ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಬಿಜೆಪಿಗಾಗಿ ಏನು ಮಾಡಿದ್ದಾರೆ?

|
Google Oneindia Kannada News

ನವದೆಹಲಿ, ನ. 28 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ವಾಗ್ದಾಳಿ ಆರಂಭಿಸಿದ್ದಾರೆ. ನರೇಂದ್ರ ಮೋದಿ ಗುಜರಾತ್ ಮಾದರಿ ಎಂದು ಹೇಳಿಕೊಂಡು ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ಬಿಜೆಪಿಗೆ ನೀಡಿದ ಕೊಡುಗೆ ಏನು ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಮಾತನಾಡಿದ ದೂರಸಂಪರ್ಕ ಸಚಿವ ಕಪಿಲ್ ಸಿಬಲ್, ಮೋದಿ ಪಕ್ಷಕ್ಕಾಗಿ ಏನನ್ನು ಮಾಡುತ್ತಿಲ್ಲ, ಗುಜರಾತ್‌ನ ಅಭಿವೃದ್ಧಿ ಹೇಳಿಕೊಂಡು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮೋದಿ ಅವರು ಸ್ವತಃ ತಮ್ಮನ್ನು ತಾವು ಹೊಗಳಿಕೊಳ್ಳುತ್ತಿದ್ದಾರೆ. ದೇಶದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮಾಡಿರುವ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಏಕೆ ಮಾತನಾಡುವುದಿಲ್ಲ ಎಂದು ಸಿಬಲ್ ಪ್ರಶ್ನಿಸಿದರು.

Kapil Sibal


ದೇಶದ ಇತರ ಮುಖ್ಯಮಂತ್ರಿಗಳಲ್ಲಿ ತಾವೇ ಉತ್ತಮ ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ತಮ್ಮಿಂದ ಮಾತ್ರ ಸಾಧ್ಯ ಎಂಬ ಭ್ರಮೆಯಲ್ಲಿ ಮೋದಿ ಮುಳುಗಿದ್ದಾರೆ. ಆದ್ದರಿಂದ ನಾನೇ ಉತ್ತಮ ನಾಯಕ ಎನ್ನುವಂತ ಭಾವನೆಯನ್ನು ಮೋದಿ ಹೊಂದಿದ್ದಾರೆ ಎಂದು ಕಪಿಲ್ ಸಿಬಲ್ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಆದ ದಿನದಿಂದ ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಕುರಿತು ಕಳೆದ ಪ್ರಸ್ತಾಸಿಲ್ಲ. ಮೋದಿಯವರ ಈ ವರ್ತನೆ ನೋಡಿದರೆ, ಮೋದಿಯಿಂದ ಬಿಜೆಪಿ ಪಡೆದುಕೊಂಡಿದ್ದು ಏನು ಎಂಬ ಪ್ರಶ್ನೆ ಮೂಡುತ್ತದೆ ಎಂದು ಸಿಬಲ್ ಹೇಳಿದ್ದಾರೆ.

ಬಿಜೆಪಿ ಮೋದಿಯ ತುಘಲಕ್ ರೀತಿಯ ಆಳ್ವಿಕೆಯನ್ನು ಈಗಲಾದರೂ ಪರಿಶೀಲನೆ ನಡೆಸಬೇಕು ಎಂದು ಹೇಳಿರುವ ಸಿಬಲ್, ಮೋದಿ ಅವರ ಮೇಲೆ ಅತಿಯಾದ ಭರವಸೆಯನ್ನು ಇಟ್ಟುಕೊಳ್ಳಬಾರದು ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ.

ಮೋದಿಗೆ ಸವಾಲು : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಳೆದ 12 ವರ್ಷದಲ್ಲಿ ರಾಜ್ಯದಲ್ಲಿ ಜಾರಿಗೊಳಿಸಿರುವ ಒಂದೇ ಒಂದು ದೊಡ್ಡ ಯೋಜನೆಯ ನಿದರ್ಶನವನ್ನು ನೀಡುವಂತೆ ಸಿಬಲ್ ಸವಾಲು ಹಾಕಿದ್ದಾರೆ.

English summary
Union Minister Kapil Sibal on Thursday, November 28 hit out at Bharatiya Janata Party’s prime ministerial candidate Narendra Modi for making tall claims about Gujarat’s model of development. Addressing a press conference, Sibal said, Modi keeps on praising himself and gives an impression that no other chief minister in the county has done any work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X