Mechatronics Engineering: ಭಾರತದಲ್ಲಿ ಮೆಕಾಟ್ರಾನಿಕ್ಸ್ ಓದಲು ಬಯಸುತ್ತಿದ್ದವರಿಗೆ ಇಲ್ಲಿದೆ ಟಾಪ್ 10 ಕಾಲೇಜುಗಳ ಪಟ್ಟಿ

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕೋರ್ಸ್ ಬಿಟ್ಟು, ಭವಿಷ್ಯಕ್ಕೆ ಉಪಯುಕ್ತವಾಗುವ ಹೊಸ ಕೋರ್ಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇದರಲ್ಲಿ 'ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್' ಕೂಡ ಒಂದು. ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ರೊಬೊಟಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ತಂತ್ರಜ್ಞಾನವನ್ನು ಒಟ್ಟಾಗಿ ಸೇರಿಸಿರುವ ಈ ಕೋರ್ಸ್, ಆಟೊಮೇಷನ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜಗತ್ತಿನಲ್ಲಿ ಬಹಳ ಬೇಡಿಕೆ ಸೃಷ್ಟಿಸಿಕೊಂಡಿದೆ.

ಭಾರತದಲ್ಲಿ ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್ ಅಧ್ಯಯನ ಮಾಡಲು ಅತ್ಯುತ್ತಮವಾದ ಟಾಪ್ 10 ಕಾಲೇಜುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Mechatronics Engineering

1. ಐಐಟಿ ದೆಹಲಿ : ಭಾರತದ ಅತ್ಯುನ್ನತ ಸಂಸ್ಥೆಗಳಲ್ಲಿ ಒಂದಾದ ದೆಹಲಿ ಐಐಟಿ 1961ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದರ ವಾರ್ಷಿಕ ಬಿ.ಟೆಕ್ ಶುಲ್ಕ ಅಂದಾಜು 13,500 ರೂ. ಇದೆ.

2. ಐಐಟಿ ಬಾಂಬೆ: 1958ರಲ್ಲಿ ಆರಂಭವಾದ ಈ ಸಂಸ್ಥೆ ತನ್ನ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಮೆಕಾಟ್ರಾನಿಕ್ಸ್ ವಿಭಾಗವು ವಿದ್ಯಾರ್ಥಿಗಳನ್ನು ಪ್ರಾಕ್ಟಿಕಲ್ ಆಗಿ ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸುತ್ತದೆ.

ಡಾಲರ್ ಎದುರು ರೂಪಾಯಿ ಕುಸಿತ: ವಿದೇಶಿ ವ್ಯಾಸಂಗ ದುಬಾರಿ, ಟಾಪ್-ಅಪ್ ಸಾಲದ ಮೊರೆ ಹೋದ ವಿದ್ಯಾರ್ಥಿಗಳು
ಡಾಲರ್ ಎದುರು ರೂಪಾಯಿ ಕುಸಿತ: ವಿದೇಶಿ ವ್ಯಾಸಂಗ ದುಬಾರಿ, ಟಾಪ್-ಅಪ್ ಸಾಲದ ಮೊರೆ ಹೋದ ವಿದ್ಯಾರ್ಥಿಗಳು

3. ಐಐಟಿ ಖರಗ್‌ಪುರ : ದೇಶದ ಅತಿ ಹಳೆಯ ಐಐಟಿಗಳಲ್ಲಿ ಒಂದಾಗಿರುವ ಇಲ್ಲಿನ ಮೆಕಾಟ್ರಾನಿಕ್ಸ್ ಪ್ರೋಗ್ರಾಂ ಹೊಸ ಆವಿಷ್ಕಾರಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಇಲ್ಲಿನ ಬಿ.ಟೆಕ್ ಶುಲ್ಕ ಕೂಡ ಸುಮಾರು 13,500 ರೂಪಾಯಿಗಳಷ್ಟಿದೆ.

4. ಐಐಟಿ ಹೈದರಾಬಾದ್: 2008ರಲ್ಲಿ ಸ್ಥಾಪನೆಯಾದರೂ, ಅತಿ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ ಇದು. ಹೊಸ ತಲೆಮಾರಿನ ರೊಬೊಟಿಕ್ಸ್ ಸಂಶೋಧನೆಗಳಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

5. ಎನ್‌ಐಟಿ ಸುರತ್ಕಲ್, ಕರ್ನಾಟಕ : ನಮ್ಮ ರಾಜ್ಯದ ಹೆಮ್ಮೆಯ ಸಂಸ್ಥೆಯಾಗಿರುವ ಎನ್‌ಐಟಿ ಸುರತ್ಕಲ್ 1960ರಲ್ಲಿ ಶುರುವಾಗಿದೆ. ಇಲ್ಲಿನ ಬಿ.ಟೆಕ್ ಶುಲ್ಕ ಸುಮಾರು 10,500 ರೂ. ಇದ್ದು, ಇದು ಇಂಡಸ್ಟ್ರಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಉತ್ತಮ ಟ್ರೈನಿಂಗ್ ನೀಡುತ್ತದೆ.

