• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರ; ಸಿನಿಮಾ ನೋಡಿ ಕಣ್ಣೀರಿಟ್ಟ ಎಲ್ ಕೆ ಅಡ್ವಾಣಿ..

|

ನವದೆಹಲಿ, ಫೆಬ್ರವರಿ 7: ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಸಿನಿಮಾ ಮಂದಿರದಲ್ಲಿ ಕಣ್ಣೀರಿಟ್ಟ ಪ್ರಸಂಗ ಶುಕ್ರವಾರ ನವದೆಹಲಿಯಲ್ಲಿ ನಡೆದಿದೆ.

ಶುಕ್ರವಾರ ಬಿಡುಗಡೆಯಾದ ಕಾಶ್ಮೀರ ಪಂಡಿತರ ಕುರಿತ ಹಿಂದಿ ಸಿನಿಮಾ 'ಶಿಕಾರಾ' (Shikara) ಸಿನಿಮಾದ ವಿಶೇಷ ಪ್ರದರ್ಶನವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಎಲ್ ಕೆ ಅಡ್ವಾಣಿ ಅವರೂ ಕೂಡ ಆಗಮಿಸಿದ್ದರು. ಸಿನಿಮಾ ಮುಗಿದ ಮೇಲೆ ಅಡ್ವಾಣಿ ಅವರು ತೀವ್ರ ಭಾವುಕರಾಗಿದ್ದರು. ಈ ವೇಳೆ ಸಿನಿಮಾದ ತಾರಾಗಣ ಹಾಗೂ ಸಿಬ್ಬಂದಿ ಅಡ್ವಾಣಿ ಅವರನ್ನು ಸಂತೈಸಿದ್ದಾರೆ.

ಈ ಕುರಿತು ಪತ್ರಕರ್ತರೊಬ್ಬರು, ಅಡ್ವಾಣಿ ಅವರು ಭಾವುಕರಾದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಶಿಕಾರಾ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಆದಿಲ್ ಖಾನ್ ಹಾಗೂ ಸಾದಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಭಾರತ ಪಾಕಿಸ್ತಾನ ವಿಭಜನೆಯಾದ ಮೇಲೆ ಕಾಶ್ಮೀರಿ ಪಂಡಿತರು ಅನುಭವಿಸಿದ ಸಂಕಷ್ಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

English summary
LK Advani shed tears by watching Shikara Hindi Movie which is based on Kashmiri Pandiths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X