ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಪಾಪ್ ಗಾಯಕಿ ಬೆಂಬಲ; ಗರಂ ಆದ ವಿದೇಶಾಂಗ ವ್ಯವಹಾರ ಸಚಿವಾಲಯ

|
Google Oneindia Kannada News

ನವದೆಹಲಿ, ಫೆಬ್ರುವರಿ 03: ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೆಲವು ಅಂತರಾಷ್ಟ್ರೀಯ ಕಲಾವಿದರು ಬೆಂಬಲ ಸೂಚಿಸಿದ್ದಾರೆ. ಮಂಗಳವಾರ ಖ್ಯಾತ ಪಾಪ್ ಗಾಯಕಿ ರಿಹಾನಾ ಹಾಗೂ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಅವರು ಕೂಡ ರೈತರ ಪ್ರತಿಭಟನೆಗೆ ಸಾಥ್ ನೀಡಿ ಟ್ವೀಟ್ ಮಾಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ಕುರಿತು ಚರ್ಚೆಗಳೂ ಸಾಗಿವೆ.

ಇವರ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. "ಕೆಲವು ಪಟ್ಟಭದ್ರ ಗುಂಪುಗಳಿಗೆ ಅಂತರರಾಷ್ಟ್ರೀಯ ಬೆಂಬಲವೂ ವ್ಯಕ್ತವಾಗುತ್ತಿರುವುದು ದುರದೃಷ್ಟಕರ" ಎಂದು ಹೇಳಿದೆ. ಮುಂದೆ ಓದಿ...

'ಗೇಂ ಚೇಂಜರ್' ಆಗಬಹುದಾದ ರೈತರ ಹೋರಾಟದ ಕುರಿತು ಪಾಪ್ ಸಿಂಗರ್ ರಿಹಾನಾ ನೀಡಿದ ಹೇಳಿಕೆ 'ಗೇಂ ಚೇಂಜರ್' ಆಗಬಹುದಾದ ರೈತರ ಹೋರಾಟದ ಕುರಿತು ಪಾಪ್ ಸಿಂಗರ್ ರಿಹಾನಾ ನೀಡಿದ ಹೇಳಿಕೆ

"ನಿಜಾಂಶವನ್ನು ಮೊದಲು ತಿಳಿದುಕೊಳ್ಳಿ"

ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಈ ಬಗ್ಗೆ ಟ್ವೀಟ್ ಮಾಡಿದ್ದು, "ಇಂಥ ವಿಚಾರಗಳ ಬಗ್ಗೆ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುವ ಮುನ್ನ ಯೋಚಿಸಬೇಕು. ಮೊದಲು ವಿಷಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನಿಜಾಂಶವನ್ನು ತಿಳಿದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ತಿಳಿಯದೇ ಕಮೆಂಟ್ ಗಳನ್ನು ಹಾಗೂ ಹ್ಯಾಷ್ ಟ್ಯಾಗ್ ಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

 ಕೃಷಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಂಡ ಸರ್ಕಾರ

ಕೃಷಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಂಡ ಸರ್ಕಾರ

ಈ ಸಂದರ್ಭ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಂಡಿರುವ ಸಚಿವಾಲಯ, ಕಾರ್ಯವಿಧಾನದಂತೆಯೇ ಈ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಜೊತೆಗೆ ರೈತರ ಹಿತಕ್ಕಾಗಿಯೇ ಈ ಕಾಯ್ದೆಗಳು ರೂಪುಗೊಂಡಿವೆ ಎಂದು ಸಮರ್ಥನೆ ಮಾಡಿಕೊಂಡಿದೆ.

"ಭಾರತದ ಒಂದು ಭಾಗದ ರೈತರಿಗೆ ಮಾತ್ರ ಈ ಕಾಯ್ದೆ ಬಗ್ಗೆ ವಿರೋಧವಿದೆ. ಪ್ರತಿಭಟನಾಕಾರರ ಭಾವನೆಗಳನ್ನು ಗೌರವಿಸಿ, ಸರ್ಕಾರವು ರೈತರೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ. ಆದರೆ ಇದ್ಯಾವುದೂ ಫಲ ನೀಡಿಲ್ಲ" ಎಂದು ಸಚಿವಾಲಯ ತಿಳಿಸಿದೆ.

"ಪ್ರತಿಭಟನೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೆಲಸವಿದೆ"

ಈ ವಿವಾದ ಬಗೆಹರಿಯುವವರೆಗೂ ಈ ಕಾಯ್ದೆಗಳಿಗೆ ತಡೆ ಹಿಡಿಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಆದರೂ ಪ್ರತಿಭಟನೆಯನ್ನು ಮುಂದುವರೆಸಲಾಗುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತ ಗುಂಪುಗಳು ತಮ್ಮ ಅಜೆಂಡಾಗಳನ್ನು ಈ ಪ್ರತಿಭಟನೆ ಮೂಲಕ ಪ್ರತಿಪಾದಿಸಲು ನೋಡುತ್ತಿದ್ದಾರೆ. ಪ್ರತಿಭಟನೆಯ ಹಾದಿಯೇ ತಪ್ಪಿದೆ ಎಂದು ದೂರಿದೆ.

 ರೈತರ ಪ್ರತಿಭಟನೆ ಬಗ್ಗೆ ರಿಹಾನಾ ಹೇಳಿದ್ದೇನು?

ರೈತರ ಪ್ರತಿಭಟನೆ ಬಗ್ಗೆ ರಿಹಾನಾ ಹೇಳಿದ್ದೇನು?

'ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು? ' ಎಂದು ಬರೆದುಕೊಂಡಿದ್ದ ರಿಹಾನಾ, ಸಿಎನ್ಎನ್ ಸುದ್ದಿಸಂಸ್ಥೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಮಾಡಿರುವ ವಿಸ್ತ್ರತ ವರದಿಯ ಲಿಂಕ್ ಶೇರ್ ಮಾಡಿದ್ದರು. #Rihanna ಮತ್ತು #FarmersProtest ಹ್ಯಾಶ್ ಟ್ಯಾಗ್ ಗಳು ಜಾಗತಿಕ ಟ್ರೆಂಡ್ ಆದವು. ಇದೀಗ ವಿದೇಶಾಂಗ ವ್ಯವಹಾರ ಸಚಿವಾಲಯ ಇದಕ್ಕೆ ಪ್ರತಿಕ್ರಿಯಿಸಿದೆ.

English summary
Celebrities should not rush to comment said ministry of external affairs after farmers protest goes global with Rihanna, Greta support,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X