಾಗಿತ್ತು. ಆದರೆ, ಆ ಮನವಿಯನ್ನು ಕೂಡ ತಿರಸ್ಕರಿಸಲಾಗಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿದಾರರು ವಿವರ ಬಯಸಿದಾಗ ಅದಕ್ಕೂ ಎನ್‌ಎಸ್ಎ/ದೋವಲ್ ಅವರಿಂದ ತಮಗೆ ಅನುಮತಿ ದೊರೆತಿಲ್ಲ ಎಂದು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು.
ಡಿವೈಎಸ್‌ಪಿ ದೇವೇಂದರ್ ಕುಮಾರ್ ಅವರ ಮನೆಯಲ್ಲಿ ಅ.20ರಂದು ತಪಾಸಣೆ ನಡೆಸಿದಾಗ ಅದನ್ನು ನಿಲ್ಲಿಸುವಂತೆ ಸಿಬಿಐ ನಿರ್ದೇಶಕರು ಸೂಚಿಸಿದ್ದರು. ಇದು ಎನ್‌ಎಸ್‌ಎ ಅಜಿತ್ ದೋವಲ್ ಅವರಿಂದ ಬಂದ ಸೂಚನೆ ಎಂದು ಅವರು ಹೇಳಿದ್ದರು ಎಂಬುದಾಗಿ ಸಿನ್ಹಾ ತಿಳಿಸಿದ್ದಾರೆ.

ಜಂಟಿ ಕಾರ್ಯದರ್ಶಿ ಕಡೆಯಿಂದ ವಿಚಾರಣೆ
ಮನೋಜ್ ಪ್ರಸಾದ್‌ನನ್ನು ಬಂಧಿಸಿದ್ದಾಗ ದೆಹಲಿ ಪೊಲೀಸ್ ಠಾಣೆಯ ವಿಶೇಷ ಸೆಲ್‌ನ ಡಿಸಿಪಿಯಿಂದ ಬಸ್ಸಿ ಅವರಿಗೆ ಕರೆ ಬಂದಿತ್ತು. ಆದರೆ, ಅವರು ಮಾತನಾಡಿರಲಿಲ್ಲ.
ಕೆಲ ಹೊತ್ತಿನಲ್ಲಿಯೇ ವಿಶೇಷ ಘಟಕದ ಮತ್ತೊಬ್ಬ ಇನ್‌ಸ್ಪೆಕ್ಟರ್ ಕರೆ ಮಾಡಿ ಮನೋಜ್ ಅವರನ್ನು ಬಂಧಿಸಲಾಗಿದೆಯೇ ಎಂದು ಕೇಳಿದ್ದರು. ಬಳಿಕ ನಡೆಸಿದ್ದ ತನಿಖೆಯಲ್ಲಿ ಹೀಗೆ ವಿಚಾರಿಸುವ ಸಂಗತಿ ಸಂಪುಟ ಕಾರ್ಯದರ್ಶಿ ಕಡೆಯಿಂದ ಬಂದಿದ್ದಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications