ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರತೆ ಸಂತತಿಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

By Vanitha
|
Google Oneindia Kannada News

ನವದೆಹಲಿ. ಸೆಪ್ಟೆಂಬರ್, 08 : ಹುಲಿ ಸಂತತಿ ಸಮೀಕ್ಷೆ ಕೈಗೊಂಡು ತಿಂಗಳೇ ಕಳೆದಿಲ್ಲ. ಅಷ್ಟರಲ್ಲೇ ಚಿರತೆ ಸಂತತಿ ಸಮೀಕ್ಷೆ ನಡೆಸಿದ ತಂಡ 'ಕರ್ನಾಟಕ' ವು ಚಿರತೆ ಸಂತತಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ವನ್ಯ ಜೀವಿ ವ್ಯಾಪಾರ ಮೇಲ್ವಿಚಾರಣಾ ಜಾಲ ಸಂಸ್ಥೆ ಟ್ರಾಫಿಕ್ ಇಂಡಿಯಾ ಈ ಅಧ್ಯಯನ ಕೈಗೊಂಡಿತು. ಇದರಿಂದ ದೇಶದಲ್ಲಿ 12 ರಿಂದ 14 ಸಾವಿರ, ರಾಜ್ಯದಲ್ಲಿ 1129 ಚಿರತೆಗಳಿವೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.[ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?]

Karnataka is take second place in Leopard lineage

ಕಳೆದ ಬಾರಿ ಹುಲಿ ಸಮೀಕ್ಷೆ ಮಾಡಿ ಹುಲಿ ಸಂತತಿ ಅಳಿವಿನ ಅಂಚಿನಲ್ಲಿರುವುದರ ಕುರಿತಾಗಿ ವರದಿ ನೀಡಿದ ಸಂಸ್ಥೆಯು ಇದೇ ಮೊದಲ ಬಾರಿ ಚಿರತೆ ಅಧ್ಯಯನವನ್ನು ವೈಜ್ಞಾನಿಕ ವಿಧಾನದಲ್ಲಿ ಪೂರ್ಣಗೊಳಿಸಿದ್ದು, ಚಿರತೆ ಸಂತತಿ ಕುರಿತಾಗಿ ಕರಾರುವಕ್ಕಾದ ಮಾಹಿತಿ ನೀಡಿದೆ.

ಈ ಗಣತಿಯಲ್ಲಿ ಈಶಾನ್ಯ ಭಾರತ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳನ್ನು ಹೊರತು ಪಡಿಸಿ ದೇಶದಲ್ಲಿ 7,910 ಚಿರತೆಗಳಿವೆ ಎಂಬ ಮಾಹಿತಿ ಲಭಿಸಿದೆ. ಇದರಲ್ಲಿ 1187 ಚಿರತೆಗಳನ್ನು ಒಳಗೊಂಡ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡರ ಕರ್ನಾಟಕ (1129) 2ನೇ ಸ್ಥಾನ ಪಡೆದುಕೊಂಡಿದೆ.[ಕುದುರೆಮುಖ ಇನ್ನು ಸಂರಕ್ಷಿತ ಹುಲಿಧಾಮ]

ಉಳಿದಂತೆ ಮಹಾರಾಷ್ಟ್ರ 905, ಛತ್ತೀಸ್ ಗಢದಲ್ಲಿ 846, ತಮಿಳುನಾಡಿನಲ್ಲಿ 815, ಉತ್ತರಾಖಂಡದಲ್ಲಿ 703 ಚಿರತೆಗಳು ಇವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಕುರಿತಾಗಿ ಈಗಾಗಲೇ ಡೆಹ್ರಾಡೂನ್‌ನಲ್ಲಿ ನಡೆದ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವಾರ್ಷಿಕ ಸಂಶೋಧನಾ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿದ್ದು, ಭಾರತದ ಕರ್ನಾಟಕ ಮತ್ತು ಮಧ್ಯಪ್ರದೇಶ ಚಿರತೆ ವಾಸಕ್ಕೆ ಯೋಗ್ಯವಾಗಿರುವ ಕಾರಣ ಸಾವಿರಕ್ಕೂ ಹೆಚ್ಚು ಚಿರತೆ ಕಾಣಬಹುದಾಗಿದೆ.

English summary
Karnataka is take second place in Leopard lineage. Madya pradesh is secured 1st place (1187). This Survey is taken by Wild life management of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X