Video: ಗುರುಗ್ರಾಮ್‌ನ ಮನೇಸರ್‌ನಲ್ಲಿ ಅಗ್ನಿ ಅನಾಹುತ, 35 ಅಗ್ನಿಶಾಮಕ ವಾಹನ ದೌಡು
ಗುರುಗ್ರಾಮ್, ಏಪ್ರಿಲ್ 26: ಗುರುಗ್ರಾಮ್‌ನ ಮನೇಸರ್‌ನಲ್ಲಿನ ಕಸದ ರಾಶಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸೋಮವಾರ ತಡರಾತ್ರಿ ಹೊತ್ತಿಕೊಂಡ ಬೆಂಕಿ, ನೋಡನೋಡುತ್ತಿದ್ದಂತ ಧಗಧಗಿಸಿ ಉರಿಯಲು ಆರಂಭಿಸಿದೆ.
ಗುರುಗ್ರಾಮ್‌ನ ಮನೇಸರ್‌ನ ಸೆಕ್ಟರ್-6 ಬಳಿ ಬೆಂಕಿ ಹೊತ್ತಿಕೊಂಡಿರುವ ಈ ಘಟನೆ ನಡೆದಿದೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ 35ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.
#WATCH | Massive fire breaks out in garbage near sector-6 of Manesar in Gurugram district late last night. 35 fire brigade vehicles present on the spot pic.twitter.com/llofnJIkH8
— ANI (@ANI) April 25, 2022
ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications