ದೆಹಲಿ ಪ್ರಚಾರ ಅಖಾಡದಲ್ಲಿ ನರೇಂದ್ರ ಮೋದಿ ವಾಗ್ಝರಿ

ನವದೆಹಲಿ, ಫೆ. 3: ವಿಧಾನಸಭೆ ಚುನಾವಣೆ ರಂಗೇರುತ್ತಿದ್ದಂತೆ ಪ್ರಧಾನಿ ಮೋದಿ ಸ್ವತಃ ಪ್ರಚಾರ ಆಖಾಡಕ್ಕೆ ಇಳಿದಿದ್ದಾರೆ. ನಗರದ ರೋಹಿಣಿ ಮೈದಾನದಲ್ಲಿ ಮಂಗಳವಾರ ದೆಹಲಿಗರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದ್ದಾರೆ.

ಸೋಮವಾರವಷ್ಟೇ ಬಿಜೆಪಿ ತನ್ನ ದೂರದೃಷ್ಟಿ ದಾಖಲೆಯನ್ನು ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಕೂಡ ಅಭಿವೃದ್ಧಿಗಾಗಿ ತಮ್ಮದೇ 10 ಅಂಶಗಳ ಸೂತ್ರವನ್ನು ಬಿಡುಗಡೆ ಮಾಡಿದ್ದರು. [ಆರ್ಥಿಕ ಭದ್ರತೆಗೆ ಕಿರಣ್ ಬೇಡಿ ಸೂತ್ರ]

ಫೆ. 7ರಂದು ಚುನಾವಣೆ ನಡೆಯಲಿದ್ದು, ಇದು ನರೇಂದ್ರ ಮೋದಿ ಅವರ ಕೊನೆಯ ಪ್ರಚಾರ ರ್ಯಾಲಿಯಾಗಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹಾಗೂ ಇತರ ಮುಖಂಡರು ಸಭೆಯಲ್ಲಿದ್ದರು. [ಬುಕ್ಕಿಗಳಿಗೆ ಬಿಜೆಪಿಯೇ ನೆಚ್ಚಿನ ಕುದುರೆ]

modi

ಮೋದಿ ವಾಗ್ಝರಿಯ ಮುಖ್ಯಾಂಶಗಳು...

