ಕಣ್ಗಾವಲು: ಜಡ್ಜ್ ನೇಮಕಕ್ಕೆ ಚುನಾವಣೆವರೆಗೂ ಕಾಯಬೇಕಿತ್ತು
ಬೆಂಗಳೂರು, ಮೇ 3: ಇಂದು ಶನಿವಾರ ದೇಶದೆಲ್ಲೆಡೆ ನಡೆದ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ, ನಿಮಗಾಗಿ. ಚುನಾವಣಾ ರೌಂಡ್ ಆಪ್ ಸಹ ಅಡಕವಾಗಿದೆ. ತಕ್ಷಣಕ್ಕೆ ಇದು ಕೇವಲ ಹೆಡ್ ಲೈನುಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.34: ದೂರದರ್ಶನದಿಂದ ಮೋದಿ ಸಂದರ್ಶನ ವಿವಾದ: ಪ್ರಸಾರಭಾರತಿ ಸ್ವಾಯತ್ತತೆಗೆ ಯಾವುದೇ ಬಾಧಕವಿಲ್ಲ.
12.23: ಯುವತಿಯ ಮೇಲೆ ಮೋದಿ ಕಣ್ಗಾವಲು ಪ್ರಕರಣ: ದ್ವೇಷ ರಾಜಕೀಯ ಎಂದಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು- ಮಹಿಳೆಯ ಮೇಲೆ ಕಣ್ಗಾವಲು ಇಟ್ಟಿದ್ದು ದ್ವೇಷ ನೀತಿ: ಸಲ್ಮಾನ್ ಖುರ್ಷಿದ್.
12.14: ಯುವತಿಯ ಮೇಲೆ ಕಣ್ಗಾವಲು ಪ್ರಕರಣದಲ್ಲಿ ಜಡ್ಜ್ ನೇಮಕಕ್ಕೆ ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್ ಕಾಯಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡ ಸಮಾಜವಾದಿ ಪಕ್ಷ.
12.00: ಅಸ್ಸಾಂನಲ್ಲಿ ನಕ್ಸಲ್ ಉಗ್ರರ ಉಪಟಳ: ಅಲ್ಪಸಂಖ್ಯಾತರ ರಕ್ಷಣೆ ವಿಷಯದಲ್ಲಿ ಪ್ರಧಾನಿ ಸಿಂಗ್ ಮೌನಕ್ಕೆ ಬಿಜೆಪಿ ಕಿಡಿಕಿಡಿ.

11.00: ಇನ್ನು ಎಲ್ಲ ಆದೇಶ, ನೇಮಕಾತಿಗಳನ್ನು ಮೂಂದಿನ ಸರಕಾರದ ನಿರ್ಧಾರಕ್ಕೆ ಬಿಡಬೇಕು: ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ
10.30: ಮುಗಿಯದ ಎನ್ ಡಿ ತಿವಾರಿ ರಗಳೆ: ತಿವಾರಿ ಮನೆಯೆದುರು ಪತ್ನಿ ಉಜ್ವಲ್ ಶರ್ಮಾ ಧರಣಿ
10.01: ಅಸ್ಸಾಂನ ಬಾಕ್ಸಾ ಜಿಲ್ಲೆಯಲ್ಲಿ ನಕ್ಸಲ್ ಉಗ್ರರ ಅಟ್ಟಹಾಸ: 12 ಮಂದಿ ಬಂಧನ
9.55: World Press Freedom Day: ದೂರದರ್ಶನ ವಿವಾದಕ್ಕೆ ಮೋದಿ ಟ್ವಿಟ್ಟರ್ ಪ್ರತಿಕ್ರಿಯೆ
On days such as this, I feel very sad to see our National TV channel struggling to maintain its professional freedom.
— Narendra Modi (@narendramodi) May 3, 2014 9.30: ದೆಹಲಿಯಲ್ಲಿ ಎಸಿ ಸ್ಫೋಟಿಸಿ ಟೆಕ್ಕಿ, IAS ಅಭ್ಯರ್ಥಿ, ಕೋಲಾರದ ಉತ್ತನೂರಿನ ಸಂತೋಷ್ ದುರ್ಮರಣ
9.20: ವಿದ್ಯಾರ್ಥಿ ನಿಡೊ ತಾನಿಯಂ ಪ್ರಕರಣದಲ್ಲಿ ಹತ್ಯೆ ದೂರನ್ನು ಕೈಬಿಟ್ಟ ಸಿಬಿಐ
9.00: ತಮಿಳುನಾಡು CB-CID ತಂಡದಿಂದ ಚೆನ್ನೈ ಬಾಂಬ್ ಸ್ಫೋಟದ ಆಡೋಪಿಗಾಗಿ ಸಿಸಿಟಿವಿಯಲ್ಲಿ ಶೋಧ
8.43: ಅಸ್ಸಾಂನ ಬಾಕ್ಸಾ ಜಿಲ್ಲೆಯಲ್ಲಿ ಇನ್ನೂ 7 ಶವಗಳ ಪತ್ತೆ; ಸಾವಿನ ಸಂಖ್ಯೆ 30ಕ್ಕೆ ಏರಿಕೆ
8.00 : ಅಸಭ್ಯ ವರ್ತನೆಗಾಗಿ ನಟಿ ಪೂನಂ ಪಾಂಡೆ ಬಂಧನ

7.30: ಚೆನ್ನೈ ಬಾಂಬ್ ಸ್ಫೋಟಕ್ಕೂ ಪಾಟ್ನಾ ಬಾಂಬ್ ಸ್ಫೋಟಕ್ಕೂ ತಳಕು ಹಾಕಿದ ತಮಿಳುನಾಡು ಪೊಲೀಸ್
ಬೆಳಗ್ಗೆ 7.15: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಂದು ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರ ಸಭೆ












Click it and Unblock the Notifications