ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಭಯೋತ್ಪಾದನೆ ಹರಡುತ್ತಿರುವವರಲ್ಲಿ ವಿದ್ಯಾವಂತರ ಪಾತ್ರ ಹೆಚ್ಚು:ಮೋದಿ

|
Google Oneindia Kannada News

ನವದೆಹಲಿ,ಫೆಬ್ರವರಿ 19: ದೇಶದೆಲ್ಲೆಡೆ ಭಯೋತ್ಪಾದನೆ,ಹಿಂಸಾಚಾರ ಹರಡುತ್ತಿರುವವರಲ್ಲಿ ವಿದ್ಯಾವಂತರ ಪಾತ್ರವೇ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಪ್ರಧಾನಿ ಮಂತ್ರಿ ಮೋದಿ, ನಿಮ್ಮ ಮನಸ್ಸು ಸಕಾರಾತ್ಮಕವಾಗಿದೆಯೇ, ಋಣಾತ್ಮಕವಾಗಿದೆಯೇ ಎಂಬುದರ ಮೇಲೆ ನೀವು ಮಾಡುವ ಕೆಲಸ ಅವಲಂಬಿತವಾಗಿರುತ್ತದೆ.

ಅಜಿತ್ ದೋವಲ್ ಮೇಲೆ ದಾಳಿಗೆ ಸಂಚು: ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ಉಗ್ಅಜಿತ್ ದೋವಲ್ ಮೇಲೆ ದಾಳಿಗೆ ಸಂಚು: ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ಉಗ್

ಇಲ್ಲಿ ಇಬ್ಬರಿಗೂ ಅವಕಾಶವಿದೆ. ಒಂದೆಡೆ ಭಯೋತ್ಪಾದನೆ ಮತ್ತು ಹಿಂಸೆಯನ್ನು ಜಗತ್ತಿನಾದ್ಯಂತ ಹಬ್ಬಿಸುವ ಕಾರ್ಯದಲ್ಲಿ ಅಧಿಕ ವಿದ್ಯಾವಂತರು, ಕೌಶಲ್ಯವಂತರು ನಿರತರಾಗಿದ್ದಾರೆ. ಮತ್ತೊಂದೆಡೆ, ಇನ್ನೊಂದು ವರ್ಗದ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಆಸ್ಪತ್ರೆಗಳಲ್ಲಿ, ಪ್ರಯೋಗಾಲಯಗಳಲ್ಲಿ ಕೋವಿಡ್-19 ಸೋಂಕಿನಿಂದ ಜನರನ್ನು ರಕ್ಷಿಸಲು ಸೇವಾ ನಿರತರಾಗಿದ್ದಾರೆ. ಇದು ಅವರ ತತ್ವ, ಸಿದ್ಧಾಂತಗಳನ್ನು ತೋರಿಸುತ್ತಿಲ್ಲ, ಬದಲಿಗೆ ಮನೋಧರ್ಮವನ್ನು ಹೇಳುತ್ತದೆ ಎಂದರು.

Many Who Are Spreading Terror Across World Are Highly Educated,Highly Skilled: PM Modi

ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಪ್ರಮುಖ ಹೆಜ್ಜೆಯಾಗಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ ಅದು ಶಕ್ತಿಯನ್ನು ನೀಡುತ್ತದೆ. ಲಿಂಗ ಸೇರ್ಪಡೆ ನಿಧಿಯನ್ನು ಹೊಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 'ಆತ್ಮನಿರ್ಭರ ಭಾರತ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ ಎಂದರು.

ಎರಡೂ ಗುಣದ ವ್ಯಕ್ತಿಗಳಿಗೆ ದಾರಿಯಿದೆ. ನಾವು ಸಮಸ್ಯೆಯ ಭಾಗವಾಗಬೇಕೆ ಅಥವಾ ಪರಿಹಾರ ಹುಡುಕುವವರಾಗಬೇಕೆ ಎಂಬುದನ್ನು ತೀರ್ಮಾನಿಸುವುದು ನಮ್ಮ ಕೈಯಲ್ಲಿದೆ ಎಂದರು.

English summary
Many people who are spreading terror are highly educated and highly skilled said PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X