ವಿಶ್ವ ಆಚರಣೆಯಾಗಲಿದೆಯಾ ರಕ್ಷಾ ಬಂಧನ?

ನವದೆಹಲಿ, ಜೂ. 26 : ವಿಶ್ವ ಯೋಗ ದಿನ ಕಳೆದು ಇನ್ನೂ ಹೆಚ್ಚು ದಿನ ಕಳೆದಿಲ್ಲ. ಇದರ ಸಂಭ್ರಮದ ಮೆಲುಕು ಹಲವರಲ್ಲಿ ಮಾಸಿಲ್ಲ. ಅದರ ಬೆನ್ನಲೇ ಕೇಂದ್ರ ಸರ್ಕಾರ ಇನ್ನೊಂದು ವಿಶ್ವ ದಿನ ಆಚರಿಸಲು ಹೊರಟಿದೆ.

ಅದೇನಪ್ಪಾ ಅಂತ ಯೋಚಿಸ್ತಿದ್ದೀರಾ? ನಮ್ಮ ನಾಡಿನಲ್ಲಿ ರಕ್ಷಾ ಬಂಧನಕ್ಕೆ ಎಲ್ಲಿಲ್ಲದ ವಿಶೇಷ. ಇಡೀ ನಾಡಿನಾದ್ಯಂತ ಅಣ್ಣ ತಂಗಿಯರ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಇದರ ಮಹತ್ವ ಅರಿತ ಕೇಂದ್ರ ಸರ್ಕಾರ ಆಗಸ್ಟ್ 29ನ್ನು ವಿಶ್ವ ರಕ್ಷಾ ಬಂಧನ ದಿನವನ್ನಾಗಿ ಘೋಷಿಸಬೇಕೆಂದು ತೀರ್ಮಾನಿಸಿದೆ.

Narendra Modi govt moots world raksha bandhan day

ಇದರ ಕುರಿತಾಗಿ ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಆಚರಿಸುವ ನಿರ್ಧಾರ ತೆಗೆದುಕೊಂಡಿದೆ. ಇದರ ಮೇಲ್ವಿಚಾರಣೆ ನಡೆಸಲು ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನಂತ್ ಕುಮಾರ್ ಸಹಿತ ನಾಲ್ವರ ಸದಸ್ಯರ ಸಮಿತಿ ನೇಮಕ ಮಾಡಲಾಗಿದೆ.

ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಮಾತನಾಡಿದ್ದರು, ಆ ಸಂದರ್ಭದಲ್ಲಿ ಹಬ್ಬಹರಿದಿನಗಳನ್ನು ಈ ರೀತಿಯಲ್ಲಿ ಆಚರಣೆ ಮಾಡುವುದರಿಂದ ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಿದಂತಾಗುತ್ತದ. ಅಲ್ಲದೆ ಅದರ ಮೌಲ್ಯಗಳನ್ನು ಉಜ್ವಲಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಒಳಗೊಂಡಂತೆ ಬಿಜೆಪಿ ಸಚಿವರು, ಆರ್‌ಎಸ್‌ಎಸ್‌ ಮುಖಂಡರು ಹಾಗೂ ಮುಖ್ಯ ಅತಿಥಿಯಾಗಿ ಭಯ್ಯಾಜಿ ಜೋಶಿ ಭಾಗವಹಿಸುವ ಸಂಭವವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+