• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮದು ಸಹಮತದ ಸಂಬಂಧ: ಅತ್ಯಾಚಾರ ಆರೋಪಕ್ಕೆ ಎಂಜೆ ಅಕ್ಬರ್ ಪ್ರತಿಕ್ರಿಯೆ

|

ನವದೆಹಲಿ, ನವೆಂಬರ್ 2: ಅಮೆರಿಕ ಮೂಲಕ ಪತ್ರಕರ್ತೆ ತಮ್ಮ ವಿರುದ್ಧ ಮಾಡಿರುವ ಅತ್ಯಾಚಾರದ ಆರೋಪವನ್ನು ಕೇಂದ್ರದ ಮಾಜಿ ಸಚಿವ, ಮಾಜಿ ಪತ್ರಕರ್ತ ಎಂ.ಜೆ. ಅಕ್ಬರ್ ನಿರಾಕರಿಸಿದ್ದಾರೆ.

ತಮ್ಮಿಬ್ಬರದೂ ಸಹಮತದ ಸಂಬಂಧವಾಗಿತ್ತು. ಆದರೆ, ಅದರ ಅಂತ್ಯ ಚೆನ್ನಾಗಿರಲಿಲ್ಲ ಎಂದು ಅಕ್ಬರ್ ಹೇಳಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಸರಿ ಸುಮಾರು 23 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಅಕ್ಬರ್ ಅವರು ನನ್ನ ಬಟ್ಟೆ ಹರಿದು ಹಾಕಿ, ನನ್ನ ಮೇಲೆ ಬಲಾತ್ಕಾರ ಮಾಡಿದರು ಎಂದು ಯುಎಸ್ ಮೂಲದ ಭಾರತೀಯ ಸಂಜಾತೆ ಪತ್ರಕರ್ತೆ ಪಲ್ಲವಿ ಗೊಗೊಯ್ ಆರೋಪಿಸಿದ್ದರು.

ಎಂಜೆ ಅಕ್ಬರ್ ನನ್ನನ್ನು ರೇಪ್ ಮಾಡಿದ್ರು : ಯುಎಸ್ ಪತ್ರಕರ್ತೆ

ಪ್ರಿಯಾ ರಮಣಿ, ಸುಪರ್ಣಾ ಶರ್ಮ, ತುಷಿತಾ ಪಟೇಲ್ ಮುಂತಾದವರು ಮುಂದೆ ಬಂದು ತಮಗಾದ ನೋವನ್ನು ತೋಡಿಕೊಂಡಿದ್ದರಿಂದ ನನಗೆ ಧೈರ್ಯ ಬಂದಿದೆ. ದಶಕಗಳ ಕೆಳಗೆ ನಾನು ಅನುಭವಿಸಿದ ಹಿಂಸೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ ಎಂದು ವಾಷಿಂಗ್ಟನ್ ಪೋಸ್ಟ್ ನಲ್ಲಿ ಪತ್ರಕರ್ತೆ ಪಲ್ಲವಿ ಗೊಗೊಯ್ ತಮ್ಮ ನೋವನ್ನು ಬರೆದುಕೊಂಡಿದ್ದರು.

ಆದರೆ ಇದಕ್ಕೂ ಮುನ್ನ ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ್ದ ಹೇಳಿಕೆಯಲ್ಲಿ ಈ ಆರೋಪ ಶುದ್ಧ ಸುಳ್ಳು ಎಂದಿದ್ದರು. ಅದರಲ್ಲಿ ಅವರದು ಸಹಮತದ ಸಂಬಂಧ ಎಂಬ ಉಲ್ಲೇಖ ಮಾಡಿರಲಿಲ್ಲ.

ಸಹಮತದ ಸಂಬಂಧ

ಸಹಮತದ ಸಂಬಂಧ

1994ರಲ್ಲಿ ಪಲ್ಲವಿ ಗೊಗೊಯ್ ಮತ್ತು ನಾನು ಸಹಮತದ ಸಂಬಂಧ ಹೊಂದಿದ್ದೆವು. ಇದು ಏಳು ತಿಂಗಳವರೆಗೂ ಮುಂದುವರಿದಿತ್ತು. ಈ ಸಂಬಂಧದಲ್ಲಿ ಬಳಿಕ ಜಗಳ ಉಂಟಾಯಿತು. ನನ್ನ ಮನೆಯಲ್ಲಿಯೂ ಕಲಹಕ್ಕೆ ಕಾರಣವಾಯಿತು. ಈ ಒಪ್ಪಿತ ಸಂಬಂಧ ಅಷ್ಟೇನೂ ಒಳ್ಳೆಯದಲ್ಲದ ರೀತಿಯಲ್ಲಿ ಅಂತ್ಯವಾಯಿತು ಎಂದು ಅಕ್ಬರ್ ಹೇಳಿದ್ದಾರೆ.

