ಗುರು ಎಲ್ ಕೆ ಅಡ್ವಾನಿ, ಜೋಷಿ ಅವರನ್ನು ಭೇಟಿಯಾದ ಮೋದಿ
ನವದೆಹಲಿ, ಮೇ 24: ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ನಂತರ ಗುರು ಎಲ್ ಕೆ ಅಡ್ವಾಣಿ ಅವರ ಆಶಿರ್ವಾದ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಭೇಟಿಯಾದರು. ಅವರೊಟ್ಟಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೂ ಇದ್ದರು.
ಇದಕ್ಕೂ ಮುನ್ನ ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಷಿ ಅವರನ್ನೂ ಮೋದಿ ಭೇಟಿಯಾಗಿ ಆಶೀರ್ವಾದ ಪಡೆದರು.
ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಪ್ರಕಟವಾಗಿದ್ದು, ಬಿಜೆಪಿ ಸ್ವತಂತ್ರವಾಗಿಯೇ 302 ಸ್ಥಾನಗಳನ್ನು ಗೆದ್ದು, ದಾಖಲೆ ಬರೆದಿದೆ. ಎನ್ ಡಿಎ ಮೈತ್ರಿಕೂಟ 351 ಕ್ಷೇತ್ರಗಳಲ್ಲಿ ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ.

ಬಿಜೆಪಿ ಮತ್ತು ಎನ್ ಡಿಎ ಮೈತ್ರಿಪಕ್ಷಗಳ ಸಾಧನೆಯ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರು, ಬಿಜೆಪಿಗೆ ಇಂಥ ಅಪ್ರತಿಮ ಜಯ ದಾಖಲಿಸಿಕೊಟ್ಟ ನರೇಂದ್ರ ಭಾಯಿ ಮೋದಿ ಅವರಿಗೆ ನನ್ನ ಅಭಿನಂದನೆಗಳು. ಬಿಜೆಪಿ ಅಧ್ಯಕ್ಷ ಅಮಿತ್ ಭಾಯಿ ಶಾ ಮತ್ತು ಬಿಜೆಪಿಯ ಸಂದೇಶ ಎಲ್ಲರಿಗೂ ತಲುಪುವಂತೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ನಮನಗಳು" ಎಂದು ಅಭಿನಂದನೆ ಸಲ್ಲಿಸಿದ್ದರು.












Click it and Unblock the Notifications