ಅಜಾದ್ ಹಿಂದ್ ಸರ್ಕಾರದ ವಜ್ರ ಮಹೋತ್ಸವದಲ್ಲಿ ಮೋದಿ ಭಾಷಣ
ನವದೆಹಲಿ, ಅಕ್ಟೋಬರ್ 21: ಸ್ವಾತಂತ್ರ್ಯ ಸೇನಾನಿ, ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ನಮ್ಮ ಸ್ವಾತಂತ್ರ್ಯಕ್ಕಾಗಿ ಅಂದು ಕಂಡ ಕನಸು ನನಸಾಗಿಸಬೇಕಿದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು
ಆಜಾದ್ ಹಿಂದ್ ಫೌಜ್ನ ತಾತ್ಕಾಲಿಕ ಸರ್ಕಾರದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾನುವಾರದಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಆಜಾದ್ ಹಿಂದ್ ಫೌಜ್ ನೀಡಿದ ಸೇವೆ, ಕೊಡುಗೆಗಳನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

'ದೇಶ ಸೇವೆ ಸಲ್ಲಿಸಿದವರನ್ನು ಬಿಜೆಪಿ ಗೌರವಿಸುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ಕಡೆಗಣಿಸಲಾದ ದೇಶದ ಮಹಾನ್ ನಾಯಕರ ಕೊಡುಗೆಗಳನ್ನು ನಮ್ಮ ಸರ್ಕಾರ ಸಂಭ್ರಮಿಸುತ್ತದೆ' ಎಂದು ಮೋದಿ ಹೇಳಿದರು.
ಅಂಬೇಡ್ಕರ್, ವಲ್ಲಭಭಾಯಿ ಪಟೇಲ್ ಅವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Addressing a programme marking 75 years of the establishment of the Azad Hind Government. https://t.co/B2gmDL8dWt
— Narendra Modi (@narendramodi) October 21, 2018
1943ರ ಅ.21ರಂದು ದೇಶದ ಮೊದಲ ಸ್ವತಂತ್ರ ಸರ್ಕಾರ ರಚನೆಯನ್ನು ಬೋಸ್ ಘೋಷಿಸಿದ್ದರು. ಇದನ್ನು ಆಜಾದ್ ಹಿಂದ್ ಗವರ್ನ್ವೆುಂಟ್ ಎಂದು ಕರೆದಿದ್ದರು. ಈಗ ಈ ಸರ್ಕಾರದ 75ನೇ ವರ್ಷಾಚರಣೆ ಸಂಭ್ರಮ ಆಚರಿಸಲಾಗುತ್ತಿದೆ.












Click it and Unblock the Notifications