ಯುಪಿ ಹಿಂಸಾಚಾರ: 'ಇಂತಹ ದುರದೃಷ್ಟಕರ ಘಟನೆಯ ಹೊಣೆ ಹೊರುವವರು ಯಾರೂ ಇಲ್ಲ'
ನವದೆಹಲಿ, ಅಕ್ಟೋಬರ್ 04: "ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಪ್ರಶ್ನೆ ಮಾಡಿದ ಬಳಿಕವೂ ನೀವು ಪ್ರತಿಭಟನೆ ಮಾಡುತ್ತಿರುವುದು ಏಕೆ," ಎಂದು ಸುಪ್ರೀಂ ಕೋರ್ಟ್ ರೈತರನ್ನು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ "ಕೋರ್ಟ್‌ನಲ್ಲಿ ಈ ವಿಚಾರ ಇರುವಾಗ ರೈತರು ಪ್ರತಿಭಟನೆ ಮಾಡಬಹುದೇ ಎಂಬುವುದನ್ನು ಪರಿಶೀಲನೆ ನಡೆಸಲಾಗುವುದು," ಎಂದು ಕೂಡಾ ಪರಿಶೀಲನೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೇಳಿದ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಅಕ್ಟೋಬರ್ 21 ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ರೈತರು ಈಗ ಪ್ರತಿಭಟನೆ ನಡೆಸುವುದು ಸರಿಯೇ ತಪ್ಪೇ ಎಂದು ತಿಳಿಸುವುದಾಗಿ ಎಂದಿದೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಕಾರುಗಳು ಮೈ ಮೇಲೆ ಹರಿದು ಹೋದ ಹಿನ್ನೆಲೆ ರೈತರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ರೈತರು ಮಾಡಿದ್ದಾರೆ. ಈ ಆರೋಪವನ್ನು ಸಚಿವರು ಹಾಗೂ ಅವರ ಪುತ್ರ ಆಶೀಶ್ ಮಿಶ್ರಾ ನಿರಾಕರಿಸಿದ್ದಾರೆ. ಆದರೆ ಪುತ್ರನ ವಿರುದ್ದ ಈಗಾಗಲೇ ಕೊಲೆ ಪ್ರಕರಣ ದಾಖಲಾಗಿದೆ.

ಇನ್ನು ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, "ಈ ರೀತಿಯ ದುರದೃಷ್ಟಕರ ಘಟನೆ ನಡೆದಾಗ ಯಾರೂ ಕೂಡಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ," ಎಂದು ಹೇಳಿದೆ.
ರಾಜಸ್ತಾನ ಮೂಲದ ಗುಂಪು ಕಿಸಾಸ್ ಮಹಾಮಂಚ್ ಜಂತರ್ ಮಂತರ್‌ನಲ್ಲಿ ಸುಮಾರು 200 ರೈತರು ಸೇರಿ ಪ್ರತಿಭಟನೆ ನಡೆಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ಈ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ರೈತರ ಈ ಪ್ರತಿಭಟನೆಯ ವಿರುದ್ದ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೆಯೇ ಹೆದ್ದಾರಿಯನ್ನು ತಡೆಯುವ ಗುಂಪು ಅವರದ್ದು ಅಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಹಾಗೆಯೇ ರಾಜಸ್ತಾನ ಹೈಕೋರ್ಟ್‌ನಲ್ಲಿ ಕೃಷಿ ಕಾನೂನುಗಳ ವಿರುದ್ದ ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಕೋರಿದ್ದಕ್ಕೆ ವಿರೋಧ ವ್ಯಕ್ತಪಡಿಸಿತ್ತು. "ನೀವು ಈ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ ಬಳಿಕ ಮತ್ತೆ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆಯೇ?. ನೀವು ಕೋರ್ಟ್‌ಗೂ ಬರುವುದು ಹೊರಗೆ ಪ್ರತಿಭಟನೆಯೂ ಮಾಡುವುದು ಸರಿಯಲ್ಲ ಅಲ್ಲವೇ?," ಎಂದು ಕೋರ್ಟ್ ಹೇಳಿದೆ.
"ಸರ್ಕಾರವು ಈ ಕೃಷಿ ಕಾನೂನುಗಳನ್ನು ಇನ್ನೂ ಕೂಡಾ ಜಾರಿಗೆ ತಂದಿಲ್ಲ ಎಂದು ಹೇಳಿಕೊಂಡಿದೆ. ಹಾಗೆಯೇ ಈ ಕಾನೂನಿನ ಮೇಲೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆಯೂ ಇದೆ. ಹಾಗಿರುವಾಗ ನೀವು ಯಾಕೆ ಪ್ರತಿಭಟನೆ ಮಾಡುವುದು," ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಭಾನುವಾರ ಉತ್ತರ ಪ್ರದೇಶದ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್‌ನ ಸುಪ್ರೀಂ ಕೋರ್ಟ್, "ಈ ರೀತಿಯ ದುರದೃಷ್ಟಕರ ಘಟನೆ ನಡೆದಾಗ ಯಾರೂ ಕೂಡಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ," ಎಂದು ಹೇಳಿದೆ.
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, "ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಂತಹ ಘಟನೆಗಳು ನಡೆಯಬಾರದು ಎಂದಾದರೆ ಯಾವುದೇ ಪ್ರತಿಭಟನೆಗಳಿಗೆ ಇನ್ನು ಮುಂದೆ ಅವಕಾಶ ಇರಬಾರದು," ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ವಿರೋಧವು ವ್ಯಕ್ತವಾಗಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications