ದೆಹಲಿಯಲ್ಲಿ ಬೀಡು ಬಿಟ್ಟ ಕೈ ಮುಖಂಡರು, ಆಕಾಂಕ್ಷಿಗಳು: ಟಿಕೆಟ್‌ಗಾಗಿ ಲಾಭಿ
ನವದೆಹಲಿ, ಮಾರ್ಚ್ 11: ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ಜೊತೆ ಲೋಕಸಭೆ ಟಿಕೆಟ್ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪರಮೇಶ್ವರ್, ಈಶ್ವರ್ ಖಂಡ್ರೆ ಇನ್ನೂ ಹಲವು ಮುಖಂಡರು ನಿನ್ನೆ ಸಂಜೆಯೇ ದೆಹಲಿಗೆ ತೆರಳಿದ್ದು, ಹೈಕಮಾಂಡ್ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಲೋಕಸಭೆ ಟಿಕೆಟ್ ಆಕಾಂಕ್ಷಿಗಳು ಸಹ ದೆಹಲಿಯಗೆ ತೆರಳಿದ್ದು, ಟಿಕೆಟ್‌ಗಾಗಿ ಅಂತಿಮ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಇಂದು ಮತ್ತು ನಾಳೆ ಎಲ್ಲ ರಾಜ್ಯಗಳ ಕಾಂಗ್ರೆಸ್ ಟಿಕೆಟ್ ಅನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ. ಎಲ್ಲ ರಾಜ್ಯಗಳ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ಸೇರಿದ್ದು, ಇಂದು ಮತ್ತು ನಾಳೆ ಸತತ ಸಭೆಗಳನ್ನು ನಡೆಸಲಿದ್ದಾರೆ.
ರಾಜ್ಯದ ಕಾಂಗ್ರೆಸ್ ಮುಖಂಡರು ಈಗಾಗಲೆ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಒಂದು ಹಂತದ ಮಾತುಕತೆ ಮುಗಿಸಿದ್ದಾರೆ.
ದೇವೇಗೌಡ ಅವರು ಸಹ ನವದೆಹಲಿಯಲ್ಲಿಯೇ ಇದ್ದು, ಅವರೊಂದಿಗೆ ಇನ್ನೊಂದು ಹಂತದ ಸಭೆಯಲ್ಲಿ ರಾಜ್ಯ ಮುಖಂಡರು ಮತ್ತು ಕಾಂಗ್ರೆಸ್ ಹೈಕಮಾಂಡ್ ನಡೆಸಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಳ್ಳಲಿದೆ.












Click it and Unblock the Notifications