ರಾಹುಲ್ ಗಾಂಧಿ ತಮ್ಮ ಮಾತಿನಲ್ಲಿ ಸಭ್ಯತೆ ಕಾಪಾಡಲಿ ಎಂದ ಸುಷ್ಮಾ ಸ್ವರಾಜ್

ನವದೆಹಲಿ, ಏ.6: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮಾತಿನಲ್ಲಿ ಹಿಡಿತವಿಟ್ಟುಕೊಂಡು ಸಭ್ಯತೆ ಕಾಪಾಡಿದರೆ ಒಳ್ಳೆಯದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುಜರಾತ್​ನ ಗಾಂಧಿನಗರದಿಂದ ಆರು ಬಾರಿ ಗೆದ್ದು ಸಂಸದರಾದ ಎಲ್​.ಕೆ.ಆಡ್ವಾಣಿಯವರಿಗೆ ಈ ಬಾರಿ ಬಿಜೆಪಿ ಅವಮಾನ ಮಾಡಿದೆ.

ಅವರಿಗೆ ಟಿಕೆಟ್​ ನೀಡದೆ ಅಮಿತ್​ ಷಾ ಅವರಿಗೆ ನೀಡಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಆದರೆ ಗುರುವಿಗೆ ಅತ್ಯುನ್ನತ ಸ್ಥಾನ ಕೊಡಬೇಕು ಎಂಬುದನ್ನು ಮರೆತಂತಿದೆ.

Maintain Some Decorum Sushma Swaraj On Rahul Gandhis LK Advani Remark

ಎಲ್​.ಕೆ.ಆಡ್ವಾಣಿಯವರು ತಮ್ಮ ಗುರು ಎಂದು ಮೋದಿ ಕರೆಯುತ್ತಾರೆ. ಆದರೆ ಅವರನ್ನು ಪಕ್ಷದಿಂದಲೇ ಹೊರಹಾಕಿದ್ದಾರೆ ಎಂದು ರಾಹುಲ್​ ಗಾಂಧಿ ಆರೋಪ ಮಾಡಿದ್ದರು.

ಪ್ರಧಾನಿ ಮೋದಿಯವರು ಅವರ ಗುರು ಎಲ್​.ಕೆ.ಅಡ್ವಾಣಿಯವರನ್ನು ಅನುಚಿತವಾಗಿ ಹೊರಹಾಕಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದ ಮಾತಿಗೆ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಅಡ್ವಾಣಿ ಅವರು ನಮ್ಮ ತಂದೆ ಸ್ಥಾನದಲ್ಲಿ ಇದ್ದಾರೆ.

ರಾಹುಲ್​ ಗಾಂಧಿಯವರ ಮಾತು ನಮಗೆ ತುಂಬ ನೋವು ತಂದಿದೆ. ದಯವಿಟ್ಟು ಮಾತನಾಡುವಾಗ ಸಭ್ಯತೆಯಿಂದ ಶಬ್ದ ಬಳಸಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+