ಬೆಂಗಳೂರಿಗೆ ಹೊರಟಿದ್ದ ವಿಮಾನ ಪ್ರಯಾಣಿಕನ ಬಳಿ ಸಜೀವ ಗುಂಡು ಪತ್ತೆ
ನವದೆಹಲಿ, ಜನವರಿ 25: ನವದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ಪ್ರಯಾಣಿಕನ ಬ್ಯಾಗ್‌ನಲ್ಲಿ 8 ಸಜೀವ ಗುಂಡುಗಳು ಪತ್ತೆಯಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳು ಬ್ಯಾಗ್‌ಗಳ ತಪಾಸಣೆ ಮಾಡುವ ವೇಳೆ ಎಕ್ಸ್‌ರೇ ಮಾನಿಟರ್‌ನಲ್ಲಿ ಗುಂಡಿನಂಥ ವಸ್ತುಗಳು ಕಂಡಿದ್ದವು.ಪಿ.ಕೆ. ಶರ್ಮ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೂಡಲೇ ಪ್ರಯಾಣಿಕ ಶರ್ಮನನ್ನು ತಡೆ ನಿಲ್ಲಿಸಲಾಯಿತು. ಬ್ಯಾಗ್‌ನಲ್ಲಿ .32 ಕ್ಯಾಲಿಬರ್‌ನ ಎಂಟು ಸಜೀವ ಗುಂಡುಗಳು ಸಿಕ್ಕಿದವು. ಗುಂಡುಗಳಿಗೆ ಸಂಬಂಧಿಸಿ ಯಾವುದೇ ದಾಖಲೆಗಳು ಇರಲಿಲ್ಲ.

ಹಾಗಾಗಿ ಶಸ್ತ್ರಾಸ್ತ್ರ ಕಾಯಿದೆಯಡಿ ಆತನನ್ನು ಬಂಧಿಸಲಾಯಿತು. ಆತನ ಉದ್ದೇಶವೇನು, ಬೆಂಗಳೂರಿಗೆ ಹೋಗುವ ವಿಮಾನ ಹತ್ತಲು ಬಂದಿದ್ದೇಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ದಾಖಲೆಗಳಿಲ್ಲದ ಗುಂಡುಗಳನ್ನಿಟ್ಟುಕೊಂಡು ಆತ ಏಕೆ ಪ್ರಯಾಣಿಸುತ್ತಿದ್ದ ಎನ್ನುವುದರ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.












Click it and Unblock the Notifications