ಶತ್ರು ಯಾರೆಂದು ತಿಳಿದಾಗ ಯುದ್ಧ ಮಾಡುವುದು ಸುಲಭ: ಮೋದಿ

ನವದೆಹಲಿ, ಡಿಸೆಂಬರ್ 12: ಶತ್ರು ಅಪರಿಚಿತರಾಗಿದ್ದಾಗ ಅವರ ವಿರುದ್ಧ ಹೋರಾಡುವುದು ಕಷ್ಟ ಆದರೆ ಶತ್ರು ಯಾರೆಂದು ತಿಳಿದ ಬಳಿಕ ಯುದ್ಧ ಸುಲಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎಫ್‌ಐಸಿಸಿಐ 93ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಇದೀಗ ನಮಗಿರುವ ಶತ್ರು ಕೊರೊನಾ ಎಂದು ಗೊತ್ತಾಗಿದೆ. ಅದಕ್ಕೆ ಶೀಘ್ರ ಲಸಿಕೆಯೂ ದೊರೆಯಲಿದೆ. ನಮ್ಮ ದೇಶದ ಸ್ಥಿತಿ ಮೊದಲಿನಂತಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕೊರೊನಾ ಸೋಂಕು ಆರಂಭವಾದಾಗ ನಾವು ಅಪರಿಚಿತ ಶತ್ರುಗಳ ಜತೆಗೆ ಹೋರಾಡುತ್ತಿದ್ದೆವು. ಸಾಕಷ್ಟು ಅನಿಶ್ಚಿತತೆಗಳು ಇದ್ದವು. ಅದು ಉತ್ಪಾದನೆ, ಲಾಜಿಸ್ಟಿಕ್ಸ್, ಆರ್ಥಿಕತೆಯ ಪುನರುಜ್ಜೀವನ ಅನೇಕ ಸಮಸ್ಯೆಗಳಿವೆ. ಇದು ಎಷ್ಟು ದಿನಗಳ ಸಮಸ್ಯೆ, ಸುಧಾರಣೆ ಹೇಗೆ ಎನ್ನುವುದು ಪ್ರಸ್ತುತ ಸಮಸ್ಯೆಯಾಗಿದೆ.

Modi Says When The Pandemic Began We Were Fighting Against An Unknown Enemy

ದೇಶದ ಈಗಿರುವ ಪರಿಸ್ಥಿತಿ ಅತಿ ಶೀಘ್ರವಾಗಿ ಸುಧಾರಿಸುತ್ತದೆ ಎನ್ನುವ ನಂಬಿಕೆ ನನಗಿದೆ.ಭಾರತವು 2020ರಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಕೆಲವು ವರ್ಷಗಳ ನಂತರ ನಾವು ಕೊರೊನಾ ಅವಧಿಯ ಬಗ್ಗೆ ಯೋಚಿಸಿದಾಗ ಬಹುಶಃ ನಾವು ಅದನ್ನು ನಂಬಲು ಸಾಧ್ಯವಾಗುವುದಿಲ್ಲ. ಎಲ್ಲಾ ಪರಿಸ್ಥಿತಿಯು ಶೀಘ್ರವಾಗಿ ಸುಧಾರಿಸುತ್ತಿದೆ.

ಡಿಸೆಂಬರ್ ವೇಳೆಗೆ ಪರಿಸ್ಥಿತಿ ಬದಲಾಗಿದೆ. ನಮ್ಮಲ್ಲಿ ಉತ್ತರಗಳು ಹಾಗೂ ಮಾರ್ಗಸೂಚಿಗಳಿವೆ. ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರವು ಕಲಿತ ವಿಷಯಗಳು ಭವಿಷ್ಯದ ನಿರ್ಣಯವನ್ನು ಮತ್ತಷ್ಟು ಬಲಪಡಿಸಲಿದೆ.

ಕಳೆದ ಆರು ವರ್ಷಗಳಲ್ಲಿ ಜಗತ್ತು ಭಾರತದ ಮೇಲೆ ಇಟ್ಟಿರುವ ನಂಬಿಕೆ ಕೆಲವೇ ತಿಂಗಳುಗಳಲ್ಲಿ ಮತ್ತಷ್ಟು ಬಲಗೊಂಡಿದೆ. ವಿದೇಶಿ ಹೂಡಿಕೆದಾರರು ಭಾರತದಲ್ಲಿ ದಾಖಲೆಯ ಹೂಡಿಕೆ ಮಾಡಿದ್ದಾರೆ ಎಂದರು.

ಆತ್ಮ ನಿರ್ಭರ ಭಾರತ ಪ್ರತಿ ವಲಯದಲ್ಲೂ ದಕ್ಷತೆಯನ್ನು ಉತ್ತೇಜಿಸುತ್ತದೆ. ಭಾರತವು ದೀರ್ಘಕಾಲೀನ ಸ್ಪರ್ಧಾತ್ಮಕ ಪ್ರಯೋಜನವನ್ನು ಹೊಂದಿರುವ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಪುನಃ ಶಕ್ತಿಯುತಗೊಳಿಸಲು ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+