ಎಡಪಂಥೀಯರು, ಮಾವೋವಾದಿಗಳಿಂದ ರೈತರ ಪ್ರತಿಭಟನೆ ಮೇಲೆ ನಿಯಂತ್ರಣ ಹೊಂದಲು ಯತ್ನ: ಸರ್ಕಾರ
ಬೆಂಗಳೂರು, ಡಿಸೆಂಬರ್ 12: ರೈತರ ಪ್ರತಿಭಟನೆ ಮೇಲೆ ನಿಯಂತ್ರಣ ಹೊಂದಲು ಎಡಪಂಥೀಯರು ಹಾಗೂ ಮಾವೋವಾದಿಗಳು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
ಕೇಂದ್ರ ಸರ್ಕಾರ ರೈತರ ಪರವಾಗಿದ್ದು ಅವರ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲು ಸಿದ್ದವಿದೆ ಎಂದು ಹೇಳಿದ್ದಾರೆ. ರೈತರ ಆಕ್ಷೇಪಗಳನ್ನು, ಬೇಡಿಕೆಗಳನ್ನು ಬಗೆಹರಿಸಲು ಪ್ರಸ್ತಾವನೆಯನ್ನು ರೈತ ಸಂಘಟನೆಗಳಿಗೆ ಕಳುಹಿಸಲಾಗಿದ್ದು ಸರ್ಕಾರ ಇನ್ನು ಮುಂದೆಯೂ ಚರ್ಚೆ, ಮಾತುಕತೆಗೆ ಸಿದ್ದವಿದೆ ಎಂದು ನರೇಂದ್ರ ಸಿಂಗ್ ತೋಮರ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ರೈತರ ಪರವಾಗಿದ್ದು ಅವರ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲು ಸಿದ್ದವಿದೆ ಎಂದು ಹೇಳಿದ್ದಾರೆ. ರೈತರ ಆಕ್ಷೇಪಗಳನ್ನು, ಬೇಡಿಕೆಗಳನ್ನು ಬಗೆಹರಿಸಲು ಪ್ರಸ್ತಾವನೆಯನ್ನು ರೈತ ಸಂಘಟನೆಗಳಿಗೆ ಕಳುಹಿಸಲಾಗಿದ್ದು ಸರ್ಕಾರ ಇನ್ನು ಮುಂದೆಯೂ ಚರ್ಚೆ, ಮಾತುಕತೆಗೆ ಸಿದ್ದವಿದೆ ಎಂದು ನರೇಂದ್ರ ಸಿಂಗ್ ತೊಮರ್ ಟ್ವೀಟ್ ಮಾಡಿದ್ದಾರೆ.

ಸಮಾಜ ವಿರೋಧಿ ಮತ್ತು ಎಡಪಂಥೀಯರು, ಮಾವೋವಾದಿ ಶಕ್ತಿಗಳು ಪ್ರತಿಭಟನೆಯ ದಿಕ್ಕನ್ನು ಮತ್ತು ವಾತಾವರಣವನ್ನು ಹಾಳು ಮಾಡಲು ನೋಡುತ್ತಿದ್ದಾರೆ, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ರೈತ ಸಂಘಟನೆಗಳಿಗೆ ಹೇಳಿದೆ.
ದೆಹಲಿಯ ಟಿಕ್ರಿ ಗಡಿಭಾಗದಲ್ಲಿ ಕೆಲವು ಪ್ರತಿಭಟನಾಕಾರರು ಪೋಸ್ಟರ್ ಹಿಡಿದುಕೊಂಡು ಹಲವು ಆರೋಪಗಳ ಮೇಲೆ ಬಂಧಿತರಾಗಿರುವ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ಫೋಟೋಗಳು ಮಾಧ್ಯಮಗಳಲ್ಲಿ ಬಂದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಇಂತಹ ಸಮಾಜ ವಿರೋಧಿ ಶಕ್ತಿಗಳು ರೈತರ ಪ್ರತಿಭಟನೆಯ ದಿಕ್ಕನ್ನು ಬದಲಿಸಿ ವಾತಾವರಣವನ್ನು ಹಾಳು ಮಾಡಲು ನೋಡುತ್ತಿವೆ.
ರೈತರನ್ನು ತಮ್ಮ ನಿಲುವಿಗೆ ತಕ್ಕಂತೆ ಬಳಸಿಕೊಳ್ಳಲು ನೋಡುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ. ಕೆಲವು ಎಡಪಂಥೀಯ ಮತ್ತು ಮಾವೋವಾದಿ ಶಕ್ತಿಗಳು ರೈತರ ಹಾದಿ ತಪ್ಪಿಸಲು ನೋಡುತ್ತಿವೆ. ತಮ್ಮ ಅಜೆಂಡಾ ಇಟ್ಟುಕೊಂಡು ರೈತ ಚಳುವಳಿಗಳನ್ನು ಹೈಜಾಕ್ ಮಾಡಿ ಅವರನ್ನು ದುರುಪಯೋಗ ಮಾಡಿಕೊಳ್ಳಲು ನೋಡುತ್ತಿದ್ದಾರೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೂಡ ಆರೋಪಿಸಿದ್ದಾರೆ.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications