• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗು

|

ನವದೆಹಲಿ, ಜೂನ್ 26: ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯ ಸಭೆಯಲ್ಲೂ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್ಸಿಗರಿಗೆ ನಮ್ಮ ಗೆಲುವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಈಗಲೂ ಅವರು ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ" ಎಂದು ಮೋದಿ ಲೇವಡಿ ಮಾಡಿದರು.

ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಅವರು ರಾಜ್ಯಸಭೆಯಲ್ಲಿ ಮಾತನಾಡಿದರು. ಕೆಲವು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ, ಬಿಜೆಪಿ ಮತ್ತು ಮೈತ್ರಿಕೂಟಗಳು ಗೆದ್ದಿವೆ, ಆದರೆ ದೇಶ ಸೋತಿದೆ, ಪ್ರಜಾಪ್ರಭುತ್ವ ಸೋತಿದೆ ಎಂದು. ಆದರೆ ಜನರಿಗೆ ಪ್ರಜ್ಞೆ ಇದೆ. ಲೋಕಸಭೆಯಲ್ಲಿ ಮಾತ್ರವಲ್ಲ, ರಾಜ್ಯಸಭೆಯಲ್ಲಿ ಏನೇನಾಗುತ್ತದೆ ಎಂಬುದೂ ಜನರಿಗೆ ಗೊತ್ತಾಗಿದೆ ಎಂದು ಅವರು ಹೇಳಿದರು.

ಸಂಸತ್‌ನಲ್ಲಿ ಮೋದಿ ಭಾಷಣ: ಅಭಿವೃದ್ಧಿ ಮಂತ್ರದ ಜೊತೆ ಹಲವು ವಿಷಯ

ಕಾಂಗ್ರೆಸ್ ಪಕ್ಷ ಸೋತರೆ ಭಾರತ ಸೋತಂತೆಯೇ ಎಂದು ನಿಮ್ಮ ಮಾತಿನರ್ಥವೇ? ಹಾಗಾದರೆ ಕಾಂಗ್ರೆಸ್ ಮತ್ತು ಭಾರತ ಎರಡೂ ಒಮದೇ ಎನ್ನುತ್ತೀರಾ? ಅವರೆಡೂ ಒಂದೇ ಆಗಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ದೇಶದ ಚುನಾವಣಾ ಪದ್ಧತಿ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸಬೇಕು ಎಂದು ಮೋದಿ ಕಾಂಗ್ರೆಸ್ಸಿಗರಿಗೆ ಟಾಂಗ್ ನೀಡಿದರು.

ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರು ಭಾರತದ ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಸಹ ಇದೇ ಸಂದರ್ಭದಲ್ಲಿ ಮೋದಿ ಹೇಳಿದರು.

ಗೆಲುವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ!

ಗೆಲುವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ!

ಕಾಂಗ್ರೆಸ್ಸಿಗರಿಗೆ ನಮ್ಮ ಗೆಲುವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಜೊತೆಗೆ ತಮ್ಮ ಸೋಲನ್ನು ಒಪ್ಪಿಕೊಳ್ಳಲೂ ಅವರು ಸಿದ್ಧರಿಲ್ಲ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆಯಲ್ಲ. ಇವಿಎಂ ಮೂಲಕವೇ ಸಾಕಷ್ಟು ಚುನಾವಣೆಗಳು ನಡೆದಿವೆ. ಈ ಮೂಲಕವೇ ರಾಜ್ಯ ಸಭೆಯಲ್ಲಿ ಈಗಿರುವ ಹಲವು ಪಕ್ಷಗಳು ಕೆಲವು ರಾಜ್ಯಗಳಲ್ಲೂ ಆಡಳಿತ ನಡೆಸುತ್ತಿದ್ದಾರೆ. ಆಗ ಪ್ರಶ್ನೆ ಇರಲಿಲ್ಲ. ಆದರೆ ಈಗೇಕೆ ಇವಿಎಂ ಬಗ್ಗೆ ಮಾತನಾಡುತ್ತೀರಿ?- ನರೇಂದ್ರ ಮೋದಿ, ಪ್ರಧಾನಿ

ಚುನಾವಣಾ ಆಯೋಗದ ಸಭೆಗೇಕೆ ಹೋಗಲಿಲ್ಲ?

ಚುನಾವಣಾ ಆಯೋಗದ ಸಭೆಗೇಕೆ ಹೋಗಲಿಲ್ಲ?

ಇವಿಎಂ ಕುರಿತು ಎಲ್ಲಾ ಮಾಹಿತಿ ನೀಡಲು ಮತ್ತು ಇವಿಎಂ ವಿವಾದದ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಲು ಚುನಾವಣಾ ಆಯೋಗ ಇತ್ತೀಚೆಗೆ ಸರ್ವ ಪಕ್ಷಗಳ ಸಭೆ ಕರೆದಿತ್ತು. ಇವಿಎಂ ಬಗ್ಗೆ ದೂರುವವರು ಆ ಸಭೆಗೇಕೆ ಹೋಗಲಿಲ್ಲ? ಸಿಪಿಐ ಮತ್ತು ಎನ್ ಸಿಪಿ ಬಿಟ್ಟರೆ ಮತ್ಯಾರೂ ಆ ಸಭೆಗೆ ಬರಲಿಲ್ಲ. ಆ ಎರಡು ಪಕ್ಷಗಳಿಗೆ ಇವಿಎಂ ಬಗ್ಗೆ ತಿಳಿದುಕೊಳ್ಳಲು ಇರುವ ಉತ್ಸಾಹವನ್ನು ನಾನು ಶ್ಲಾಘಿಸುತ್ತೇನೆ. ಬೇರೆ ಪಕ್ಷಗಳಿಗೆ ಅಂಥ ಹುಮ್ಮಸ್ಸು ಯಾಕಿಲ್ಲ? ಒಂದು ದೇಶ, ಒಂದು ಚುನಾವಣೆ ಗೆ ಸಂಬಂಧಿಸಿದ ಸಭೆಗೂ ಹಾಗೆಯೇ ಆಯಿತು. ಅಭಿಪ್ರಾಯ ಬೇರೆ ಇದ್ದಿರಬಹುದು. ಆದರೆ ಸಭೆಗೆ ಹಾಜರಾಗದೆ ಇರುವುದು ಸರಿಯೇ?- ನರೇಂದ್ರ ಮೋದಿ

ಪೊಂಪಿಯೋ-ಮೋದಿ ಭೇಟಿ: ಮಹತ್ವದ ವಿಷಯಗಳ ಕುರಿತು ಚರ್ಚೆ

ಅವರಿಗೀಗ ಹೊಸ ಭಾರತದ ಮೇಲೆ ಕಣ್ಣು!

ಅವರಿಗೀಗ ಹೊಸ ಭಾರತದ ಮೇಲೆ ಕಣ್ಣು!

ಅವರಿಗೆ(ವಿಪಕ್ಷ, ವಿಶೇಷವಾಗಿ ಕಾಂಗ್ರೆಸ್) ಈಗ 'ಹೊಸ ಭಾರತ'ದ ಮೇಲೆ ಕಣ್ಣು. ಅವರಿಗೆ ಹಳೆ ಭಾರತವೇ ಬೇಕಾಗಿದೆಯೇ? ಸಂಪುಟದ ನಿರ್ಣಯಗಳನ್ನು ಪತ್ರಿಕಾ ಗೋಷ್ಠಿಯಲ್ಲಿ ಹರಿದು ಹಾಕುವಂಥ ಹಳೇ ಭಾರತ ಬೇಕಾ? ನೌಕಾನೆಲೆಯ ಹಡಗನ್ನು ವೈಯಕ್ತಿಗ ಪ್ರವಾಸಕ್ಕೆ ಬಳಸುವ ಹಳೇ ಭಾರತ ಬೇಕೆ? ಅಸಂಖ್ಯ ಹಗರಣಗಳ ಹಳೇ ಭಾರತ ಬೇಕೆ? ತುಕ್ಡೆ ತುಕ್ಡೆ ಗ್ಯಾಂಗ್ ಅನ್ನು ಬೆಮಬಲಿಸುವ ಹಳೇ ಭಾರತ ಬೇಕೆ?- ನರೇಂದ್ರ ಮೋದಿ

ಪ್ರಜ್ಞಾವಂತರು ಭಾರತೀಯರು

ಪ್ರಜ್ಞಾವಂತರು ಭಾರತೀಯರು

ಮತದಾರರು ಸಾಕಷ್ಟು ಪ್ರಜ್ಞಾವಂತರಾಗಿದ್ದಾರೆ. ಅವರಿಗೆ ಲೋಕಸಭೆಯಲ್ಲಿ ಏನಾಗುತ್ತಿದೆ ಎಂಬುದು ಮಾತ್ರವಲ್ಲ, ರಾಜ್ಯ ಸಭೆಯಲ್ಲಿ ಏನಾಗುತ್ತಿದೆ ಎಂಬುದೂ ತಿಳಿಯುತ್ತಿದೆ. ಅವೆಲ್ಲವನ್ನೂ ಗಹನವಾಗಿ ಅವಲೋಕಿಸಿಯೇ ಅವರು ಮತ ಹಾಕಿದ್ದಾರೆ- ನರೇಂದ್ರ ಮೋದಿ

ತ್ರಿವಳಿ ತಲಾಕ್ ದಾರಿ ತಪ್ಪಿಸಬೇಡಿ: ಕಾಂಗ್ರೆಸ್ ಗೆ ಮೋದಿ ಎಚ್ಚರಿಕೆ

ಭಾರತಕ್ಕೆ ಬೇಕಿರುವುದು ಆಯುಷ್ಮಾನ್ ಭಾರತ

ಭಾರತಕ್ಕೆ ಬೇಕಿರುವುದು ಆಯುಷ್ಮಾನ್ ಭಾರತ

ಬಿಹಾರದಲ್ಲಿ ಮೆದುಳು ಜ್ವರ(Acute Encephalitis Syndrome)ಕ್ಕೆ ತುತ್ತಾಗಿ ನೂರಾರು ಮಕ್ಕಳು ಮೃತರಾಗಿದ್ದು ದುರದೃಷ್ಟಕರ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಾನು ಅಲ್ಲಿನ ರಾಜ್ಯ ಸರ್ಕಾರದೊಂದಿಗೆ ನಿರಂತರವಾಗಿ ಸಮಪರ್ಕದಲ್ಲಿದ್ದೇನೆ. ನಾವು ಆದಷ್ಟು ಬೇಗ ಈ ಸಮಸ್ಯೆಯಿಂದ ಆಚೆ ಬರುತ್ತೇವೆ. ಈ ಸಂದರ್ಭದಲ್ಲಿ ದೇಶಕ್ಕೆ ಬೇಕಾಗಿರುವುದು ಆಯುಷ್ಮಾನ್ ಭಾರತ. ನಮ್ಮ ಬಡವರು ಉತ್ತಮ ಆರೋಗ್ಯ, ಮತ್ತು ಗುಣಮಟ್ಟದ ಚಿಕಿತ್ಸೆ ಪಡೆಯುವಂತಾಗಬೇಕು- ನರೇಂದ್ರ ಮೋದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
PM Narendra Modi in Rajya Sabha attacks Congress, said, My friends in the Congress have not been able to digest victory, they have not been able to accept defeat. This is not a healthy sign in a democracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more