ನೋಡಿದವರೇ ಇದ್ದಾರೆ

'ನನ್ನ ಜತೆ ಕೆಲಸ ಮಾಡಿದವರಿಗೆಲ್ಲರಿಗೂ ನಮ್ಮಿಬ್ಬರ ಬಗ್ಗೆ ತಿಳಿದಿತ್ತು. ಆಕೆ ಬಲವಂತದ ಕಾರಣ ಇಷ್ಟವಿಲ್ಲದೆಯೇ ಕೆಲಸ ಮಾಡುತ್ತಿದ್ದರು ಎಂಬಂತೆ ಪಲ್ಲವಿ ವರ್ತನೆ ಅವರಿಗೆ ಅನಿಸಿದ್ದರೆ ನಮ್ಮನ್ನು ಬಲ್ಲವರು ಸಂತೋಷದಿಂದ ಸಾಕ್ಷ್ಯ ನುಡಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಎಂಜೆ ಅಕ್ಬರ್ ವಿರುದ್ಧ ಹೇಳಿಕೆ ನೀಡಲು 20 ಪತ್ರಕರ್ತೆಯರು ಸಿದ್ಧ

ಪತಿ ಬೆಂಬಲಕ್ಕೆ ಮಲ್ಲಿಕಾ

ತಮ್ಮ ಪತಿಯ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಾಗಿನಿಂದ ಮೊದಲ ಬಾರಿಗೆ ಮಲ್ಲಿಕಾ ಅಕ್ಬರ್ ಅವರ ರಕ್ಷಣೆಗೆ ಬಂದಿದ್ದಾರೆ. 'ಅವರಿಬ್ಬರದೂ ಒಪ್ಪಿತ ಸಂಬಂಧ ಆಗಿತ್ತು. 20 ವರ್ಷಗಳಿಗೂ ಹಿಂದೆ ಪಲ್ಲವಿ ಗೊಗೊಯ್, ನಮ್ಮ ಮನೆಯಲ್ಲಿ ಅಸಂತೋಷ ಮತ್ತು ಕಲಹಕ್ಕೆ ಕಾರಣರಾಗಿದ್ದರು' ಎಂದು ಮಲ್ಲಿಕಾ ಆರೋಪಿಸಿದ್ದಾರೆ.

ಕುಟುಂಬಕ್ಕೆ ಮಹತ್ವ ನೀಡಿದರು

'ಆಕೆ ಮಾಡುತ್ತಿದ್ದ ತಡರಾತ್ರಿ ಕರೆಗಳ ಮೂಲಕ ಅವರ ಆ ಸಂಬಂಧದ ಬಗ್ಗೆ ನನಗೆ ತಿಳಿದಿತ್ತು. ನನ್ನ ಎದುರೇ ಬಹಿರಂಗವಾಗಿ ಅಕ್ಬರ್ ಕಡೆಗಿನ ಅವರ ಒಲವನ್ನು ಪ್ರದರ್ಶಿಸುತ್ತಿದ್ದರು. ಅದರ ವಿರುದ್ಧ ನನ್ನ ಪತಿ ಎದುರು ಜಗಳ ಮಾಡಿದ್ದಾಗ ಅವರು ಕುಟುಂಬಕ್ಕೆ ಆದ್ಯತೆ ನೀಡಿದ್ದರು ಎಂದು ಮಲ್ಲಿಕಾ ತಿಳಿಸಿದ್ದಾರೆ.

ಪಲ್ಲವಿ ಏಕೆ ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಕಾರಣ ತಿಳಿದಿಲ್ಲ. ಆದರೆ, ಅದು ಸುಳ್ಳಷ್ಟೇ ಎಂದು ಹೇಳಿದ್ದಾರೆ.

ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?

ಪಲ್ಲವಿ ಆರೋಪ ಏನು?

23 ವರ್ಷಗಳ ಹಿಂದೆ ಜೈಪುರದ ಹೋಟೆಲ್ ವೊಂದರಲ್ಲಿ ಸಂಪಾದಕ ಎಂಜೆ ಅಕ್ಬರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ನನ್ನ ಮೇಲೆ ಹಲ್ಲೆ ಮಾಡಿದ ಅಕ್ಬರ್, ನನ್ನ ಬಟ್ಟೆ ಹರಿದು ಹಾಕಿ, ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಪಲ್ಲವಿ ಗೊಗೊಯ್ ಅವರು ಆರೋಪಿಸಿದ್ದಾರೆ.

ಇದಕ್ಕೂ ಮೊದಲು ದೆಹಲಿ ಕಚೇರಿಯಲ್ಲಿ ಹಲ್ಲೆ ಮಾಡಿದ್ದರು. ಮುಂಬೈನಲ್ಲಿ ಒಮ್ಮೆ ಮುತ್ತು ನೀಡಲು ನಿರಾಕರಿಸಿದ್ದಕ್ಕೆ ನನ್ನ ಮುಖವನ್ನು ಪರಚಿದ್ದರು, ಇನ್ನೊಮ್ಮೆ ನಿರಾಕರಿಸಿದರೆ ಒದ್ದು ಹೊರಕ್ಕೆ ಹಾಕುತ್ತೇನೆ ಎಂದು ಬೆದರಿಸಿದ್ದರು ಎಂದು ಪಲ್ಲವಿ 'ದಿ ವಾಷಿಂಗ್ಟನ್ ಪೋಸ್ಟ್‌'ನಲ್ಲಿ ಬರೆದ ಲೇಖನದಲ್ಲಿ ಆರೋಪಿಸಿದ್ದಾರೆ.

ಅಕ್ಬರ್ ಪರ ವಕಾಲತ್ತು ಮಾಡುವ ಪಟ್ಟಿಯಲ್ಲಿ 97 ವಕೀಲರ ಹೆಸರು

English summary
EX Journalist MJ Akbar has denied rape accusation by Journalist Pallavi Gogoi, said that his relationship with Pallavi was consensual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X