ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ 4.O: ಈ 30 ಪ್ರದೇಶಗಳ ಮೇಲೆ ಕೇಂದ್ರ ಸರ್ಕಾರ ಕಟ್ಟೆಚ್ಚರ

|
Google Oneindia Kannada News

ದೆಹಲಿ, ಮೇ 17: ಸೋಮವಾರದಿಂದ ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿಯಾಗಲಿದೆ. ಈ ಸಂಬಂಧ ಭಾನುವಾರ ಲಾಕ್‌ಡೌನ್‌ 4.0ರ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆ ಇದೆ. ಈ ಹಿಂದಿನ ಲಾಕ್‌ಡೌನ್‌ಗಳಿಗೆ ಹೋಲಿಸಿಕೊಂಡರೆ ಈ ಬಾರಿ ಬಹುತೇಕ ಕ್ಷೇತ್ರಗಳಿಗೆ ರಿಲೀಫ್ ನೀಡಲು ಸರ್ಕಾರ ಮುಂದಾಗಿದೆ.

ಆದರೆ ದೇಶದ 30 ಪ್ರದೇಶಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಕಠಿಣವಾಗಿ ಮುಂದುವರಿಸುವ ಲೆಕ್ಕಾಚಾರ ಮಾಡಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಈಗಾಗಲೇ ಚೀನಾ ದೇಶವನ್ನು ಹಿಂದಿಕ್ಕಿದೆ. ಇದು ಸಹಜವಾಗಿ ಆತಂಕ ಹೆಚ್ಚಿಸಿದೆ.

ಲಾಕ್ ಡೌನ್ ಮುಗಿದ ನಂತರ 'ಸಾರ್ವಜನಿಕರ ಆಯ್ಕೆ' ಯಾವುದು: ಸಮೀಕ್ಷೆಲಾಕ್ ಡೌನ್ ಮುಗಿದ ನಂತರ 'ಸಾರ್ವಜನಿಕರ ಆಯ್ಕೆ' ಯಾವುದು: ಸಮೀಕ್ಷೆ

ಕೊವಿಡ್ ನಿಯಂತ್ರಣವೂ ಮಾಡಬೇಕು, ಜೊತೆಗೆ ದೇಶದ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬೇಕಾದ ಒತ್ತಡದಲ್ಲಿರುವ ಸರ್ಕಾರ, ಈ 30 ಕಂಟೈನ್‌ಮೆಂಟ್‌ ಜೋನ್‌ಗಳ ಮೇಲೆ ನಿಗಾ ವಹಿಸಲಿದೆ. ಮುಂದೆ ಓದಿ....

12 ರಾಜ್ಯಗಳು ಕೊರೊನಾ ಹಾಟ್‌ಸ್ಪಾಟ್‌

12 ರಾಜ್ಯಗಳು ಕೊರೊನಾ ಹಾಟ್‌ಸ್ಪಾಟ್‌

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಲು ಕಾರಣವಾಗಿರುವ 12 ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ವಿಶೇಷ ನಿಗಾ ಇಟ್ಟಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಒಡಿಶಾ ರಾಜ್ಯಗಳಲ್ಲಿ ಪ್ರಮುಖ ನಗರಗಳನ್ನು ಕೇಂದ್ರ ಗುರುತಿಸಿದ್ದು, ಲಾಕ್‌ಡೌನ್‌ 4ರ ವೇಳೆ ಹೆಚ್ಚಿನ ನಿಗಾ ವಹಿಸಲು ನಿರ್ಧರಿಸಿದೆ.

