ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಾದ್ಯಂತ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ಆಚರಣೆ

|
Google Oneindia Kannada News

ನವದೆಹಲಿ, ಆಗಸ್ಟ್ 14: ದೇಶದಾದ್ಯಂತ ಇಂದು ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಕೃಷ್ಣಂ ವಂದೇ ಜಗದ್ಗುರಂ ಎನ್ನುತ್ತ ಮಾಧವ, ಮುರಾರಿ, ಮುರಳಿ, ಕೇಶವ ಎಂಬ ನೂರು ನಾಮದಿಂದ ಸ್ತುತಿಸಿಕೊಂಡ ಶ್ರೀಕೃಷ್ಣನನ್ನು ಜಗತ್ತಿನಾದ್ಯಂತ ಹಿಂದುಗಳು ಪೂಜಿಸಿ, ಭಜಿಸಿ, ಸ್ಮರಿಸಿ ಸಂಭ್ರಮಿಸಿದ್ದಾರೆ.

ಈ ಮುದ್ದು ಕೃಷ್ಣರಿಗೆ ಸಾಟಿ ಯಾರು ಹೇಳಿ..?ಈ ಮುದ್ದು ಕೃಷ್ಣರಿಗೆ ಸಾಟಿ ಯಾರು ಹೇಳಿ..?

ಸಾವಿರಾರು ಜನ ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಮುದ್ದು ಕೃಷ್ಣನನ್ನು ಮನೆಯಲ್ಲಿಯೇ ನೋಡಿ ಖುಷಿಪಟ್ಟಿದ್ದಾರೆ. ಜಗವೆಂಬ ನಾಟಕ ರಂಗದ ಸೂತ್ರಧಾರನಾದ ಮಾಧವನನ್ನು ಮನಸಾರೇ ಹಾಡಿ ಹೊಗಳಿ, ಪೂಜಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಂತೂ ಸಂಭ್ರಮದ ಜಾತ್ರೆಯೇ ನಡೆಯುತ್ತಿದೆ.

ಮುದ್ದು ಮಕ್ಕಳು ಮಾಧವನ ವೇಷ ತೊಟ್ಟು, ಪಿಳ್ಳಂಗೋವಿ ನುಡಿಸುತ್ತ ಜನ್ಮಾಷ್ಟಮಿಯನ್ನು ಸಂಭ್ರಮಿಸಿದ್ದು ಹೀಗೆ...

ಮಥುರಾದಲ್ಲಿ ಮುದ್ದುಕೃಷ್ಣ

ಮಥುರಾದಲ್ಲಿ ಮುದ್ದುಕೃಷ್ಣ

ಶ್ರೀಕೃಷ್ಣನ ಜನ್ಮಸ್ಥಳವಾದ ಉತ್ತರ ಪ್ರದೇಶದ ಮಥುರಾದಲ್ಲಿ ಮಕ್ಕಳು ಕೇಶವನ ವೇಷ ತೊಟ್ಟು ನಲಿದಿದ್ದು ಹೀಗೆ.

ಬೆಣ್ಣೆ ಕೃಷ್ಣರು

ಬೆಣ್ಣೆ ಕೃಷ್ಣರು

ಮುರದಾಬಾದ್ ನ ಶಾಲೆಯೊಂದರಲ್ಲಿ ನಡೆದ ಶ್ರೀಕೃಷ್ಣ ವೇಷದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಬೆಣ್ಣೆ ಮೆತ್ತಿಕೊಂಡಿದ್ದು ಸಂತಸ ಪಟ್ಟಿದ್ದು ಹೀಗೆ.

ಮುರಾರಿಯ ವೇಷ

ಮುರಾರಿಯ ವೇಷ

ಭೋಪಾಲಿನಲ್ಲಿ ಜನ್ಮಾಷ್ಟಮಿಯಂದು ಮುರಾರಿಯ ವೇಷ ತೊಟ್ಟು ಸಂಭ್ರಮಿಸುತ್ತಿರುವ ಚಿಣ್ಣರು.

ಯಶೋದೆಯೊಂದಿಗೆ ಮಾಧವ

ಯಶೋದೆಯೊಂದಿಗೆ ಮಾಧವ

ಮುಂಬೈಯಲ್ಲಿ ಜನ್ಮಾಷ್ಟಮಿಯಂದು ತನ್ನ ಮುದ್ದು ಕಂದಮ್ಮನನ್ನು ಕೃಷ್ಣನಂತೇ ಸಿಂಗರಿಸಿದ ಯಶೋದೆ!

English summary
Whole India celebrating Krishna Janmashtami (birthday of Sri Krishna) on 14th Aug. Hindus across the globe celebrate janmashtami by fasting, worshipping, offering special prayers till the midnight., Celebration and customs may differ from place to place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X