ಸಿಹಿ ಸುದ್ದಿ: ನಿರೀಕ್ಷೆಯಂತೆ ಜೂನ್ 1 ರಂದೇ ಕೇರಳಕ್ಕೆ ಮಾನ್ಸೂನ್

ನವದೆಹಲಿ, ಮೇ 15: ಗುರುವಾರ ಭಾರತೀಯ ಹವಾಮಾನ ಇಲಾಖೆ ಮಾನ್ಸೂನ್‌ಗೆ ಸಂಬಂಧಿಸಿದಂತೆ ಹೊಸ ವರದಿ ಬಿಡುಗಡೆ ಮಾಡಿದ್ದು, ನಿರೀಕ್ಷೆ ಮಾಡಿದ್ದಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಅಂದರೆ ಜೂನ್ 1 ರಂದು ಮುಂಗಾರು ದೇಶ ಪ್ರವೇಶ ಮಾಡಲಿದೆ ಎಂದು ಹೇಳಿದೆ.

ಸಹಜವಾಗಿ ಮುಂಗಾರು ಮೇ ಕೊನೆವಾರ ಅಥವಾ ಜೂನ್ 1 ರಂದು ಕೇರಳ ಪ್ರವೇಶ ಮಾಡುತ್ತದೆ. ಕಳೆದ ವರ್ಷ 7 ದಿನ ತಡವಾಗಿ ಮುಂಗಾರು ಪ್ರವೇಶ ಮಾಡಿತ್ತು. ಈ ವರ್ಷ ತಡವಾಗಲಿದೆ ಎಂದು ಕಳೆದ ವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇಂದು ಹೊಸ ವರದಿ ಪ್ರಕಾರ ಮುಂಗಾರು ಜೂನ್ ಮೊದಲ ವಾರದಲ್ಲೇ ದೇಶ ಪ್ರವೇಶಿಸಲಿದೆ ಎಂದು ಹೇಳಿದೆ.

ಅಂಫಾನ್‌ ಚಂಡಮಾರುತದ ಪ್ರಭಾವದಿಂದಾಗಿ ನೈರುತ್ಯ ಮಾನ್ಸೂನ್ ಮಾರುತಗಳ ಸಹಜ ಚಲನೆಗೆ ಅಡಚಣೆ ಉಂಟಾಗಿತ್ತು. ಇದರಿಂದ ಮಾನ್ಸೂನ್ ಒಂದು ವಾರ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಈಗ ಆಂಫಾನ್ ಆರ್ಭಟ ತಗ್ಗಿದ್ದು, ಮುಂಗಾರು ಜೂನ್‌ 1 ರಂದು ಕೇರಳಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.

Monsoon Arrives Five Days Before Its Normal Predication This Year

ಉಳಿದಂತೆ ಈ ವರ್ಷ ಮುಂಗಾರು ಸಾಮಾನ್ಯವಾಗಿರಲಿದೆ. ಅಲ್ಲದೇ ಜೂನ್ ಜುಲೈ ಅವಧಿಗಿಂತ ಆಗಸ್ಟ್ ಸೆಪ್ಟೆಂಬರ ಮಳೆ ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+