ಮೇಟಿ ಸಿಡಿ ಆಯ್ತು, ಇನ್ನೆರಡು ಸಿಡಿ ಯಾವ ಶಾಸಕರದ್ದು ?

Posted By:
Subscribe to Oneindia Kannada

ದೆಹಲಿ, ಡಿಸೆಂಬರ್ 14: ಮೇಟಿ ರಾಸಲೀಲೆ ಪ್ರಕರಣ ಸಂಬಂಧ ಸಿಟಿ ಬಿಡುಗಡೆ ಮಾಡಿರುವ ಆರ್ ಟಿಐ ಕಾರ್ಯಕರ್ತರಾಜಶೇಖರ್ ಸುದ್ದಿಗೋಷ್ಠಿ ಮಾಡಿದ್ದು ಸರ್ಕಾರದ ವಿರುದ್ಧ ತನ್ನಲ್ಲಿದ್ದ ಎಲ್ಲ ಆಕ್ರೋಶವನ್ನು ಹೊರಹಾಕಿದ್ದಾರೆ. ಇನ್ನು ಇಬ್ಬರು ಶಾಸಕರ ವಿಡಿಯೋ ಇದೆ ಎಂದು ಸ್ಪೋಟಕ ಮಾಹಿತಿಯನ್ನು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ರಾಜಶೇಖರ್, ಸರ್ಕಾರ ಅಧಿಕಾರ ಪಡೆಯುವಾಗ ಅನೇಕ ಆಮಿಷಗಳನ್ನು ಒಡ್ಡಿ ರಾಜ್ಯಭಾರಕ್ಕೆ ಬಂದಿತ್ತು. ಪಾದಯಾತ್ರೆಗಳು, ಹೋರಾಟಗಳು ನಡೆದಿದ್ದವು ಈಗ ಆ ನೈತಿಕತೆ ಎಲ್ಲಿ ಹೋಗಿದೆ. ಸರ್ಕಾರಕ್ಕೆ ನೈತಿಕತೆ ಇದೆಯೇ, ಮಾನ- ಮಾರ್ಯಾದೆ ಇದೆಯೇ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ರಾಜ್ಯದ ವಿಧಾನ ಸಭೆಯಲ್ಲಿರುವ ಇನ್ನು ಇಬ್ಬರು ಶಾಸಕರ ವಿಡಿಯೋವನ್ನು ನಿದಾನವಾಗಿ ಬಹಿರಂಗ ಮಾಡುತ್ತೇನೆ ಎಂದು ಹೇಳಿದರು.[ಈ ಪ್ರಕರಣದಲ್ಲಿ ನನ್ನದ್ದೇನೂ ತಪ್ಪಿಲ್ಲ : ಎಚ್ ವೈ ಮೇಟಿ]

Meti CD release, I have other 2 legislators cd: rajashekar

ತನಗೆ ಕರೆ ಮಾಡುವರರ ಕದ್ದಾಲಿಸುವುದು, ತಾನು ಒಡಾಡುವಾಗ ದೂರದಿಂದ ಹಿಂಬಾಲಿಸುವುದು, ಒತ್ತಡ ಹೇರುವುದು, ಅಮಿಷವನ್ನು ಒಡ್ಡುವುದು ಸೇರಿದಂತೆ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದ್ದರು. ರಾಜ್ಯದ ವಿಧಾನಸಭೆಯಲ್ಲಿಯೇ ಹೆಚ್ಚು ಭ್ರಷ್ಟಾಚಾರ ಅಡಗಿದೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ನಾನೇನು ಮಾಡಬಲ್ಲೇ ಎಂದು ಹೇಳಿದ ಅನೇಕರಿಗೆ ಈಗ ಉತ್ತರ ಸಿಕ್ಕಿದೆ. ನಾನು ಕೇಂದ್ರ ಸರ್ಕಾರಕ್ಕೆ ನನ್ನ ಪೂರ್ಣ ಮಾಹಿತಿಯನ್ನು ನೀಡುತ್ತೇನೆ ಎಂದು ಹೇಳಿದರು.[ರಾಸಲೀಲೆ ಪ್ರಕರಣ, ರಾಜೀನಾಮೆ ಕೊಡಲು ಸಿದ್ಧ: ಮೇಟಿ]

ರಾಜಶೇಖರ್ ಇನ್ನು ಇಬ್ಬರು ಶಾಸಕರ ವಿಡಿಯೋ ಬಹಿರಂಗ ಪಡಿಸುವುದಾಗಿ ಹೇಳಿದ್ದು, ಅದರಲ್ಲಿ ಯಾರ ದೃಶ್ಯವಿದೆ. ಭ್ರಷ್ಟಾಚಾರದ್ದೋ, ಅಕ್ರಮ ಸಂಬಂಧದ್ದೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ರಾಸಲೀಲೆಗೆ ಸಂಬಂಧಿಸಿದಂತೆ ವಿಡಿಯೋ ರೆಕಾರ್ಡ್ ಮಾಡಿದ್ದು ಗನ್ ಮ್ಯಾನ್ ಸುಭಾಷ್ ಎನ್ನಲಾಗಿದ್ದು, ಅವರು ಇನ್ನು ಪತ್ತೆಯಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meti CD release, I have other 2 legislators CD says RTI activist Rajashekar in press meet in delhi.
Please Wait while comments are loading...