ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವಕ್ಕೆ ಬನ್ನಿ: ಒಬಾಮಾಗೆ ಮೋದಿ ಆಹ್ವಾನ

By Kiran B Hegde
|
Google Oneindia Kannada News

ನವ ದೆಹಲಿ, ನ. 21: ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಈ ವರ್ಷ ಭಾರತ ಸರ್ಕಾರದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಆಹ್ವಾನ ನೀಡಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, "ಈ ಬಾರಿ ಗಣರಾಜ್ಯೋತ್ಸವಕ್ಕೆ ಬರಾಕ್ ಒಬಾಮಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಹೀಗಾದಲ್ಲಿ ಭಾರತದ ಗಣರಾಜ್ಯೋತ್ಸವಕ್ಕೆ ಅಮೆರಿಕದ ಅಧ್ಯಕ್ಷರು ಪ್ರಥಮ ಬಾರಿಗೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಂತಾಗುತ್ತದೆ" ಎಂದು ತಿಳಿಸಿದ್ದಾರೆ. [ಅಮೆರಿಕದಲ್ಲಿ ಮೋದಿಗೆ ಅದ್ದೂರಿ ಸ್ವಾಗತ]

obama

ಅಮೆರಿಕ ಜೊತೆ ಬಾಂಧವ್ಯ ವೃದ್ಧಿ: ಈ ಬಾರಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಬರಾಕ್ ಒಬಾಮಾ ಜೊತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕದ ನಡುವಣ ಸಂಬಂಧ ಹೆಚ್ಚು ಭದ್ರವಾಗುತ್ತಿದೆ. ಆದ್ದರಿಂದ ಭಾರತಕ್ಕೆ ಒಬಾಮಾ ಅತ್ಯಂತ ಪ್ರಾಮುಖ್ಯತೆ ನೀಡಲಿದ್ದಾರೆಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. [ಅಮೆರಿಕದಲ್ಲಿ ಮೋದಿ ಆ ದಿನಗಳು]

ಈ ಬಾರಿ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ, ಭಾರತವನ್ನು ಇತರ ರಾಷ್ಟ್ರಗಳು ಹೊಸ ಭರವಸೆ ಹಾಗೂ ಗೌರವದಿಂದ ನೋಡುತ್ತಿರುವುದು ನನಗೆ ಕಂಡುಬಂತು ಎಂದು ಬ್ಲಾಗ್‌ನಲ್ಲಿ ಬರೆದಿರುವುದನ್ನು ಪರಿಗಣಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X