ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈವಾಹಿಕ ಅತ್ಯಾಚಾರ: ದೆಹಲಿ ಹೈಕೋರ್ಟ್‌ನಿಂದ ಬಾರದ ಒಮ್ಮತದ ತೀರ್ಪು

|
Google Oneindia Kannada News

ನವದೆಹಲಿ, ಮೇ 11: ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕೆಂಬ ವಿಚಾರದ ಬಗ್ಗೆ ದೆಹಲಿ ಹೈಕೋರ್ಟ್‌ನ ನ್ಯಾಯಪೀಠವೊಂದಕ್ಕೆ ಒಮ್ಮತದ ತೀರ್ಪು ಕೊಡಲು ಸಾಧ್ಯವಾಗಲಿಲ್ಲ. ನ್ಯಾಯಪೀಠದಲ್ಲಿದ್ದ ನ್ಯಾ. ರಾಜೀವ್ ಶಕಧೇರ್ (Justice Rajeev Shakdher) ಮತ್ತು ನ್ಯಾ. ಹರಿಶಂಕರ್ ಅವರು ಭಿನ್ನ ತೀರ್ಪು ನೀಡಿದ್ದಾರೆ. ಇದರೊಂದಿಗೆ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ವೈವಾಹಿಕ ಜೀವನದಲ್ಲಿ ಗಂಡನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸದಂತೆ ವಿನಾಯಿತಿ ನೀಡಲಾಗಿದ್ದ ಕಾನೂನನ್ನು ರದ್ದುಗೊಳಿಸುವಂತೆ ಅರ್ಜಿಗಳು ಸಲ್ಲಿಕೆಯಾಗಿದ್ದರು. ಇದರ ವಿಚಾರಣೆ ಬಹಳ ದಿನಗಳವರೆಗೆ ನಡೆದು ಫೆಬ್ರವರಿ 21ರಂದು ದೆಹಲಿ ಉಚ್ಚ ನ್ಯಾಯಾಲಯ ತನ್ನ ತೀರ್ಪು ಕಾಯ್ದಿರಿಸಿತ್ತು. ಇಂದು ನೀಡಿದ ತೀರ್ಪಿನಲ್ಲಿ ಇಬ್ಬರು ನ್ಯಾಯಾಧೀಶರ ಮಧ್ಯೆ ಅಭಿಪ್ರಾಯಭೇದ ಬಂದು ಒಮ್ಮತ ತೀರ್ಪು ಸಾಧ್ಯವಾಗಲಿಲ್ಲ.

ಮದುವೆ ವೇಳೆ ಪವರ್ ಕಟ್: ವಧುಗಳನ್ನೇ ಬದಲಿ ಮಾಡಿದ ಪಂಡಿತಮದುವೆ ವೇಳೆ ಪವರ್ ಕಟ್: ವಧುಗಳನ್ನೇ ಬದಲಿ ಮಾಡಿದ ಪಂಡಿತ

ವೈವಾಹಿಕ ಜೀವನದಲ್ಲಿ ವಯಸ್ಕ ಹೆಂಡತಿಯೊಂದಿಗೆ ಗಂಡ ಯಾವುದೇ ರೀತಿಯಲ್ಲಾದರೂ ಲೈಂಗಿಕ ಸಂಪರ್ಕ ಸಾಧಿಸಿದರೆ ಅದು ಅಪರಾಧ ಎನಿಸುವುದಿಲ್ಲ ಎಂದು ಐಪಿಸಿ ಸೆಕ್ಷನ್ 375ರಲ್ಲಿ ತಿಳಿಸಲಾಗಿರುವ ಎರಡನೇ ವಿವರಣೆಯು ಹೇಳುತ್ತದೆ. ಈ ಕಾನೂನು ಅಸಂವಿಧಾನಿಕ ಎಂದು ನ್ಯಾ. ರಾಜೀವ್ ಶಕದೇರ್ ಅಭಿಪ್ರಾಯಪಟ್ಟರು.

Marital Rape: Delhi High Court Gives Split Verdict

ಇನ್ನೊಂದೆಡೆ, ನ್ಯಾ. ಹರಿಶಂಕರ್ ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಐಪಿಸಿ ಸೆಕ್ಷನ್ 375ರ ಎರಡನೇ ವಿನಾಯಿತಿಯ ವಿವರಣೆಯು ಸಂವಿಧಾನದ ನಿಯಮ ಉಲ್ಲಂಗಿಸುವುದಿಲ್ಲ ಎಂದರು.

ವೈವಾಹಿಕ ಅತ್ಯಾಚಾರವನ್ನು ಅಪರಾಧದಿಂದ ಹೊರಗಿಟ್ಟಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹಲವು ವೈವಾಹಿಕ ಜೀವನದಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಲೈಂಗಿಕ ಹಲ್ಲೆಗೊಳಗಾಗುತ್ತಿರುವುದುಂಟು. ಈ ಮಹಿಳೆಯರಿಗೆ ಕಾನೂನಿನ ನೆರವು ಇಲ್ಲವಾಗಿದೆ. ಆದ್ದರಿಂದ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕೆಂದು ಕೋರಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ, ಕೇಂದ್ರ ಸರಕಾರದ ನಿಲುವು ಏನು ಎಂದು ದೆಹಲಿ ಉಚ್ಚ ನ್ಯಾಯಾಲಯ ಫೆಬ್ರವರಿ 7ರಂದು ಕೇಳಿ, ಉತ್ತರಕ್ಕಾಗಿ ಎರಡು ವಾರ ಕಾಲಾವಕಾಶ ಕೊಟ್ಟಿತು. ಅದಕ್ಕೆ ಕೆಂದ್ರ ಸರಕಾರ ಇನ್ನೂ ಹೆಚ್ಚಿನ ಕಾಲಾವಧಿ ಬೇಕು ಎಂದು ಕೇಳಿತಾದರೂ ಕೋರ್ಟ್ ಅದಕ್ಕೆ ಒಪ್ಪಲಿಲ್ಲ.