6. ವಿಐಟಿ ವೆಲ್ಲೂರು : 1984ರಲ್ಲಿ ಶುರುವಾದ ಈ ಪ್ರಸಿದ್ಧ ಖಾಸಗಿ ವಿಶ್ವವಿದ್ಯಾಲಯವು, ಅತ್ಯುತ್ತಮ ಲ್ಯಾಬ್ ವ್ಯವಸ್ಥೆ ಹಾಗೂ ಪ್ಲೇಸ್‌ಮೆಂಟ್ ಹೊಂದಿದೆ. ಇಲ್ಲಿನ ವಾರ್ಷಿಕ ಶುಲ್ಕ 1.8 ಲಕ್ಷದಿಂದ 4.5 ಲಕ್ಷ ರೂ. ವರೆಗೆ ಇರುತ್ತದೆ.

7. ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್, ಚೆನ್ನೈ: ಮೆಕಾಟ್ರಾನಿಕ್ಸ್ ಕಲಿಯಲು ತಮಿಳುನಾಡಿನ ಎಸ್‌ಆರ್‌ಎಂ ಕೂಡ ಉತ್ತಮ ಆಯ್ಕೆ. ಇಲ್ಲಿನ ವಿದ್ಯಾರ್ಥಿಗಳು ಗೂಗಲ್, ಅಮೆಜಾನ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಅತಿ ಹೆಚ್ಚು ಪ್ಯಾಕೇಜ್‌ಗೆ ಆಯ್ಕೆಯಾಗಿದ್ದಾರೆ.

8. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: ಕರ್ನಾಟಕದ ಉಡುಪಿಯಲ್ಲಿರುವ ಎಂಐಟಿ, ಗುಣಮಟ್ಟದ ಲ್ಯಾಬ್ ವ್ಯವಸ್ಥೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿದೆ.

9. ಥಾಪರ್ ಇನ್‌ಸ್ಟಿಟ್ಯೂಟ್, ಪಂಜಾಬ್ : ಪಂಜಾಬ್‌ನ ಪಟಿಯಾಲದಲ್ಲಿರುವ ಈ ಸಂಸ್ಥೆಯು, ತನ್ನ ಅತ್ಯುತ್ತಮ ಪ್ಲೇಸ್‌ಮೆಂಟ್ ಹಾಗೂ ಆಧುನಿಕ ಶಿಕ್ಷಣ ವಿಧಾನದಿಂದಾಗಿ ಹೆಚ್ಚು ಗಮನ ಸೆಳೆಯುತ್ತಿದೆ.

10. ಪುಣೆ ಇಂಜಿನಿಯರಿಂಗ್ ಕಾಲೇಜು : ಮಹಾರಾಷ್ಟ್ರದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇದೂ ಒಂದು. ಕಡಿಮೆ ಕೋರ್ಸ್ ಫೀಸ್ ಹಾಗೂ ಕಠಿಣ ಶೈಕ್ಷಣಿಕ ಗುಣಮಟ್ಟದಿಂದಾಗಿ ಈ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆಯಾಗಿದೆ.

CBSE ವೆಬ್‌ಸೈಟ್ ದೋಷ ಪತ್ತೆಹಚ್ಚಿದ್ದ 19 ವರ್ಷದ ಯುವಕನಿಗೆ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಬಂಪರ್ ಉದ್ಯೋಗ
CBSE ವೆಬ್‌ಸೈಟ್ ದೋಷ ಪತ್ತೆಹಚ್ಚಿದ್ದ 19 ವರ್ಷದ ಯುವಕನಿಗೆ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಬಂಪರ್ ಉದ್ಯೋಗ

ಮೆಕಾಟ್ರಾನಿಕ್ಸ್ ಓದುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಆಟೋಮೊಬೈಲ್, ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಂಪನಿಗಳಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ ಎಂದು ಉದ್ಯೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಪ್ರವೇಶಾತಿ ಮಾಹಿತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+