ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿ

|
Google Oneindia Kannada News

ನವದೆಹಲಿ, ಮೇ 31: ಎರಡನೆಯ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಕ್ರವಾರ ನರೇಂದ್ರ ಮೋದಿ ಅವರ ತಮ್ಮ ಮೊಟ್ಟಮೊದಲ ನಿರ್ಧಾರವನ್ನು ಕೈಗೊಂಡಿದ್ದಾರೆ.

ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಸೈನಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಅವರು ದೊಡ್ಡ ಮಟ್ಟದ ಬದಲಾವಣೆ ಮಾಡಿದ್ದಾರೆ. ಈ ಯೋಜನೆಯನ್ನು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಿರುವುದು ಮತ್ತೊಂದು ಮಹತ್ವದ ನಡೆಯಾಗಿದೆ.

ಮೋದಿ 2.0 ಸಂಪುಟದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ? ಮೋದಿ 2.0 ಸಂಪುಟದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ?

'ಪ್ರಧಾನಿಯಾಗಿ ನನ್ನ ಮೊದಲ ನಿರ್ಧಾರ ಭಾರತವನ್ನು ರಕ್ಷಿಸುವವರಿಗೆ ಅರ್ಪಿಸಲಾಗಿದೆ' ಎಂದು ಮೋದಿ ಅವರು ರಾಷ್ಟ್ರೀಯ ರಕ್ಷಣಾ ನಿಧಿ ಅಡಿಯಲ್ಲಿನ 'ಪ್ರಧಾನ ಮಂತ್ರಿಗಳ ವಿದ್ಯಾರ್ಥಿ ವೇತನ ಯೋಜನೆ'ಯಲ್ಲಿನ ಬದಲಾವಣೆಗಳನ್ನು ಅಂಗೀಕರಿಸಿದ್ದಾರೆ.

ಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿ

ಪ್ರಧಾನಿಯಾಗಿ ಎರಡನೆಯ ಅವಧಿಗೆ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ಮೊದಲ ಕಡತಕ್ಕೆ ಸಹಿಹಾಕಿದ್ದಾರೆ. ರಾಷ್ಟ್ರೀಯ ರಕ್ಷಣಾ ನಿಧಿ ಅಡಿಯಲ್ಲಿ ಬರುವ ವಿದ್ಯಾರ್ಥಿವೇತನದ ದರವನ್ನು ಹೆಚ್ಚಿಸಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಯೋಜನೆಯಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿ ಕೂಡ ಸೇರ್ಪಡೆಗೊಂಡಿದ್ದಾರೆ.

ಗಂಡು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ

ಗಂಡು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ

ಈ ನಿರ್ಧಾರದ ಅನ್ವಯ ಸೇವೆಯಲ್ಲಿರುವಾಗಲೇ ಬಲಿಯಾಗುವ ಯೋಧರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಏರಿಸಲಾಗಿದೆ. ಇದರಲ್ಲಿ ಗಂಡುಮಕ್ಕಳಿಗೆ ಶೇ 25ರಷ್ಟು ಹೆಚ್ಚಳ ಮಾಡಿದ್ದರೆ, ಹೆಣ್ಣುಮಕ್ಕಳ ವಿದ್ಯಾರ್ಥಿ ವೇತನವನ್ನು ಶೇ 33ರಷ್ಟು ಹೆಚ್ಚಿಸಲಾಗಿದೆ.

ರಾಜ್ಯ ಪೊಲೀಸರ ಕುಟುಂಬಕ್ಕೂ ವಿಸ್ತರಣೆ

ಈ ಮಹತ್ವದ ಸ್ಕಾಲರ್‌ಷಿಪ್ ಯೋಜನೆಯನ್ನು ಭಯೋತ್ಪಾದಕರು ಅಥವಾ ನಕ್ಸಲ್ ದಾಳಿಗಳಲ್ಲಿ ಹುತಾತ್ಮರಾಗುವ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೂ ವಿಸ್ತರಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಮೋದಿ 2.0 ಸರ್ಕಾರ: ರಾಜನಾಥ್ ಗೆ ರಕ್ಷಣಾ, ಅಮಿತ್ ಗೆ ಗೃಹ, ನಿರ್ಮಲಾಗೆ ವಿತ್ತಮೋದಿ 2.0 ಸರ್ಕಾರ: ರಾಜನಾಥ್ ಗೆ ರಕ್ಷಣಾ, ಅಮಿತ್ ಗೆ ಗೃಹ, ನಿರ್ಮಲಾಗೆ ವಿತ್ತ

ಹುತಾತ್ಮ ಪೊಲೀಸರ ಮಕ್ಕಳಿಗೆ ಸಿಗುತ್ತಿರಲಿಲ್ಲ

ಹುತಾತ್ಮ ಪೊಲೀಸರ ಮಕ್ಕಳಿಗೆ ಸಿಗುತ್ತಿರಲಿಲ್ಲ

ಈ ಮುಂಚೆ ತುಕಾರಾಂ ಒಂಬ್ಳೆ ಅವರಂತಹ ಹುತಾತ್ಮರ ಮಕ್ಕಳು ಈ ಯೋಜನೆಗೆ ಅರ್ಹರಾಗಿರಲಿಲ್ಲ. ಈ ಕೊರತೆಯನ್ನು ಈಗ ನಿವಾರಿಸಲಾಗಿದೆ. ಹಾಗೂ ರಾಜ್ಯ ಪೊಲೀಸ್ ಪಡೆಗಳಲ್ಲಿ ಭಯೋತ್ಪಾದನೆ/ನಕ್ಸಲರ ವಿರುದ್ಧ ಹೋರಾಡುವಾಗ ಮೃತಪಟ್ಟವರ ಕುಟುಂಬದವರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ. ಪೊಲೀಸ್ ಅಧಿಕಾರಿ ತುಕಾರಾಂ ಒಂಬ್ಳೆ ಅವರು ಮುಂಬೈನಲ್ಲಿ ನಡೆದ 26/11 ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದರು.

ಮೊದಲ ಸಂಪುಟ ಸಭೆ

ಮೊದಲ ಸಂಪುಟ ಸಭೆ

ಪ್ರಧಾನಿ ಮೋದಿ ಅವರು ಶುಕ್ರವಾರ ಸಂಜೆ ಸಚಿವ ಸಂಪುಟದ ಮೊದಲ ಸಭೆ ನಡೆಸಿದ್ದಾರೆ. ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಹಾಗೂ 58 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದರು. 17ನೇ ಲೋಕಸಭೆಯ ಹೊಸ ಕೇಂದ್ರ ಸಂಪುಟದಲ್ಲಿ 24 ಸಂಪುಟ ದರ್ಜೆ ಸಚಿವರು, 9 ರಾಜ್ಯ ಖಾತೆ ಸಚಿವರು (ಸ್ವತಂತ್ರ) ಮತ್ತು 24 ರಾಜ್ಯ ಸಚಿವರು ಇದ್ದಾರೆ.

English summary
Prime Minister Narendra Modi announced his first decision after taking charge for the second time. He has signed to enhance the number of scholarships to the children of soldiers killed during duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X