ರಾಜ್ಯಸಭಾ ಸ್ಥಾನಕ್ಕೆ ಮಾಯಾವತಿ ರಾಜೀನಾಮೆ ಸಲ್ಲಿಕೆ

ನವದೆಹಲಿ, ಜುಲೈ 18:  ಬಿಎಸ್ ಪಿಯ ನಾಯಕಿ ಮಾಯಾವತಿ ರಾಜ್ಯಸಭಾ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರಪ್ರದೇಶದ ಸಹರಾನ್ ಪುರ್ ನಲ್ಲಿ ನಡೆದ ದಲಿತ ವಿರೋಧಿ ಹಿಂಸಾಚಾರದ ಬಗ್ಗೆ ಪ್ರಸ್ತಾವ ಮಾಡುವುದಕ್ಕೆ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.

ಅದಕ್ಕೂ ಕೆಲ ಗಂಟೆಗಳ ಮುಂಚೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ್ದರು. ಈ ರಾಜೀನಾಮೆ ಸರಿಯಾದ ಕ್ರಮದಲ್ಲಿ ಇಲ್ಲ ಎಂಬ ಕಾರಣಕ್ಕೆ ಸ್ವೀಕಾರ ಆಗುವ ಸಾಧ್ಯತೆ ಇಲ್ಲ. ಆದರೆ ಮಾಯಾವತಿಯ ಈ ತೀರ್ಮಾನ ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ದಲಿತ ರಾಜಕಾರಣದ ಚಾಂಪಿಯನ್ ಎಂಬ ವರ್ಚಸ್ಸು ನೀಡುತ್ತದೆ.

Mayawati

ರಾಜೀನಾಮೆ ನೀಡಿದ ನಂತರ ಮಾತನಾಡಿದ ಮಾಯಾವತಿ, ಆಡಳಿತಾರೂಢ ಪಕ್ಷವು ಯಾವಾಗ ನಮ್ಮ ಧ್ವನಿಗೆ ಅವಕಾಶ ನೀಡುವುದಿಲ್ಲವೋ ಆಗ ರಾಜೀನಾಮೆ ನೀಡುವುದೇ ಉತ್ತಮ ಎಂದಿದ್ದಾರೆ. ಮಾಯಾವತಿ ಹೇಳಬೇಕು ಎಂದಿದ್ದ ವಿಚಾರ ತಿಳಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಸಮಯಾವಕಾಶ ಮೀರುತ್ತಿದ್ದಂತೆ ಮಾತು ನಿಲ್ಲಿಸುವಂತೆ ಸೂಚಿಸಲಾಗಿತ್ತು.

ಇದರಿಂದ ಅವರು ಆಕ್ರೋಶಗೊಂಡು, ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+