ಈ ಪ್ರಕರಣದಲ್ಲಿ ತೆಗೆದುಕೊಳ್ಳುವ ನಿರ್ಧಾರ ಸಾಮಾಜಿಕ ಮತ್ತು ಕೌಟುಂಬಿಕವಾಗಿ ದೀರ್ಘ ಪರಿಣಾಮಗಳನ್ನು ಉಂಟು ಮಾಡಬಹುದು. ಅದಕ್ಕಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೇಳುತ್ತಿದ್ದೇವೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿತು.

Marital Rape: Delhi High Court Gives Split Verdict

ಬೇಡ ಎಂದರೆ ಬೇಡ:
ದೆಹಲಿ ಹೈಕೋರ್ಟ್ ಪೀಠದ ನ್ಯಾ. ಶಕಧೇರ್ ಪ್ರಕಾರ, ಒಬ್ಬ ಗರ್ಲ್‌ಫ್ರೆಂಡ್ ಆಗಲೀ ಲಿವ್ ಇನ್ ಪಾರ್ಟ್ನರ್ ಆಗಲೀ ಲೈಂಗಿಕ ಕ್ರಿಯೆಗೆ ಅಸಮ್ಮತಿ ಸೂಚಿಸಿದರೂ ಗಂಡಸು ಬಲಾತ್ಕಾರ ಮಾಡಿದರೆ ಅದು ಅಪರಾಧ ಆಗುತ್ತದೆ. ಇದು ವೈವಾಹಿಕ ಜೀವನಕ್ಕೂ ಅನ್ವಯ ಆಗುತ್ತದೆ. "ಯಾವುದೇ ಸಂಬಂಧವನ್ನು ಬೇರೆ ರೀತಿಯಲ್ಲಿ ನೋಡಲಾಗುವುದಿಲ್ಲ. ಏನೇ ಇದ್ದರೂ ಆಕೆ ಮಹಿಳೆಯೇ" ಎಂಬುದು ಈ ನ್ಯಾಯಾಧೀಶರ ಅನಿಸಿಕೆ.

ಚನ್ನಪಟ್ಟಣ; ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿ ರಕ್ಷಣೆಚನ್ನಪಟ್ಟಣ; ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿ ರಕ್ಷಣೆ

ವಿವಾಹಪೂರ್ವ ಸಂಬಂಧಕ್ಕೂ ದಾಂಫತ್ಯ ಸಂಬಂಧಕ್ಕೂ ವ್ಯತ್ಯಾಸ ಇದೆ:
ವಿವಾಹಪೂರ್ವ ಸಂಬಂಧ ಅಥವಾ ಲಿವ್-ಇನ್ ಸಂಬಂಧಕ್ಕೂ ದಾಂಪತ್ಯ ಜೀವನದಲ್ಲಿನ ಸಂಬಂಧಕ್ಕೂ ವ್ಯತ್ಯಾಸ ಇದೆ. ವೈವಾಹಿಕ ಜೀವನದಲ್ಲಿ ಇಬ್ಬರಲ್ಲಿ ಯಾರು ಬೇಕಾದರೂ ಲೈಂಗಿಕ ಸಂಬಂಧ ಅಪೇಕ್ಷಿಸುವ ಹಕ್ಕು ಹೊಂದಿರುತ್ತಾರೆ. ಆದರೆ, ಮದುವೆ ಆಗಿಲ್ಲದ ಜೋಡಿಗೆ ಈ ಹಕ್ಕು ಇರುವುದಿಲ್ಲ" ಎಂದು ನ್ಯಾ| ಹರಿಶಂಕರ್ ಹೇಳಿದ್ದಾರೆ.

ವೈವಾಹಿಕ ಅತ್ಯಾಚಾರವನ್ನು ಅಪರಾಧಗೊಳಿಸಬೇಕೆಂದು ನಾಲ್ಕೈದು ವರ್ಷಗಳ ಹಿಂದೆಯೇ ಎನ್‌ಜಿಒಗಳಾದ ಆರ್‌ಐಟಿ ಫೌಂಡೇಶನ್ ಮತ್ತು ಅಖಿಲ ಭಾರತ ಪ್ರಜಾತಂತ್ರೀಯ ಮಹಿಳಾ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ಪೆಟಿಶನ್ ಸಲ್ಲಿಸಿದ್ದವು. ಈ ಅರ್ಜಿಗಳನ್ನು ವಿರೋಧಿಸಿ ಕೇಂದ್ರ ಸರಕಾರ 2017ರಲ್ಲಿ ಪ್ರಮಾಣಪತ್ರ ಕೊಟ್ಟಿತ್ತು.

ಇದೀಗ ಈ ಪ್ರಕರಣದಲ್ಲಿ ಒಮ್ಮತದ ತೀರ್ಪು ನೀಡದಿದ್ದರೂ ದೆಹಲಿ ಹೈಕೋರ್ಟ್ ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾಡುವುದು ಉತ್ತಮ ಎಂದು ಸಲಹೆ ನೀಡಿದೆ. ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

(ಒನ್ಇಂಡಿಯಾ ಸುದ್ದಿ)

English summary
On the widely-debated question of criminalising marital rape, the Delhi High Court today delivered a split verdict. The case will now go to the Supreme Court. Two judges, Justice Rajiv Shakdher and Justice Hari Shankar, failed to agree on their verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X