ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪಂಚ ಸವಾಲಿಗೆ ಪ್ರಧಾನಿ ಮೋದಿಯ ಉತ್ತರವೇನು?

By Srinath
|
Google Oneindia Kannada News

ನವದೆಹಲಿ, ಮೇ 17: ಅಭೂತಪೂರ್ವ ಜಯದೊಂದಿಗೆ ಇನ್ನೇನು ಪ್ರಧಾನಿ ಪಟ್ಟ ಅಲಂಕರಿಸಲಿರುವ ನರೇಂದ್ರ ಮೋದಿ ಅವರೆದುರಿಗೆ ಹಿಮಾಲಯದಂತೆ ಸಮಸ್ಯೆಗಳು ಬೃಹದಾಕಾರವಾಗಿವೆ. ಆದರೆ ತಕ್ಷಣಕ್ಕೆ ಅವರು ಕೆಲವು ಸೂಕ್ಷ್ಮ ಮತ್ತು ಅತ್ಯಗತ್ಯ ವಿಷಯಗಳತ್ತ ಗಮಹರಿಸಲೇಬೇಕಿದೆ. ಅದರಲ್ಲೂ ಜನಸಾಮಾನ್ಯರನ್ನು ನೇರವಾಗಿ ಕಾಡುವ ಸಮಸ್ಯೆಗಳಿಗೆ ಆದ್ಯತೆ ಕೊಟ್ಟು ಅದಕ್ಕೆಲ್ಲಾ ಒಂದು ಪರಿಹಾರ ನೀಡಬೇಕಿದೆ.

ಚುನಾವಣೆ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದಂತೆ ಮೋದಿ ಸರಕಾರ್ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಎಕ್ ಭಾರತ್, ಶ್ರೇಷ್ಠ್ ಭಾರತ್ -ಸಬ್ ಕಾ ಸಾತ್ ಸಬ್ ಕಾ ವಿಕಾಸ್ (ಒಂದು ಭಾರತ, ಶ್ರೇಷ್ಠ ಭಾರತ - ಐಕ್ಯತೆ ಮತ್ತು ಅಭಿವೃದ್ಧಿ ಸಮಸ್ತರಿಗೂ) ಎಂಬ ಧ್ಯೇಯ ವಾಕ್ಯದೊಂದಿಗೆ ಮೋದಿ ಮುನ್ನಡೆಯಬೇಕಿದೆ. ಈ ಸಂದರ್ಭದಲ್ಲಿ, ತಕ್ಷಣಕ್ಕೆ ಮೋದಿ ಎದುರು ಇರುವ ಪಂಚ ಸವಾಲುಗಳನ್ನು ಪಟ್ಟಿ ಮಾಡುವುದಾದರೆ ಅವು ಹೀಗಿವೆ:

ಪ್ರಧಾನಿ ಮೋದಿ ಮುಂದಿರುವ ಸವಾಲು ಬೆಲೆ ನಿಯಂತ್ರಣ

ಪ್ರಧಾನಿ ಮೋದಿ ಮುಂದಿರುವ ಸವಾಲು ಬೆಲೆ ನಿಯಂತ್ರಣ

ಗಗನದಲ್ಲಿರುವ ಬೆಲೆಗಳನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾಡಬೇಕು. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತಿರುವ ಹಣದುಬ್ಬರದ ಭೂತವನ್ನು ನಿವಾಳಿಸಿ ಓಡಿಸಬೇಕಿದೆ. ಬಹುಮುಖ್ಯವಾಗಿ ಮೊದಲು ದಿನಸಿ ಪದಾರ್ಥ ಮತ್ತು ತರಕಾರಿ ಬೆಲೆಗಳನ್ನು ಕಡಿಮೆ ಮಾಡಿಬಿಟ್ಟರೆ ಸಾಕು, ಜನರಿಗೆ ಮೋದಿ ಮಹದುಪಕಾರ ಮಾಡಿದಂತಾಗುತ್ತದೆ.

ಭಗವಂತನೇ ಇಳಿದುಬಂದರೂ ಏರಿಹೋಗಿರುವ ಬೆಲೆಗಳನ್ನು ನಿಯಂತ್ರಿಸಲಾಗದು ಎಂದು ಹೇಳದೆ ಸರಿಯಾದ ನಿಯಂತ್ರಣ ಕ್ರಮಗಳು, ನೀತಿಗಳನ್ನು ರೂಪಿಸಬೇಕಿದೆ. ಮಧ್ಯವರ್ತಿಗಳ ಹಾವಳಿಯನ್ನು ನಿರ್ಮೂಲನ ಮಾಡಬೇಕಿದೆ. ಈ ಮಧ್ಯವರ್ತಿಗಳನ್ನು ದೂರವಿಟ್ಟರೆ ಅರ್ಧಕ್ಕರ್ಧ ಬೆಲೆಗಳು ತಗ್ಗುತ್ತವೆ, ಅಲ್ವಾ?

