ವಿಮಾನ ನಿಲ್ದಾಣ ತಪಾಸಣೆಯಿಂದ 8 ವರ್ಷ ರಿಯಾಯ್ತಿ ಪಡೆದಿದ್ದ ಲಾಲೂ ದಂಪತಿ

ನವದೆಹಲಿ, ಜುಲೈ 28: ಕಳೆದ ಎಂಟು ವರ್ಷಗಳಿಂದ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ಡಿ ದೇವಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆಗೆ ಒಳಪಟ್ಟಿಲ್ಲ ಎಂದು ನಾಗರಿಕ ವಿಮಾನಯಾನ ರಕ್ಷಣಾ ವ್ಯವಸ್ಥೆಯ ಬ್ಯೂರೋಗೆ ದೂರು ಬಂದಿದೆ.

ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಿಂದ ರಿಯಾಯಿತಿ ಪಡೆಯುವ ಅತಿ ಗಣ್ಯರ ವಿಭಾಗಗಳಲ್ಲಿ ಇವರಿಬ್ಬರು ಸೇರಿಲ್ಲ. ಆದರೂ ಕಳೆದ ಶುಕ್ರವಾರದವರೆಗೆ ಭದ್ರತಾ ತಪಾಸಣೆಯಿಂದ ವಿನಾಯಿತಿ ಪಡೆದುಕೊಂಡೇ ಬಂದಿದ್ದಾರೆ.

Lalu, Rabri skipped pre-boarding security checks at Patna airport for 8 years

2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅತಿಗಣ್ಯರಿಗೆ ನೀಡುವ ಭದ್ರತಾ ತಪಾಸಣೆ ರಿಯಾಯಿತಿಯನ್ನು ಲಾಲೂ ದಂಪತಿಗೆ ನೀಡಿತ್ತು. ಜತೆಗೆ ವಿಮಾನ ನಿಲ್ದಾಣದ ಹತ್ತಿರದವರೆಗೆ ವಾಹನ ಕೊಂಡೊಯ್ಯಲು ಅನುಮತಿ ಇತ್ತು ಎಂದು ಮೂಲಗಳು ತಿಳಿಸಿವೆ.

ಆದರೆ, ಎಂಟು ವರ್ಷಗಳಿಂದ ಇವರಿಬ್ಬರು ಭದ್ರತಾ ತಪಾಸಣೆಗೆ ಒಳಪಡದ ಬಗ್ಗೆ ದೂರು ಬಂದಿದೆ. ಈ ಬಗ್ಗೆ ವಿವರಣೆ ಕೇಳಿ ಕೈಗಾರಿಕಾ ಭದ್ರತಾ ಪಡೆಗೆ ವಿಮಾನ ಯಾನ ನಿರ್ದೇಶನಾಲಯದ ಮುಖ್ಯಸ್ಥ ರಾಜೇಶ್ ಕುಮಾರ್ ಪತ್ರ ಬರೆದಿದ್ದಾರೆ.

ವಿಮಾನಯಾನ ಕಾರ್ಯದರ್ಶಿಗೂ ಪತ್ರ ಬರೆಯಲಾಗಿದ್ದು, ಲಾಲೂ -ರಾಬ್ಡಿ ದಂಪತಿಯ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಲ್ಲ ಭದ್ರತಾ ತಪಾಸಣೆಗೂ ಒಳಪಡಿಸುವಂತೆ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+