ಡೆನ್ಮಾರ್ಕ್‌ಗೆ ತೆರಳಲು ಕೇಜ್ರಿವಾಲ್‌ಗೆ ಅನುಮತಿ ನಿರಾಕರಿಸಿದ ಕೇಂದ್ರ

ನವದೆಹಲಿ, ಅಕ್ಟೋಬರ್ 8: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅ.9ರಿಂದ ಪ್ರಾರಂಭವಾಗಲಿರುವ ಸಿ40 ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡೆನ್ಮಾರ್ಕ್‌ನ ಕೋಪನ್‌ಹೆಗಾನ್‌ಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ.

ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್ ಪ್ರವಾಸಕ್ಕೆ ಅನುಮತಿ ನೀಡಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಆದರೆ ಅನುಮತಿ ನಿರಾಕರಣೆಗೆ ಇದುವರೆಗೂ ಕಾರಣ ನೀಡಿಲ್ಲ.

ಕೇಜ್ರಿವಾಲ್ ಅವರು ಸಮ್ಮೇಳನದಲ್ಲಿ ಇಂಗಾಲದ ವಿಸರ್ಜನೆ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡು ಪ್ರಮುಖ ಭಾಷಣ ಮಾಡಬೇಕಿತ್ತು. ಈಗ ಅವರ ಪ್ರವಾಸಕ್ಕೆ ಸಚಿವಾಲಯ ಅನುಮತಿ ನೀಡದೆ ಇರುವುದರಿಂದ ಅ. 9-12ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ.

MEA Denies Permission Arvind Kejriwal Attend C40 Climate Summit Denmark

ಸಮ್ಮೇಳನದಲ್ಲಿ ಕೇಜ್ರಿವಾಲ್ ಅವರು ನ್ಯೂಯಾರ್ಕ್, ಲಂಡನ್, ಲಾಸ್ ಏಂಜಲಿಸ್, ಬರ್ಲಿನ್ ನಗರಗಳ ಮೇಯರ್‌ಗಳೊಂದಿಗೆ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚಿಸುವ ಸಾಧ್ಯತೆ ಇತ್ತು. ಜತೆಗೆ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಪ್ರಸ್ತಾಪಿಸುವ ನಿರೀಕ್ಷೆಯಿತ್ತು.

ಶಿಷ್ಟಾಚಾರದಂತೆ ಕೇಜ್ರಿವಾಲ್ ಅವರು ವಿದೇಶಾಂಗ ಸಚಿವಾಲಯದಿಂದ ಅನುಮತಿ ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+