ಪಾರ್ಶ್ವವಾಯು ಪೀಡಿತ ನೀತಿಗಳಿಗೆ ತುರ್ತು ಚಿಕಿತ್ಸೆ

ಪಾರ್ಶ್ವವಾಯು ಪೀಡಿತ ನೀತಿಗಳಿಗೆ ತುರ್ತು ಚಿಕಿತ್ಸೆ

ಭ್ರಷ್ಟ್ರಾಚಾರ/ ಅನಾಚಾರಗಳನ್ನು ಪೋಷಿಸುವಂತಹ ಅನಗತ್ಯ ನೀತಿ ನಿಯಮಗಳನ್ನು ಮೊದಲು ಕಿತ್ತೊಗೆಯಬೇಕು. ಪಾರ್ಶ್ವವಾಯು ಪೀಡಿತ ನೀತಿಗಳಿಗೆ ತುರ್ತು ಚಿಕಿತ್ಸೆ ನೀಡಬೇಕು. ನೀತಿ ನಿಯಮಗಳನ್ನು ಸರಿ ದಾರಿಗೆ ತಂದರೆ ದೇಶದ ಆರ್ಥಿಕತೆಯು ತನ್ನಷ್ಟಕ್ಕೆ ತಾನೇ ಪ್ರಗತಿ ಪಥದಲ್ಲಿ ಸಾಗಬಲ್ಲದು.
ಖಡಕ್ ನಾಯಕನ ಕೈಯಲ್ಲಿ ಚುಕ್ಕಾಣಿಯಿದೆಯೆಂದರೆ ಇವೆಲ್ಲಾ ಸರಿಹೋಗುತ್ತದೆ. ಮೋದಿಗೆ ಅಂತಹ ಎಲ್ಲ ಸದವಾಕಾಶಗಳೂ ಪ್ರಾಪ್ತಿಯಾಗಿವೆ. ಅವರಿನ್ನು ನೇರವಾಗಿ ಕೆಲಸ ಮಾಡಲು ಪ್ರಾರಂಭಿಸಬೇಕಷ್ಟೇ.

ಪ್ರಧಾನಿ ಮೋದಿ: ತೆರಿಗೆ ಸುಧಾರಣೆಗಳು ಅತ್ಯಗತ್ಯ

ಪ್ರಧಾನಿ ಮೋದಿ: ತೆರಿಗೆ ಸುಧಾರಣೆಗಳು ಅತ್ಯಗತ್ಯ

ಯಾವುದೇ ರಾಷ್ಟ್ರದ ನಾಗರೀಕರನ್ನು ತೀವ್ರವಾಗಿ ಬಾಧಿಸುವ ವಿಚಾರವೆಂದರೆ ತೆರಿಗೆಗಳು. ಜನಸಾಮಾನ್ಯರಿಗೆ ಸುಖಾಸುಮ್ಮನೆ ಗೊಣಗಿಕೊಂಡು ತೆರಿಗೆಗಳನ್ನು ಕಟ್ಟುವುದಷ್ಟೇ ಗೊತ್ತು. ಆದರೆ ಅದರ ಫಲಾನುಭವಿಗಳು ಅಧಿಕಾರಿಗಳು ಮತ್ತು ರಾಜಕಾರಣಿಗಳು ಎಂಬ ಭಾವ ನಮ್ಮ ದೇಶದಲ್ಲಿ ತಳವೂರಿದೆ. ಮೊದಲು ಇದನ್ನು ಕಿತ್ತೊಗೆಯಬೇಕು. ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಬೇಕು. ಅಂದರೆ ತೆರಿಗೆ ಸರಪಳಿಯನ್ನು ಗಟ್ಟಿಗೊಳಿಸಿದರೆ ಅಂದರೆ ಎಲ್ಲೂ ಸೋರಿಕೆಗೆ/ ಕರ್ತವ್ಯ ವಿಮುಖತೆಗೆ ಅವಕಾಶ ನೀಡದಿದ್ದರೆ ವ್ಯವಸ್ಥೆ ಸರಿಹೋಗುತ್ತದೆ.