  • ದೆಹಲಿ ರಾಜ್ಯಕ್ಕೆ ಅನುಭವಿಗಳ ಆಡಳಿತ ಅಗತ್ಯ.
  • ನೀವು ಕಾಣುತ್ತಿರುವ ಕನಸನ್ನು ನನಸು ಮಾಡುವುದೇ ನನ್ನ ಕನಸು.
  • ನಾವಿಬ್ಬರೂ ಸೇರಿ ದೆಹಲಿಯನ್ನು ಹೊಸ ಎತ್ತರಕ್ಕೆ ಒಯ್ಯೋಣ.
  • ನಿಮ್ಮ ಕಷ್ಟಗಳನ್ನು ನಿವಾರಿಸುವುದು ನನ್ನ ಹೊಣೆ.
  • ಕಾಂಗ್ರೆಸ್ 15 ವರ್ಷಗಳನ್ನು ಹಾಗೂ ಆಪ್ ಒಂದು ವರ್ಷ ವ್ಯರ್ಥ ಮಾಡಿವೆ. [100ಕ್ಕೂ ಹೆಚ್ಚು ಸಿಇಓಗಳು ಬಿಜೆಪಿಗೆ]
  • ಈ 16 ವರ್ಷಗಳಲ್ಲಿ ಆಗಿರುವ ಸಮಸ್ಯೆಗಳನ್ನು ನಿವಾರಿಸುವುದು ನನ್ನ ಹೊಣೆ.
  • ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎಲ್ಲ ಏಳು ಸ್ಥಾನಗಳಲ್ಲಿ ದೆಹಲಿಗರು ಗೆಲ್ಲಿಸಿದ್ದಾರೆ.
  • ದೆಹಲಿಗೆ ಬದಲಾವಣೆ ಹಾಗೂ ಅಭಿವೃದ್ಧಿ ಬೇಕಾಗಿದೆ. ದೇಶದ ರಾಜಧಾನಿಯನ್ನು ಚೆನ್ನಾಗಿಟ್ಟುಕೊಳ್ಳುವುದು ಸಮಸ್ತ ದೇಶೀಯರ ಜವಾಬ್ದಾರಿ.
  • ಭಾರತೀಯರು ತಪ್ಪುಗಳನ್ನು ಕ್ಷಮಿಸಬಹುದು, ಆದರೆ ದ್ರೋಹವನ್ನಲ್ಲ.
  • ಆಪ್ ಮೇಲೆ ವಾಗ್ದಾಳಿ : ಸ್ವಿಸ್ ಬ್ಯಾಂಕ್ ಬ್ಯಾಂಕ್‌ನಲ್ಲಿ ಖಾತೆ ದೊಂದಿದವರ ವಿವರ ಹೊಂದಿದವರಿಗೆ ತಮ್ಮ ಹಣದ ಮೂಲವೇ ತಿಳಿದಿಲ್ಲ.
  • ಬಿಜೆಪಿ ತಂದಿರುವ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ನಾವು ಇ-ರಿಕ್ಷಾವಾಲಾಗಳ ರಕ್ಷಣೆಗಾಗಿ ಸುಗ್ರೀವಾಜ್ಞೆ ತಂದಿದ್ದೇವೆ.
  • ಇಂದು ಮಾಧ್ಯಮಗಳು ಕೂಡ 'ತಾಯಿ-ಮಗ'ನ ಪ್ರಚಾರಕ್ಕೆ ಬೆಲೆ ನೀಡುತ್ತಿಲ್ಲ. ಇನ್ನು ನಾವು ಟೀಕಿಸುವ ಅಗತ್ಯವೇ ಇಲ್ಲ.
  • ಅನಧಿಕೃತ ಬಡಾವಣೆಗಳ ಹೆಸರಲ್ಲಿ ಬಡವರನ್ನು ಲೂಟಿ ಮಾಡಲಾಗಿದೆ. ನಾವು ಈ ಬಡಾವಣೆಗಳನ್ನು ಅಧಿಕೃತಗೊಳಿಸುತ್ತೇವೆ.
  • ಹೊಸ ಭೂ ಸ್ವಾಧೀನ ಕಾಯ್ದೆಯನ್ನು ಗ್ರಾಮಗಳ ಅಭಿವೃದ್ಧಿಗಾಗಿ ತರಲಾಗಿದೆ. ಶ್ರೀಮಂತರಿಗಾಗಿ ಅಲ್ಲ. [ಆಪ್ ನಿಂದ 70 ಅಂಶಗಳ ಪ್ರಣಾಳಿಕೆ]
  • ದೆಹಲಿಯಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಬೇಕೇ? ರಾಜಧಾನಿಯಲ್ಲಿ ಜನರೇಟರ್ ಬದಲಿಗೆ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ನೋಡಬೇಕೇ?
  • ದೇಶದ ಎಲ್ಲ ಬಡವರಲ್ಲಿಯೂ 2022ರೊಳಗೆ ಸ್ವಂತ ಮನೆ ಇರಲಿದೆ.
  • ದೆಹಲಿಯಲ್ಲಿ ಸಶಕ್ತ ಹಾಗೂ ಸುಭದ್ರ ಸರ್ಕಾರ ನೀಡಬಲ್ಲ ಪಕ್ಷಕ್ಕೆ ಮತ ಹಾಕಿ.
  • ಕೆಲವರು ದರ ಏರಿಕೆ ಕುರಿತು ಪ್ರಶ್ನಿಸುತ್ತಾರೆ. ಅವರಿಗೆ ನನ್ನ ಉತ್ತರ 2014ರ ಜನವರಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1,240 ರು. ಆಗಿತ್ತು. ಆದರೆ, 2015ರ ಜನವರಿಯಲ್ಲಿ ಈ ಬೆಲೆ 605 ರು.ಗಳಿಗೆ ಇಳಿದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+