'ಕೇಜ್ರಿವಾಲ್ ಕಳ್ಳ...' ದೆಹಲಿಯ ಬೀದಿಗಳಲ್ಲಿ ಹೀಗೊಂದು ಪೋಸ್ಟರ್!

ನವದೆಹಲಿ, ಜುಲೈ 04: "ಕೇಜ್ರಿವಾಲ್ ಚೋರ್ ಹೈ" ಎಂಬ ಒಕ್ಕಣೆಯ ಪೋಸ್ಟರ್ ಗಳು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿಯ ಬಳಿ ಮತ್ತು ಸುತ್ತ ಮುತ್ತ ರಾರಾಜಿಸುತ್ತಿವೆ!

ಶಿರೀಮಣಿ ಅಕಾಲಿ ದಳದ(ಎಸ್ ಎಡಿ) ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಈ ಪೋಸ್ಟರ್ ಅನ್ನು ಸಿದ್ಧಪಡಿಸಿದ್ದು, ಕೇಜ್ರಿವಾಲ್ ಜನರಿಂದ ಸಾಕಷ್ಟು ದುಡ್ಡು ಕದ್ದಿದ್ದಾರೆ, ಆದ್ದರಿಂದ ಈ ರೀತಿ ಪೋಸ್ಟರ್ ಹಾಕಿಸಿದ್ದೇನೆ ಎಂದಿದ್ದಾರೆ. ಈ ಪೋಸ್ಟರ್ ಎಎಪಿ ಮುಖಂಡರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರ ಕ್ಯಾರಿಕೇಚರ್ ಅನ್ನು ಒಳಗೊಂಡಿದೆ.

"ತಮ್ಮನ್ನು ತಾವು ಪ್ರಾಮಾಣಿಕ ಎಂದುಕೊಳ್ಳುವ ಅರವಿಂದ್ ಕೇಜ್ರಿವಾಲ್ ಒಬ್ಬ ದೊಡ್ಡ ದರೋಡೆಕೋರ. ಶಾಲೆಗೆ ಕೋಣೆಗಳನ್ನು ಕಟ್ಟಲು ಅರವಿಂದ್ ಕೇಜ್ರಿವಾಲ್ 25 ಲಕ್ಷ ರೂ.ಗಳನ್ನು ವರಚ್ಚಮಾಡಿದ್ದಾಗಿ ಹೇಳಿದ್ದಾರೆ. ಆದರೆ ಆ ಕೊಠಡಿ ಕಟ್ಟಲು ಕೇವಲ 5 ಲಕ್ಷ ರೂ. ಸಾಕು" ಎಂದು ಈ ಪೋಸ್ಟರ್ ನಲ್ಲಿ ಬರೆಯಲಾಗಿದೆ.

Kejriwal Chor Hai: Posters spotted in Delhi

ಸೋಮವಾರ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು, ಶಾಲೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಸುಮಾರು 2000 ಕೋಟಿ ರೂ. ಹಗರಣದಲ್ಲಿ ಸಿಲುಕಿದೆ ಎಂದು ಆರೋಪಿಸಿದ ನಂತರ ಈ ಬೆಳವಣಿಗೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+