ನೊಬೆಲ್ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಮನೆಗೆ ಕನ್ನ ಹಾಕಿದ್ದ ಮೂವರ ಬಂಧನ

Written By: Ramesh
Subscribe to Oneindia Kannada

ನವದೆಹಲಿ: ಫೆಬ್ರವರಿ. 12 : ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಮನೆಯಲ್ಲಿ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ರಜನ್, ಸುನೀಲ್ ಹಾಗೂ ವಿನೋದ್ ಬಂಧಿತ ಆರೋಪಿಗಳು. ಬಂಧಿತರಿಂದ ನೊಬೆಲ್ ಪ್ರಶಸ್ತಿ ಪತ್ರ ಮತ್ತು ಚಿನ್ನದ ಅಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. [ನೊಬೆಲ್ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ]

ಕೈಲಾಸ್ ಸತ್ಯಾರ್ಥಿ ಅವರು ವಿದೇಶದಲ್ಲಿ ಪ್ರವಾಸದಲ್ಲಿದ್ದಾಗ ಆರೋಪಿಗಳು ಫೆಬ್ರವರಿ 7ರಂದು ದೆಹಲಿಯ ಅಲಕ್ ನಂದಾ ಕಾಲೋನಿಯಲ್ಲಿರುವ ಅರಾವಳಿ ಆಪಾರ್ಟ್ಮೆಂಟ್ ನಲ್ಲಿರುವ ಸತ್ಯಾರ್ಥಿ ಅವರ ಮನೆಯ ಬಾಗಿಲು ಮುರಿದು ನೊಬೆಲ್ ಪ್ರಶಸ್ತಿ ಪತ್ರ ಹಾಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು.

Kailash Satyarthi's Nobel Peace Prize replica recovered, 3 arrested

ಬಂಧಿತರಿಂದ ಕಳವುವಾಗಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ಪಾಕಿಸ್ತಾನ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸಫ್ ಜೊತೆ 2014ರಲ್ಲಿ ವಿಶ್ವಸಂಸ್ಥೆ ನೊಬೆಲ್ ಶಾಂತಿ ಪ್ರಶಸ್ತಿ ಹಂಚಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The high-profile case of theft at Nobel laureate Kailash Satyarthi's residence has been solved with the recovery of the replica of the Nobel Peace Prize and other stolen valuables.Three persons have been arrested in connection with the theft, police said on Sunday.
Please Wait while comments are loading...