ಗುಂಡು ತಗುಲಿ ವ್ಯಕ್ತಿ ಸಾವು: ದೆಹಲಿಯೊಂದು ದುರಂತ ಸೆಲ್ಫಿ ಕತೆ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 10: ಪಿಸ್ತೂಲ್ ಹಿಡಿದುಕೊಂಡು ಸೆಲ್ಫಿ ತೆಗೆಯಲು ಹೊರಟ ಅಪ್ರಾಪ್ತ ಬಾಲಕನೊಬ್ಬನ ಕೈಯಿಂದ ಅಚಾನಕ್ಕಾಗಿ ಹಾರಿದ ಗುಂಡು ಆತನ ಸಹೋದರ ಸಂಬಂಧಿಯನ್ನು ಸಾಯಿಸಿದ ದಾರುಣ ಘಟನೆ ದೆಹಲಿಯ ಸರಿತಾ ವಿಹಾರ್ ಎಂಬಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪಾಲಿ ಎಂಬ ಹಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಚೌಹಾಣ್ ಸಹೋದರ ಸಂಬಂಧಿಯ ಮನೆಗೆಂದು ದೆಹಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಸಂಬಂಧಿಯ 17 ವರ್ಷದ ಮಗ ತಂದೆಯ ಪಿಸ್ತೂಲ್ ಹಿಡಿದು ಸೆಲ್ಫಿಗೆ ಪೋಸು ಕೊಡುವುದಕ್ಕೆ ಮುಂದಾಗಿದ್ದ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಫೋಟೋ ಕ್ಲಿಕ್ಕಿಸುವ ಸಂದರ್ಭದಲ್ಲಿ ಕೈಯಲ್ಲಿ ಹಿಡಿದಿದ್ದ ಪಿಸ್ತೂಲಿನಿಂದ ಅಚಾನಕ್ಕಾಗಿ ಗುಂಡು ಹಾರಿದ ಪರಿಣಾಮ ಅತಿಥಿಯಾಗಿ ಬಂದಿದ್ದ ಪ್ರಶಾಂತ್ ಅವರಿಗೆ ಗುಂಡು ತಗುಲಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾರೂ, ಆಗಲೇ ಅವರು ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದರು.

Minor accidentally kills cousin with pistol while clicking pictures

ಉದ್ಯಮಿ ಪ್ರಮೋದ್ ಚೌಹಾನ್ ಅವರಿಗೆ ಸೇರಿದ ಈ ಪಿಸ್ತೂಲ್ ಗೆ ಲೈಸೆನ್ಸ್ ಇದೆ. ಆದರೆ ಇದು ಮನೆ ಮಂದಿಗೆ ಸಿಗುವಂತೆ ಇರಿಸಿದ್ದು ಮಾತ್ರ ಶೋಚನೀಯ. ಪ್ರಕರಣ ದಾಖಲಿಸಿಕೊಂದಿರುವ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, a Class 11 student accidentally shot his 23-year-old cousin while trying to take a selfie together, while posing with the pistol. The incident took place in Delhi on March 8th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