ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮೆಟ್ರೋ ಸ್ಟೇಷನ್ ಗೆ ಸರ್ ಎಂವಿ ಹೆಸರು

By Mahesh
|
Google Oneindia Kannada News

ನವದೆಹಲಿ, ಡಿ.11: ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ, ಹೆಮ್ಮೆಯ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ದೆಹಲಿಯ ಮೆಟ್ರೋ ರೈಲು ನಿಲ್ದಾಣಕ್ಕೆ ಇಡಲಾಗುವುದು ದೆಹಲಿ ಸರ್ಕಾರ ಪ್ರಕಟಿಸಿದೆ.

ದೆಹಲಿಯಲ್ಲಿ ಒಟ್ಟು 10 ಮೆಟ್ರೋ ಸ್ಟೇಷನ್ ಗಳಿಗೆ ಮರು ನಾಮಕರಣವಾಗುತ್ತಿದೆ. ಮೋತಿಬಾಗ್‌ ಪ್ರದೇಶದಲ್ಲಿರುವ ನಿಲ್ದಾಣಕ್ಕೆ 'ಸರ್‌ಎಂ.ವಿಶ್ವೇಶ್ವರಯ್ಯ' ನಿಲ್ದಾಣ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್(ಡಿಎಂಆರ್ ಸಿ) ಅಡಿಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಮೂರು ನಿಲ್ದಾಣಗಳಾದ ತುಘಲಕಾಬಾದ್ ಹೆಸರನ್ನು ತುಘಲಕಾಬಾದ್ ಸ್ಟೇಷನ್, ಬದರ್ ಪುರ್ ನಿಲ್ದಾಣವನ್ನು ಬದರ್ ಪುರ್ ಬಾರ್ಡರ್ ಎಂದು, ಓಕ್ಲಾ ನಿಲ್ದಾಣವನ್ನು ಹರ್ಕೇಶ್ ನಗರ್ ಓಕ್ಲಾ ಎಂದು ಮರು ನಾಮಕರಣ ಮಾಡಲಾಗುತ್ತದೆ.

Moti Bagh as Sir Vishweshwaraiah Moti Bagh

ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಸಂಸದರ ನಿಯೋಗವೊಂದು ಕೇಂದ್ರದ ಸಚಿವರನ್ನು ಭೇಟಿ ಮಾಡಿ, ದೆಹಲಿಯ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡುವಂತೆ ಮನವಿ ಮಾಡಿತ್ತು. ಇದಾದ ನಂತರ ನಿಲ್ದಾಣಗಳ ಹೆಸರನ್ನು ಮರುನಾಮಕಾರಣ ಮಾಡಲು ಸರ್ಕಾರ ರಚಿಸಿದ್ದ ಸಮಿತಿ ನ.26ರಂದು ತನ್ನ ಶಿಫಾರನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಬಗ್ಗೆ ಬುಧವಾರ ತೀರ್ಮಾನ ಕೈಗೊಳ್ಳಲಾಗಿದ್ದು ಮರುನಾಮಕಾರಣಕ್ಕೆ ಅಸ್ತು ಎನ್ನಲಾಗಿದೆ.

ಚಾಲ್ತಿಯಲ್ಲಿರುವ ಮೇಲ್ಕಂಡ ಮೂರು ನಿಲ್ದಾಣಗಳಲ್ಲದೆ ಏಳು ನಿಲ್ದಾಣಗಳ ಹೆಸರುಗಳು ಇಂತಿದೆ.
* ಶಾಲಿಮಾರ್ ಪ್ಲೇಸ್(ಈಗಿನ ಹೆಸರು)->ಬದ್ಲಿ ಮೋರ್(ಬದಲಾಗುವ ಹೆಸರು)
* ಮುನ್ಸಿಪಾಲ್ ಕಾರ್ಪೋರೇಷನ್ -> ನಜಫ್ ಘರ್
* ನಜಫ್ ಘರ್ ಸ್ಟೇಷನ್-> ನಂಗ್ಲಿ
* ಘೆವ್ರಾ-> ಘೆವ್ರಾ ಮೆಟ್ರೋ ಸ್ಟೇಷನ್
* ಮೋತಿ ಬಾಗ್-> ಸರ್ ವಿಶ್ವೇಶ್ವರಯ್ಯ ಮೋತಿ ಬಾಗ್
* ಓಕ್ಲಾ(ಮೂರನೇ ಹಂತ) -> ಓಕ್ಲಾ ಎನ್ ಎಸ್ ಐಸಿ
* ಸೌಥ್ ಕ್ಯಾಂಪಸ್-> ದುರ್ಗಾಭಾಯಿ ದೇಶ್ ಮುಖ್ ಸೌಥ್ ಕ್ಯಾಂಪಸ್

English summary
Ten Delhi Metro stations, a majority of which are coming on different routes, will be renamed based on the recommendations of a committee constituted for the purpose, the Delhi government said on Wednesday. Moti Bagh as Sir Vishweshwaraiah Moti Bagh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X