30 ಪ್ರದೇಶಗಳು ರೆಡ್‌ಜೋನ್

30 ಪ್ರದೇಶಗಳು ರೆಡ್‌ಜೋನ್

ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ರಾಜ್ಯಗಳಿಗೆ ರಿಲೀಫ್ ನೀಡಲು ಮುಂಮದಾಗಿರುವ ಸರ್ಕಾರ, 30 ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ತೀರ್ಮಾನಿಸಿದೆ. ಮುಂಬೈ, ಚೆನ್ನೈ, ಅಹಮದಬಾದ್, ಥಾಣೆ, ದೆಹಲಿ, ಜೈಪುರ, ನಾಸಿಕ್, ಇಂದೋರ್, ಕೊಲ್ಕತ್ತಾ, ಆಗ್ರಾ, ಜೋಧ್‌ಪುರ, ಔರಂಗಬಾದ್, ಸೂರತ್, ತಿರುವಳ್ಳೂರು, ಕಡಲೂರು, ಹೈದರಾಬಾದ್, ಚೆಂಗಲ್‌ಪಾಲ್, ಕರ್ನೂಲ್, ಭೋಪಾಲ್, ಅಮೃತಸರ್, ವಿಲ್ಲುಪುರಂ, ವಡೋದರಾ, ಉದಯ್‌ಪುರ, ಪಾಲ್ಘರ್, ಬೆರ್ಹಾಂಪುರ್, ಸೋಲಾಪುರ ಮತ್ತು ಮೀರತ್ ಪ್ರದೇಶಗಳಲ್ಲಿ ಲಾಕ್‌ಡೌನ್‌ ನಿಯಮ ಕಠಿಣವಾಗಿಯೇ ಇರಲಿದೆ.

ಪಂಜಾಬ್ : ಕರ್ಫ್ಯೂ ಸಡಿಲ, ಮೇ 31ರ ತನಕ ಲಾಕ್ಡೌನ್ ಮುಂದುವರಿಕೆಪಂಜಾಬ್ : ಕರ್ಫ್ಯೂ ಸಡಿಲ, ಮೇ 31ರ ತನಕ ಲಾಕ್ಡೌನ್ ಮುಂದುವರಿಕೆ

79ರಷ್ಟು ಕೊರೊನಾ ಕೇಸ್‌ ಇಲ್ಲಿದೆ

79ರಷ್ಟು ಕೊರೊನಾ ಕೇಸ್‌ ಇಲ್ಲಿದೆ

ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 79ರಷ್ಟು ಕೇಸ್‌ಗಳು ಈ ಪ್ರದೇಶಗಳಲ್ಲಿ ದಾಖಲಾಗಿದೆ. ಈ ಪ್ರದೇಶಗಳಲ್ಲಿ ಹೊಸ ಕೇಸ್‌ಗಳು ಇನ್ನು ಹೆಚ್ಚಾಗುತ್ತಲೇ ಇದೆ. ಹಾಗಾಗಿ, ಈ ಪ್ರದೇಶಗಳಲ್ಲಿ ಕಡಿವಾಣ ಹಾಕಿದ್ರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಗೆದ್ದಂತೆ. ಅದಕ್ಕಾಗಿಯೇ ಗುರುತುಪಡಿಸಲಾಗಿರುವ ಈ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‌ಡೌನ್‌ ತೆರೆವುಗೊಳಿಸುವ ಸಾಧ್ಯತೆ ಇದೆ.

ಲಾಕ್‌ಡೌನ್‌ 4 ವಿಶೇಷವಾಗಿರಲಿದೆ

ಲಾಕ್‌ಡೌನ್‌ 4 ವಿಶೇಷವಾಗಿರಲಿದೆ

ಈ ಹಿಂದೆ ಪ್ರಧಾನಿ ಮೋದಿ ಭಾಷಣ ಮಾಡಿದ ವೇಳೆ ಲಾಕ್‌ಡೌನ್‌ ಮುಂದುವರಿಯಲಿದೆ, ಆದರೆ ಈ ಸಲ ಲಾಕ್‌ಡೌನ್‌ ವಿಶೇಷವಾಗಿರಲಿದೆ ಎಂದು ಹೇಳಿದ್ದರು. ಅನೇಕ ರಾಜ್ಯಗಳು ಲಾಕ್‌ಡೌನ್‌ ಅಂತ್ಯಗೊಳಿಸಲು ಒಪ್ಪುವುದಿಲ್ಲ. ಜೊತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ವಿಶೇಷವಾದ ಮಾರ್ಗಸೂಚಿಗಳು ಇರಲಿದೆ ಎಂದು ಸುಳಿವು ನೀಡಿದ್ದರು. ಸದ್ಯದ ಮಾಹಿತಿ ಪ್ರಕಾರ, ಇನ್ನು ಎರಡು ವಾರಗಳ ಕಾಲ ಲಾಕ್‌ಡೌನ್‌ ಮುಂದುವರಿಯಲಿದೆ. ಅಧಿಕೃತ ಘೋಷಣೆಯೊಂದೇ ಬಾಕಿ.

English summary
These 30 areas should have the maximum restrictions under the home ministry’s lockdown 4.0 ground rules, the health ministry has told the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X