ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮೃಗಗಳು ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಬದುಕಲು ಅರ್ಹರಲ್ಲ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 5: ಆ ಚಳಿಗಾಲದ ರಾತ್ರಿಯಲ್ಲಿ ಈ ಜಗತ್ತು ಆಕೆ ಪಾಲಿಗೆ ಇನ್ನೇನು ಕೊನೆಯಾಗುತ್ತದೆ ಎಂಬ ಸಣ್ಣ ಸುಳಿವಾದರೂ ಇತ್ತಾ? ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ನಾಲ್ಕು ಮಂದಿಗೆ ಮರಣದಂಡನೆ ಕಾಯಂ ಮಾಡುವ ಮುನ್ನ ಈ ಅಂಶವನ್ನು ಗಮನಿಸಿದ್ದು, ನಿರ್ಭಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನಾಲ್ವರನ್ನು ದೋಷಿಗಳೆಂದು ತೀರ್ಮಾನಿಸಿ, ಮರಣ ದಂಡನೆ ನೀಡುವಂತೆ ಆದೇಶಿಸಿದೆ.

ಶಿಕ್ಷೆ ಕಾಯಂ ಮಾಡುವ ಮುನ್ನ ಯಾವ್ಯಾವ ಅಂಶವನ್ನು ಸುಪ್ರೀಂ ಕೋರ್ಟ್ ಗಮನದಲ್ಲಿರಿಸಿದೆ ಎಂಬುದರ ವಿವರಗಳು ಇಲ್ಲಿವೆ

Little did Nirbhaya know her world would end: SC's key observations

* ಆ ಚಳಿಗಾಲದ ರಾತ್ರಿಯಲ್ಲಿ ಆಕೆಯ ಜಗತ್ತು ಅಷ್ಟು ಭೀಕರವಾಗಿ ಕೊನೆಯಾಗುತ್ತದೆ ಎಂಬ ಸಣ್ಣ ಸುಳಿವಾದರೂ ಆಕೆಗಿತ್ತಾ?

* ಸಾಯೋ ಸ್ಥಿತಿಯಲ್ಲಿ ಸಂತ್ರಸ್ತೆಯನ್ನು ಮತ್ತು ಆಕೆ ಜತೆಗಿದ್ದವರನ್ನು ಅಪರಾಧಿಗಳು ಬಿಟ್ಟು ಹೋಗಿದ್ದಾರೆ. ಅಪರಾಧಿಗಳು ಅವರಿಂದ ದೋಚಿ, ಬೆಲೆ ಬಾಳುವ ವಸ್ತುಗಳನ್ನು ಹಂಚಿಕೊಂಡಿದ್ದಾರೆ

* ಅಪರಾಧಿಗಳ ವಿಕೃತ ವಾಂಛೆಗಾಗಿ ಆಕೆಯನ್ನು ವಸ್ತುವಿನ ರೀತಿ ಬಳಸಿದ್ದಾರೆ. ಆಕೆಯ ಮಾನ-ಗೌರವ ಜತೆ ಪೈಶಾಚಿಕ ರೀತಿಯಲ್ಲಿ ನಡೆದುಕೊಂಡಿದ್ದಾರೆ

* ಸಾಮಾಜಿಕ ನಂಬಿಕೆಯನ್ನೇ ಹಾಳು ಮಾಡುವಂಥ ಹೇಯಕರವಾದ ಅಪರಾಧ ಕೃತ್ಯವಿದು

* ಒಪ್ಪಲು ಸಾಧ್ಯವೇ ಇಲ್ಲದಷ್ಟು ಕ್ರೂರವಾದ ಅಪರಾಧ ಕೃತ್ಯವಿದು

* ಕಬ್ಬಿಣದ ರಾಡ್ ನಿಂದ ಆಕೆಯ ಕರುಳು ಚದುರಿ ಹೋಗುವಂತೆ ಮಾಡಿದ್ದಾರೆ. ಆಕೆಯ ಬಟ್ಟೆಯನ್ನು ಹರಿದಿದ್ದಾರೆ. ಆಕೆಯ ಮೇಲೆ ಮೃಗಗಳ ರೀತಿ ಲೈಂಗಿಕ ದೌರ್ಜನ್ಯ ಎಸಗಿರುವುದರಿಂದ ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ

* ದೆಹಲಿ ಪೊಲೀಸರ ತನಿಖೆ ಸಮಗ್ರವಾಗಿದೆ.

English summary
Little did Nirbhaya know that on that cold winter night her world would come to a devastating end, the Supreme Court observed while confirming the death penalty awarded to four persons. Here are the key observations of the Supreme Court:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X