ಸಚಿನ್, ರೇಖಾ ರಾಜ್ಯಸಭೆಗೆ ರಾಜೀನಾಮೆ ನೀಡಲಿ: ಎಸ್ಪಿ ಸಂಸದ
ನವದೆಹಲಿ, ಆಗಸ್ಟ್ 1: ರಾಜ್ಯಸಭೆಗೆ ಎಂದಿಗೂ ಹಾಜರಾಗದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಟಿ ರೇಖಾ ರಾಜ್ಯಸಭೆಗೆ ರಾಜೀನಾಮೆ ನೀಡಲಿ ಎಂದು ಸಮಾಜ ವಾದಿ ಪಕ್ಷದ ಮುಖಂಡ, ಸಂಸದ ನರೇಶ್ ಅಗರ್ವಾಲ್ ಹೇಳಿದ್ದಾರೆ.
ಇಂದು ಸಂಸತ್ತಿನ ಮೇಲ್ಮನೆಯಲ್ಲಿ ಮಾತನಾಡುತ್ತಿದ್ದ ಅವರು, ಸಚಿನ್ ಮತ್ತು ರೇಖಾ ಇಬ್ಬರೂ ರಾಜ್ಯ ಸಭೆಗೆ ರಾಜೀನಾಮೆ ನೀಡುವುದು ಒಳಿತು. ಏಕೆಂದರೆ ನಾವು ಎಷ್ಟೋ ಕಾಲದಿಂದ ನೋಡಬೇಕೆಂದು ಕಾಯುತ್ತಿದ್ದೇವೆ. ಆದರೆ ಇಬ್ಬರೂ ಹಾಜರಾಗುತ್ತಲೇ ಇಲ್ಲ. ಅವರು ಇದ್ದೂ ಏನೂ ಪ್ರಯೋಜನ? ರಾಜೀನಾಮೆ ನೀಡುವುದೇ ಒಳ್ಳೆಯದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.













Click it and Unblock the Notifications