ಶೀಘ್ರವೇ ಮೊಬೈಲ್ ಕರೆ ದರ ಹೆಚ್ಚಾಗುವ ಸಾಧ್ಯತೆ

Posted By:
Subscribe to Oneindia Kannada

ನವೆಂಬರ್ ೦9, ನವದೆಹಲಿ : ಕಡಿಮೆ ಹಣಕ್ಕೆ ತಿಂಗಳ ಪೂರ್ತಿ ಇಂಟ್ ನೆಟ್ ಮತ್ತು ಉಚಿತ ಕರೆ ಪಡೆದು ಖುಷಿಯಾಗಿದ್ದ ಗ್ರಾಹಕರ ಸಂತೋಷ ಹೆಚ್ಚು ದಿನ ಉಳಿಯುವುದು ಅನುಮಾನ. ಕಳೆದ ವರ್ಷದಿಂದ ರೇಸಿಗೆ ಬಿದ್ದಂತೆ ದರ ಇಳಿಸಿದ್ದ ಮೊಬೈಲ್ ನೆಟ್ ವರ್ಕ್ ಸೇವಾ ಸಂಸ್ಥೆಗಳು, ಇದೀಗ ಬೆಲೆ ಹೆಚ್ಚಿಸುವ ಆಲೋಚನೆಯಲ್ಲಿ ತೊಡಗಿವೆ.

ಮೊಬೈಲ್ ನೆಟ್ ವರ್ಕ್ ಸಂಸ್ಥೆಗಳ ನಡುವೆ ದರ ಸಮರಕ್ಕೆ ನಾಂದಿ ಹಾಡಿದ್ದ ರಿಲಯೆನ್ಸ್ ಜಿಯೊ ಅಕ್ಟೋಬರ್ ನಲ್ಲಿ ತನ್ನ ಸೇವಾ ದರವನ್ನು 15 ರಿಂದ 20% ಏರಿಸಿರುವ ಕಾರಣ, ಉಳಿದ ಮೊಬೈಲ್ ನೆಟ್ ವರ್ಕ್ ಸಂಸ್ಥೆಗಳು ತಮ್ಮ ಸೇವಾ ದರ ಏರಿಸಲು ಮುಂದಾಗಿವೆ.

Mobile network prices are hiking, Jio hike their price on october

ಕಳೆದ ವರ್ಷ ಮೊಬೈಲ್ ನೆಟ್ ವರ್ಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಜಿಯೋ, ತನ್ನ ಅತ್ಯಂತ ಕಡಿಮೆ ದರದಿಂದಾಗಿ ಉಳಿದ ಸಣ್ಣ-ಪುಟ್ಟ ನೆಟ್ ವರ್ಕ್ ಸಂಸ್ಥೆಗಳು ಮಾರುಕಟ್ಟೆಯಿಂದ ಹೊರಬೀಳುವಂತೆ ಮಾಡಿತು. ಪ್ರಸ್ತುತ ಮೊಬೈಲ್ ನೆಟ್ ವರ್ಕ್ ಮಾರುಕಟ್ಟೆಯ ಶೇ 90% ಲಾಭ ಜಿಯೊ, ಭಾರತಿ ಏರ್ ಟೆಲ್, ವೊಡಾಫೋನ್ ಮೂರು ಸಂಸ್ಥೆಗಳಲ್ಲಿ ಮಾತ್ರವೇ ಹಂಚಿಕೆಯಾಗುತ್ತಿದೆ.

ಪ್ರಸ್ತುತ ಜಿಯೊ ನೆಟ್ ವರ್ಕ್ ಮೂರು ಪ್ಲಾನ್ ಗಳನ್ನು ನೀಡುತ್ತಿದೆ. 1) 309 (49 ದಿನಗಳಿಗೆ), 2) 399 (70 ದಿನಗಳಿಗೆ), 3) (84 ದಿನಗಳಿಗೆ) ಭಾರತಿ ಏರ್ ಟೆಲ್ ಮತ್ತು ವೊಡಾಫೊನ್, ಜಿಯೊನ ಈ ದರಗಳಿಗೆ ಸನಿಹದಲ್ಲೇ ಇದೆ. ಆದರೆ ಮುಂದೆ ಏರ್ ಟೆಲ್ ಮತ್ತು ವೊಡಾಫೋನ್ ದರಗಳನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದೆ. ಆ ಮೂಲಕ ಕಳೆದ ವರ್ಷ ಅನುಭವಿದ್ದ ನಷ್ಟವನ್ನು ಈ ವರ್ಷ ಸಮದೂಗಿಸಿಕೊಳ್ಳುವ ಚಿಂತನೆಯಲ್ಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a great fall in mobile network prices last year this year mobile network companies to hike their prices.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