ಬಿಜೆಪಿ-ಮೋದಿಗೆ ಜಗನ್ ಬೆಂಬಲ: ಕಂಡೀಷನ್ಸ್ ಅಪ್ಲೈ

Lok Sabha Polls 2014: YSR Party Jagan Mohan Reddy to support BJP if it stands for united Andhra
ನವದೆಹಲಿ, ಫೆ.5-ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ವೈಎಸ್‌ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್‌ ಮೋಹನ್ ರೆಡ್ಡಿ ಅವರು ಬುಧವಾರ ಘೋಷಿಸಿದ್ದಾರೆ.

ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಮತ್ತು ಅಖಂಡ ಆಂಧ್ರ ಹೋರಾಟದ ವಿಷಯವೇ ಮುಖ್ಯವಾಗಿದೆ. ಈ ಸಂದರ್ಭದಲ್ಲಿಯೇ ಜಗನ್‌ ಮೋಹನ್ ರೆಡ್ಡಿ ಬಿಜೆಪಿ ಜತೆ ಸಖ್ಯ ಬೆಳೆಸಿರುವುದು ಕುತೂಹಲಕಾರಿಯಾಗಿದೆ. ಆದರೆ ಬಿಜೆಪಿ ಜತೆಗಿನ ಮೈತ್ರಿ ವಿಷಯದಲ್ಲಿ ಜಗನ್ ತೆಲಂಗಾಣ ವಿಷಯವನ್ನೇ ಮುಖ್ಯವಾಗಿಸಿಕೊಂಡಿದ್ದಾರೆ. ತಾನು ಅಖಂಡ ಆಂಧ್ರಕ್ಕೆ ಅಂಕಿತವಾಗಿದ್ದು, ಬಿಜೆಪಿ ಸಹ ಇದೇ ನಿಲುವಿಗೆ ಸಹಮತ ವ್ಯಕ್ತಪಡಿಸಬೇಕು ಎಂಬುದು ಸದ್ಯಕ್ಕೆ ಜಗನ್ ಏಕಂಶ ಅಜೆಂಡಾ ಆಗಿದೆ.

ಕಾಂಗ್ರೆಸ್ಸಿನ ದುರಾಡಳಿತವನ್ನು ಅಂತ್ಯ ಕಾಣಿಸಬೇಕಾದರೆ ಬದಲಾವಣೆ ಅಗತ್ಯ. ಹೀಗಾಗಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಅಭಿವೃದ್ಧಿಯ ಧ್ಯೇಯವನ್ನು ಮೆಚ್ಚಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಬಿಜೆಪಿ ಜತೆ ವೈಎಸ್‌ ಆರ್ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಸದ್ಯದಲ್ಲಿಯೇ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಸ್ಥಾನ ಹೊಂದಾಣಿಕೆ ಸೇರಿದಂತೆ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗುವುದು ಎಂದು ಜಗನ್ ಹೇಳಿದ್ದಾರೆ. ( ನಟ ಚಿರಂಜೀವಿಗೆ ಮುಖ್ಯಮಂತ್ರಿಯಾಗುವ ಯೋಗ! )

ಫಲಿತಾಂಶದ ಮೇಲೆ ಪ್ರಭಾವವೇನು:
ಆಂಧ್ರದಲ್ಲಿ 42 ಕ್ಷೇತ್ರಗಳಲ್ಲಿ ವೈಎಸ್‌ ಆರ್ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಏಕೆಂದರೆ ಆಂಧ್ರದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ. ಆದಾಗ್ಯೂ ನರೇಂದ್ರ ಮೋದಿ ಈಗಾಗಲೇ ಹೈದರಾಬಾದಿನಲ್ಲಿ ಬೃಹತ್ ಸಮಾವೇಶ ನಡೆಸಿದ್ದು, ಬಿಜೆಪಿಗೆ ಪೂರಕವಾಗುವ ವಾತಾವರಣನ್ನು ನಿರ್ಮಿಸಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ಸಿಗೆ ಸಡ್ಡು ಹೊಡೆದು, ಅದರ ವಿರುದ್ಧ ಹೋರಾಟಗಳನ್ನೇ ಉಸಿರಾಗಿಸಿಕೊಂಡಿರುವ ಜಗನ್‌ ಮೋಹನ್ ರೆಡ್ಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ( ಕರ್ನಾಟಕಕ್ಕೆ ಕಾದಿದೆ ಮತ್ತೊಂದು ಗಡಿ ತಂಟೆ! )

ಅಖಂಡ ಆಂಧ್ರದ ಪರವಾಗಿಯೇ ವೈಎಸ್ಆರ್ ಕಾಂಗ್ರೆಸ್ಸಿನ ಅಷ್ಟೂ ಮಂದಿ ಶಾಸಕರು/ ಸಂಸದರು ಒಟ್ಟಾಗಿ ನಿಂತಿದ್ದಾರೆ. ತೆಲಂಗಾಣದಲ್ಲಿನ 17 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ನಾಔಉ ಗೆಲ್ಲಬಲ್ಲೆವು. ಸೀಮಾಂಧ್ರದಲ್ಲಿ 25 ಸೀಟುಗಳಲ್ಲಿ ಇಪ್ಪತ್ತೈದೂ ಸೀಟುಗಳನ್ನು ನಾವು ಬಾಚಿಕೊಳ್ಳುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+