ಕೇಜ್ರಿವಾಲ್ ಮೇಲೆ ಕಲ್ಲು, ಮೊಟ್ಟೆ ಎಸೆದ ಅಪರಿಚಿತ
ನವದೆಹಲಿ, ಜ. 14: ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿ ಅಲ್ಪಾವಧಿಯಲ್ಲಿ ಮನಬಂದಂತೆ ಆಡಳಿತ ನಡೆಸಿ ಅಧಿಕಾರ ಕೈಚೆಲ್ಲಿದ ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್ ಮತ್ತೆ ಚುನಾವಣೆ ಆಖಾಡಕ್ಕೆ ಇಳಿದಿದ್ದಾರೆ. ಆದರೆ, ಜನರ ಆಕ್ರೋಶವನ್ನೂ ಎದುರಿಸುತ್ತಿದ್ದಾರೆ.
ನವದೆಹಲಿ ನಗರದಲ್ಲಿ ಗುರುವಾರ ಚುನಾವಣೆ ಪ್ರಚಾರ ಕೈಗೊಂಡಿದ್ದ ಅರವಿಂದ ಕೇಜ್ರಿವಾಲ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಮೊಟ್ಟೆ ಹಾಗೂ ಕಲ್ಲು ಎಸೆದಿದ್ದಾನೆ. ಆದರೆ, ತಕ್ಷಣ ಬಗ್ಗಿದ ಕೇಜ್ರಿವಾಲ್ ಏಟಿನಿಂದ ಪಾರಾದರು. [ನವದೆಹಲಿಗೆ 24 ಗಂಟೆ ವಿದ್ಯುತ್, ಮೋದಿ ಭರವಸೆ]

ನಂತರ ಈ ಘಟನೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಮೇಲೆ ಆರೋಪ ಮಾಡಲು ಬಳಸಿಕೊಂಡರು. "ಬಿಜೆಪಿ ಮತ್ತು ಕಾಂಗ್ರೆಸ್ ಕಲ್ಲೆಸೆಯುವ ಮೂಲಕ ನನ್ನನ್ನು ಸುಮ್ಮನುಳಿಸಲು ಯತ್ನಿಸುತ್ತಿವೆ. ಆದರೆ, ನಾನು ಹೆದರುವುದಿಲ್ಲ" ಎಂದು ಹೇಳಿದರು. [ಕೇಜ್ರಿವಾಲ್ ಜೊತೆ 200 ಜನರಿಂದ ಊಟ]
ಅರವಿಂದ ಕೇಜ್ರಿವಾಲ್ ಹಿಂದೊಮ್ಮೆ ಆಟೋ ಚಾಲಕನಿಂದಲೂ ಏಟು ತಿಂದಿದ್ದರು.












Click it and Unblock the Notifications