ಕಿಡ್ನಿ ವಿಫಲ, ಸುಷ್ಮಾ ಸ್ವರಾಜ್ ಎಐಐಎಂಎಸ್‌ಗೆ ದಾಖಲು

Posted By:
Subscribe to Oneindia Kannada

ನವದೆಹಲಿ, ನವೆಂಬರ್ 16 : ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರ ಮೂತ್ರಕೋಶ ವಿಫಲವಾಗಿರುವ ಕಾರಣ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಡಯಾಲಿಸಿಸ್ ನೀಡಲಾಗುತ್ತಿದೆ.

"ಕಿಡ್ನಿ ವಿಫಲವಾಗಿದ್ದರಿಂದ ನಾನು ಎಐಐಎಂಎಸ್‌ನಲ್ಲಿ ದಾಖಲಾಗಿದ್ದೇನೆ. ಸದ್ಯಕ್ಕೆ ನಾನು ಡಯಾಲಿಸಿಸ್ ನಲ್ಲಿದ್ದೇನೆ. ಮೂತ್ರಕೋಶ ಕಸಿಗಾಗಿ ಪರೀಕ್ಷೆ ಮಾಡಲಾಗುತ್ತಿದೆ. ದೇವರು ಕೃಷ್ಣನ ಕೃಪೆ ನನ್ನ ಮೇಲಿದೆ" ಅಂತ ಸ್ವತಃ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ. [ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ]


64 ವರ್ಷದ ಸುಷ್ಮಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಮಧುಮೇಹದಿಂದ ಅವರು ಬಳಲುತ್ತಿರುವುದರಿಂದ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರು ಡಯಾಲಿಸಿಸ್ ಮೇಲಿದ್ದಾರೆ ಎಂದು ಎಐಐಎಂಎಸ್ ವಿವರ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
Kidney failure, Sushma Swaraj admitted to AIIMS, on dialysis

ಎಐಐಎಂಎಸ್‌ನ ಕಾರ್ಡಿಯೋ-ನ್ಯೂರೋ ಕೇಂದ್ರದಲ್ಲಿ ಸುಷ್ಮಾ ಅವರನ್ನು ದಾಖಲಿಸಲಾಗಿದೆ. ಡಾ. ಬಲರಾಮ್ ಐರಾನ್ ಅವರು ಸುಷ್ಮಾ ಅವರ ಆರೈಕೆ ನೋಡಿಕೊಳ್ಳುತ್ತಿದ್ದಾರೆ. ನವೆಂಬರ್ 7ರಂದೇ ಅವರನ್ನು ದಾಖಲಿಸಲಾಗಿದೆ. ಅವರು ಕಳೆದ 20 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದಾರೆ. [ಸುಷ್ಮಾ ಸ್ವರಾಜ್ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
External affairs minister Sushma Swaraj (64) has been admitted to AIIMS in New Delhi as her kidney have failed and she is on dialysis. Sushma has herself tweeted this news and wished Lord Krishna will bless her.
Please Wait while comments are loading...