ಕಾಂಗ್ರೆಸ್ ಪಟ್ಟಿ4: ಸುಷ್ಮಾ ವಿರುದ್ಧ ದಿಗ್ಗಿ ಸೋದರ ಲಕ್ಷಣ

ನವದೆಹಲಿ, ಮಾರ್ಚ್ 21- ಕಾಂಗ್ರೆಸ್‌ ಪಕ್ಷವು ನಿನ್ನೆ ಗುರುವಾರ ಲೋಕಸಭಾ ಚುನಾವಣೆಗಾಗಿ ತನ್ನ 50 ಅಭ್ಯರ್ಥಿಗಳ ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗಮನಾರ್ಹವೆಂದರೆ ಕರ್ನಾಟಕದಿಂದ 3 ಸ್ಥಾನಗಳಿಗೆ ಇನ್ನೂ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿಲ್ಲ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಲ್ಲಿ ಬಲಾಢ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷವು ಅಲ್ಲಿಗೆ ಇನ್ನೂ ಅಭ್ಯರ್ಥಿ ಯಾರಾಗಬೇಕೆಂಬುದನ್ನು ನಿರ್ಧರಿಸಿಲ್ಲ. ವಾರಣಾಸಿಯಿಂದ ಕಾಂಗ್ರೆಸ್ ಪರ ಎಐಸಿಸಿ ವಕ್ತಾರ ದಿಗ್ವಿಜಯ್ ಸಿಂಗ್ ಅವರನ್ನು ಕಣಕ್ಕಿಳಿಸಬೇಕೆಂಬ ಮಾತುಗಳು ಕೇಳಿಬಂದಿವೆಯಾದರೂ ಪಕ್ಷ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಎಐಸಿಸಿ ವಕ್ತಾರ ಮಧುಸೂದನ್ ಮಿಸ್ತ್ರಿ ಅವರು ತಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Lok Sabha polls 2014: Congress announces fourth list of 5o candidates

ಈ ಮಧ್ಯೆ, ನಿರೀಕ್ಷೆಯಂತೆ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಅವರ ಪುತ್ರ ಕಾರ್ತಿ ಅವರನ್ನು ತಮ್ಮ ಕ್ಷೇತ್ರವಾದ ತಮಿಳುನಾಡಿನ ಶಿವಗಂಗಾದಿಂದ ಕಣಕ್ಕಿಳಿಸುತ್ತಿದ್ದಾರೆ. 1984, 2004 ಮತ್ತು 2009ರ ಸಂಸದೀಯ ಚುನಾವಣೆಯಲ್ಲಿ ಚಿದಂಬರಂ ಅವರು ಈ ಕ್ಷೇತ್ರದಿಂದ ಲೋಕಸಭೆಗೆ ಆರಿಸಿ ಬಂದಿದ್ದರು.

ಅಮೃತಸರ ಮತ್ತು ಲೂಧಿಯಾನ ಕ್ಷೇತ್ರಗಳಿಂದಲೂ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸೂಕ್ತ ಅಭ್ಯರ್ಥಿಗಾಗಿ ಕಾಂಗ್ರೆಸ್ ಆಲೋಚಿಸುತ್ತಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಳಂಕಿತ ಅಶೋಕ್ ಚವ್ಹಾಣ್ ಅವರ ಬಗ್ಗೆಯೂ ಪಕ್ಷ ಇನ್ನೂ ನಿರ್ಧರಿಸಿಲ್ಲ.

ಗಾಂಧಿನಗರದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ವಿರುದ್ಧ ಕಿರಿತ್ ಪಟೇಲ್ ಅವರನ್ನೂ, ವಿದಿಶಾದಲ್ಲಿ ಸುಷ್ಮಾ ಸ್ವರಾಜ್ ಅವರ ವಿರುದ್ಧ ದಿಗ್ವಿಜಯ್ ಸಿಂಗ್ ಅವರ ಸೋದರ ಲಕ್ಷಣ ಸಿಂಗ್ ಅವರನ್ನು ಸ್ಪರ್ಧೆಗೊಡ್ಡಿದೆ.

ತಮಿಳುನಾಡು, ಉತ್ತರ ಪ್ರದೇಶ, ದಿಲ್ಲಿ, ಗುಜರಾತ್, ಜಮ್ಮು ಕಾಶ್ಮೀರ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೆ ಪಕ್ಷವು 50 ಅಭ್ಯರ್ಥಿಗಳ ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+