ಕಪ್ಪುಹಣ ವಾಪಸಾತಿ: ಪ್ರಧಾನಿ ಮೋದಿ ಮುಂದಿರುವ ಸವಾಲು

ಕಪ್ಪುಹಣ ವಾಪಸಾತಿ: ಪ್ರಧಾನಿ ಮೋದಿ ಮುಂದಿರುವ ಸವಾಲು

ಬಿಜೆಪಿ ಪಕ್ಷಕ್ಕೆ ನಿಜವಾದ ಸವಾಲು ಇರುವುದು ಇಲ್ಲಿ. ಕಪ್ಪುಹಣ ವಾಪಸಾತಿ ಅಜೆಂಡಾವನ್ನು ಪಾಲಿಸಿಕೊಂಡು ಬಂದಿರುವ ಬಿಜೆಪಿ ಈಗ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ್ದು ಅತ್ಯಗತ್ಯವಾಗಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಮೂರೇ ದಿನಕ್ಕೆ ಕಪ್ಪುಹಣವನ್ನು ವಾಪಸ್ ತರುತ್ತೇವೆ ಎಂಬಂತೆ ಮಾತನಾಡುತ್ತಿದ್ದ ಬಿಜೆಪಿ ನಾಯಕರು ಈಗ ತಾವು ಕೊಟ್ಟ ಮಾತನ್ನು ಪೂರೈಸಬೇಕಿದೆ. ಮೇಲಿನ ತೆರಿಗೆ ಸಮಸ್ಯೆಗಳು ನಿವಾರಣೆಯಾಗಬೇಕು ಅಂದರೆ ಈ ಕಪ್ಪುಹಣಕ್ಕೆ ಕಡಿವಾಣ ಹಾಕಬೇಕಿದೆ.
ಇನ್ನೂ ಮುಖ್ಯವಾದ ಸಂಗತಿಯೆಂದರೆ ಈಗಾಗಲೇ ಸ್ವಿಸ್ ಬ್ಯಾಂಕುಗಳಲ್ಲಿ ಶೇಖರಣೆಯಾಗಿರುವ ಕಪ್ಪು ಹಣ ವಾಪಸ್ ತರುವುದು ದುಸ್ಸಾಧ್ಯ ಎನಿಸಿದಲ್ಲಿ ಇನ್ನು ಮುಂದೆಯಾದರೂ ಒಂದೇ ಒಂದು ರೂಪಾಯಿ ಕಾಳಧನವಾಗಿ ದೇಶದಿಂದ ಹೋರಹೋಗದಂತೆ ನೋಡಿಕೊಳ್ಳುವ ಸಾಹಸವನ್ನು ಮೋದಿ ಸರಕಾರ ನಿಭಾಯಿಸಬೇಕಿದೆ.

ಉದ್ಯಮ ಪೋಷಣೆ, ತನ್ಮೂಲಕ ಉದ್ಯೋಗ ಸೃಷ್ಟಿ

ಉದ್ಯಮ ಪೋಷಣೆ, ತನ್ಮೂಲಕ ಉದ್ಯೋಗ ಸೃಷ್ಟಿ

ಅದೇನೋ ಗುಜರಾತಿನಲ್ಲಿ ಉದ್ಯಮರಂಗ ಸುಭದ್ರ ಸ್ಥಿತಿಯಲ್ಲಿದೆ/ನಾಗಾಲೋಟದಲ್ಲಿ ಎಂದೆಲ್ಲಾ ಹೇಳಲಾಗುತ್ತಿದೆ. ಅದೇ ಮಾರ್ಗದಲ್ಲಿ ಮುಂದುವರಿದು ಇಡೀ ದೇಶದಲ್ಲಿ ಉದ್ಯಮಗಳನ್ನು ಪೋಷಿಸುವುದು ತನ್ಮೂಲಕ ಉದ್ಯೋಗ ಸೃಷ್ಟಿಸುವ ಜರೂರತ್ತು ಬಹಳಷ್ಟಿದೆ. ಮೋದಿ ಸರಕಾರ ಇಷ್ಟು ಮಾಡಿದರೆ ಸಾಕು, ಅಲ್ವಾ.

English summary
Lok Sabha election 2014 Results- Narendra Modi as Prime Minister top 5 promises to fulfill. Here are the top 5 promises that Modi government should fulfill at the earliest: 1. Tackling price rise 2. Ending policy paralysis 3. Tax Reform 4. Bringing back black money and 5. Bringing back black money
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X