ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಘಲ್ ಉದ್ಯಾನಕ್ಕೆ ಫೆ.6 ರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ

|
Google Oneindia Kannada News

Recommended Video

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ 'ಉದ್ಯಾನೋತ್ಸವ' ಅನಾವರಣ

ನವದೆಹಲಿ, ಫೆಬ್ರವರಿ 05: ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಫೆಬ್ರವರಿ 6 ರಿಂದ ಮಾರ್ಚ್ 9 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ಉದ್ಯಾನದಲ್ಲಿ ಕಾಲ ಕಳೆಯಬಹುದು. ನಿರ್ವಹಣೆಗಾಗಿ ಸೋಮವಾರ ಉದ್ಯಾನದ ಬಾಗಿಲು ಮುಚ್ಚಿರಲಿದೆ.

ಫೆ.6 ರಂದು ರಾಷ್ಟ್ರಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟನೆ ಮಾಡಲಿದ್ದು, ಸಾರ್ವಜನಿಕರು ಪ್ರವೇಶ ಮಾಡಬಹುದು. ಹಾಗೆಯೇ ಅದೇ ಗೇಟ್ ಮೂಲಕವೇ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಉದ್ಯಾನದಲ್ಲಿ ಸುಂದರವಾದ ಹುಲ್ಲು, ಆಧ್ಯಾತ್ಮಿಕ ಉದ್ಯಾನ, ಗಿಡಮೂಲಿಕೆಯ ಗಾರ್ಡನ್ ಹಾಗೂ ಸಂಗೀತ ಉದ್ಯಾನವಿದೆ. ನೀರಿನ ಬಾಟಲಿ, ಕ್ಯಾಮರಾ, ರೇಡಿಯೋ, ಬ್ಯಾಗ್, ತಿಂಡಿ ಸೇರಿದಂತೆ ಯಾವುದೇ ವಸ್ತುಗಳನ್ನು ಉದ್ಯಾನಕ್ಕೆ ತರುವಂತಿಲ್ಲ. ಶೌಚಾಲಯ, ಪ್ರಥಮ ಚಿಕಿತ್ಸೆ , ವೈದ್ಯಕೀಯ ಸೌಲಭ್ಯವನ್ನು ಅಲ್ಲಿಯೇ ಒದಗಿಸಲಾಗುತ್ತದೆ.

Mughal Garden to open for public from Tuesday

ರಾಷ್ಟ್ರಪತಿ ಭವನದ ವೆಬ್ ಸೈಟ್ ನಲ್ಲಿ 50 ರೂ. ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಆಧಾರ್ ಕಾರ್ಡ್, ಮತದಾರರ ಚೀಟಿ ಇನ್ನಿತರೆ ವೆಬ್ ಸೈಟ್ ನಲ್ಲಿ ಕೇಳುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

English summary
The iconic Mughla garden of the Rashtrapati Bhavan will open for the public from Tuesday after President Ramnath Kovindinaugurates it on Monday.The Garden will remain open to public from February 6 to March 9 between 9.30am to 4pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X