ನಾನು ಎಂದಿಗೂ ಮಾಧ್ಯಮಕ್ಕೆ ಹೆದರುತ್ತಿರಲಿಲ್ಲ: ಮೋದಿಗೆ ಸಿಂಗ್ ತಪರಾಕಿ

Recommended Video

      ನಾನು ಎಂದಿಗೂ ಮಾಧ್ಯಮಕ್ಕೆ ಹೆದರುತ್ತಿರಲಿಲ್ಲ: ಮೋದಿಗೆ ಸಿಂಗ್ ತಪರಾಕಿ | Oneindia Kannada

      ನವದೆಹಲಿ, ಡಿಸೆಂಬರ್ 19: 'ನನ್ನನ್ನು ಜನರು ಮೌನಿ ಪ್ರಧಾನಿ ಎಂದು ಕರೆಯುತ್ತಿದ್ದರು. ಹಾಗಂತ ನಾನು ಎಂದಿಗೂ ಮಾಧ್ಯಮಗಳನ್ನು ಎದುರಿಸಲು ಹೆದರಿ ಮೌನವಾಗಿರುತ್ತಿರಲಿಲ್ಲ. ನಾನು ಪ್ರತಿದಿನವೂ ಮಾಧ್ಯಮ ಮಿತ್ರರನ್ನು ಭೇಟಿಯಾಗುತ್ತಿದ್ದೆ, ಪತ್ರಿಕಾ ಗೋಷ್ಠಿ ನಡೆಸುತ್ತಿದ್ದೆ' ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನ ತಪರಾಕಿ ನೀಡಿದ್ದಾರೆ.

      'ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳೇ ಕಳೆದರೂ, ಇದುವರೆಗೂ ಒಂದೂ ಪತ್ರಿಕಾಗೋಷ್ಠಿ ನಡೆಸಿಲ್ಲ. ಹೀಗಿರುವಾಗ ನನ್ನನ್ನು 'ಮೌನಿ ಪ್ರಧಾನಿ' ಎಂದು ಕರೆಯುವುದು ಎಷ್ಟು ಸರಿ? ನಾನು ಎಂದಿಗೂ ಮಾಧ್ಯಮಕ್ಕೆ ಹೆದರಿಲ್ಲ!' ಎಂದು ಅವರು ಹೇಳಿದರು.

      Manmohan Singh taunts PM Modi of afraiding to face press

      ನವದೆಹಲಿಯಲ್ಲಿ ತಮ್ಮ 'Changing India' ಕೃತಿಯನ್ನು ಬಿಡುಗಡೆಗೊಳಿಸಿದ ನಂತರ ಅವರು ಮಾತನಾಡುತ್ತಿದ್ದರು.

      2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಇದುವರೆಗೆ ಒಂದು ಪತ್ರಿಕಾ ಗೋಷ್ಠಿಯನ್ನೂ ನಡೆಸಿಲ್ಲ. ಅದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆದಿಯಾಗಿ ಹಲವು ವಿಪಕ್ಷ ನಾಯಕರು ಲೇವಡಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಇದೇ ವಿಷಯಕ್ಕೆ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+