ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ

ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಭಾನುವಾರ (ಏ 23) ಮುಕ್ತಾಯಗೊಂಡಿದೆ. ಮತಗಟ್ಟೆ ಸಮೀಕ್ಷೆಯ ಪ್ರಕಾರ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ.

|
Google Oneindia Kannada News

ಬಹುನಿರೀಕ್ಷಿತ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಭಾನುವಾರ (ಏ 23) ಮುಕ್ತಾಯಗೊಂಡಿದೆ. 2012ರಲ್ಲಿ ಶೇ. 53.9 ಮತದಾನವಾಗಿದ್ದರೆ, ಭಾನುವಾರ ನಡೆದ ಚುನಾವಣೆಯಲ್ಲಿ ಶೇ. 54 ಮತದಾನವಾಗಿದೆ.

272 ಸ್ಥಾನವನ್ನು ಹೊಂದಿರುವ ದೆಹಲಿ (ಉತ್ತರ ಮತ್ತು ದಕ್ಷಿಣ ದೆಹಲಿ ತಲಾ 104, ಪೂರ್ವ ದೆಹಲಿ 64 ಸ್ಥಾನ) ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯ ಫಲಿತಾಂಶ ಬುಧವಾರ (ಏ 26) ಹೊರಬೀಳಲಿದೆ.

ಈ ನಡುವೆ ವಿವಿಧ ಮಾಧ್ಯಮಗಳು/ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಹೇಳಿವೆ. [ಬಿಜೆಪಿಗೆ ಮತ ಹಾಕಿದರೆ ಮಕ್ಕಳಿಗೆ ಡೆಂಗ್ಯೂ]

ಎರಡು ವರ್ಷದಿಂದ ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ ಮತದಾರರು ನೀಡುವ ಪ್ರೊಗ್ರೆಸ್ ರಿಪೋರ್ಟ್ ಎಂದೇ ಹೇಳಲಾಗುವ ಎಂಸಿಡಿ (ಮುನ್ಸಿಪಲ್ ಕಾರ್ಪೋರೇಶನ್ ಆಪ್ ದೆಹಲಿ) ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ ನೆಲಕಚ್ಚಲಿದೆ ಎನ್ನುತ್ತದೆ ಎಕ್ಸಿಟ್ ಪೋಲ್.

ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಜೊತೆ ಸೇರಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದ ಆಮ್ ಆದ್ಮಿ ಪಕ್ಷಕ್ಕೆ ಮುಖಭಂಗವಾಗಲಿದೆ. ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಬಹುದು ಮತ್ತು ಪ್ರಮುಖ ಕೆಲವು ವಿದ್ಯಮಾನಗಳು?

 ತಾಂತ್ರಿಕ ತೊಂದರೆಯಿಂದಾಗಿ 18 ಇವಿಎಂ ಬದಲು

ತಾಂತ್ರಿಕ ತೊಂದರೆಯಿಂದಾಗಿ 18 ಇವಿಎಂ ಬದಲು

ದೆಹಲಿಯಲ್ಲಿ ಭಾನುವಾರ ಚುನಾವಣೆ ಆರಂಭವಾದ ನಂತರ ಹದಿನೆಂಟು ಇವಿಎಂ (ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಬದಲಾಯಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಇವಿಎಂ ಬದಲಾಗಿಸಲಾಗಿದೆ ಎಂದು ಚುನಾವಣಾ ಅಯೋಗ ಸ್ಪಷ್ಟ್ ಪಡಿಸಿತ್ತು.

 ಬಿಜೆಪಿಗೆ ಮತಹಾಕಿದರೆ ಡೆಂಗ್ಯೂ,

ಬಿಜೆಪಿಗೆ ಮತಹಾಕಿದರೆ ಡೆಂಗ್ಯೂ,

ಡೆಂಗ್ಯೂ, ಚಿಕನ್ ಗುನ್ಯಾ ಮುಕ್ತ ದೆಹಲಿಗಾಗಿ ಆಮ್ ಆದ್ಮಿ ಪಕ್ಷಕ್ಕೆ ಮತನೀಡಿ ಎಂದು ಕುಟುಂಬ ಸಮೇತ ಮತದಾನ ಮಾಡಿಬಂದ ನಂತರ ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿಗೆ ಮತ ಚಲಾಯಿಸಿದರೆ ನಿಮ್ಮ ಕುಟುಂಬದ ಮಕ್ಕಳಿಗೆ ಡೆಂಗ್ಯು, ಚಿಕನ್ ಗುನ್ಯಾ ಬರಲು ನೀವೇ ಕಾರಣರಾದಂತೆ ಎಂದು ಕೇಜ್ರಿವಾಲ್ ಹೇಳಿದ್ದರು.

 ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ ಭರ್ಜರಿ ವಿಜಯ

ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ ಭರ್ಜರಿ ವಿಜಯ

ಎರಡು ಮತಗಟ್ಟೆ ಸಮೀಕ್ಷೆಯ ಫಲಿತಾಂಶ.
ಒಟ್ಟು ಸ್ಥಾನಗಳು - 272

ಇಂಡಿಯಾ ಟುಡೇ - ಏಕ್ಸಿಸ್
ಬಿಜೆಪಿ : 202-220
ಆಪ್ : 23-35
ಕಾಂಗ್ರೆಸ್ : 19-31

ಸಿವೋಟರ್ - ಎಬಿಪಿ
ಬಿಜೆಪಿ : 218
ಆಪ್ : 24
ಕಾಂಗ್ರೆಸ್ : 22

 ಆಮ್ ಆದ್ಮಿ ಪಕ್ಷಕ್ಕೆ ಮಹತ್ವದ ದೆಹಲಿ ಚುನಾವಣೆ

ಆಮ್ ಆದ್ಮಿ ಪಕ್ಷಕ್ಕೆ ಮಹತ್ವದ ದೆಹಲಿ ಚುನಾವಣೆ

ಗೋವಾ ಮತ್ತು ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ನಿರ್ಣಾಯಕವಾಗಿದೆ. ಇತ್ತೀಚೆಗೆ ನಡೆದ ರಾಜೌರಿ ಅಸೆಂಬ್ಲಿ ಉಪಚುನಾವಣೆಯಲ್ಲೂಆಪ್ ಪರಾಭವಗೊಂಡಿತ್ತು.

 ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದ ಬಿಜೆಪಿ

ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದ ಬಿಜೆಪಿ

ದೇಶದಲ್ಲಿ ನಡೆದ ಇತರ ಅಸೆಂಬ್ಲಿ ಚುನಾವಣೆಯಂತೇ, ದೆಹಲಿ ಚುನಾವಣೆಯನ್ನೂ ಬಿಜೆಪಿ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿತ್ತು. ಅಮಿತ್ ಶಾ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಪ್ರಚಾರದಲ್ಲಿ ತೊಡಗಿದ್ದರು.

English summary
Exit polls predicted an overwhelming victory for the BJP in the civic election of Delhi, giving them more than 200 of the 270 seats, as voting ended on Sunday (Apr 23)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X