2015ರಿಂದ ಚೀನಾ ನಡೆಸಿರುವ ಆಕ್ರಮಣದ ಕುರಿತು ಪ್ರಶ್ನೆ ಕೇಳಲಿ: ಚಿದಂಬರಂ
ನವದೆಹಲಿ, ಜೂನ್ 23: ಚೀನಾವು 2015ರಿಂದ ಇಲ್ಲಿಯವರೆಗೆ 2,264 ಬಾರಿ ಆಕ್ರಮಣ ನಡೆಸಿದೆ. ಈ ಕುರಿತು ಮೋದಿಯವರನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
2015ರಿಂದ ಚೀನಾ ಭಾರತದ ಮೇಲೆ 2,264 ಬಾರಿ ಆಕ್ರಮಣ ನಡೆಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಸಾಹಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕೈ ಹಾಕಿಲ್ಲ.
ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು
ಈ ಹಿಂದೆ 2010 ಮತ್ತು 2013ರಲ್ಲಿ ಚೀನಾ ಭಾರತದ ಮೇಲೆ ದಾಳಿ ನಡೆಸಿದಾಗ ಯುಪಿಎ ಸರ್ಕಾರ ಏನು ಮಾಡಿತ್ತು ಎಂದು ಜೆಪಿ ನಡ್ಡಾ ಸರಣಿ ಟ್ವೀಟ್ ಮಾಡಿ, ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಚಿದಂಬರಂ ಪ್ರತಿಕ್ರಿಯಿಸಿ ಖಡಕ್ ಪ್ರಶ್ನೆಯನ್ನು ಬಿಜೆಪಿಯ ಮುಂದಿಟ್ಟಿದ್ದಾರೆ.ಯುಪಿಎ ಸರ್ಕಾರವಿದ್ದಾಗ ಚೀನಾ ದಾಳಿ ನಡೆಸಿತ್ತು. ಆದರೆ ಆಗ ಭಾರತದ ಯಾವುದೇ ಭೂಪ್ರದೇಶವನ್ನು ವಶಕ್ಕೆ ಪಡೆಯುವಲ್ಲಿ ಚೀನಾ ಸಫಲವಾಗಿಲ್ಲ, ಅಲ್ಲದೇ ಯಾವುದೇ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿಲ್ಲ ಎಂದು ವಿವರಿಸಿದ್ದಾರೆ.
ಇದೇ ಪ್ರಶ್ನೆಯನ್ನು ಜೆಪಿ ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಬೇಕು. ಆದರೆ ಮೋದಿ ಅವರನ್ನು ಪಶ್ನಿಸುವ ಸಾಹಸಕ್ಕೆ ಜೆಪಿ ನಡ್ಡಾ ಹೋಗಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.