46ನೇ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಪ್ರಮಾಣವಚನ ಸ್ವೀಕಾರ
ನವದೆಹಲಿ, ಅಕ್ಟೋಬರ್ 03: ಸುಪ್ರೀಂಕೋರ್ಟ್‌ನ 46ನೇ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಂಜನ್ ಗೋಗೊಯ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ರಾಷ್ಟ್ರಪತಿ ಭವನದಲ್ಲಿ ನಡೆಯಿತು.
ರಂಜನ್ ಗೊಗೊಯ್ ಅವರು ಅಸ್ಸಾಂ ರಾಜ್ಯದವರಾಗಿದ್ದು, ಮುಖ್ಯ ನ್ಯಾಯಾಧೀಶ ಹುದ್ದೆಗೇರಿದ ಮೊದಲ ನೈರುತ್ಯ ರಾಜ್ಯಗಳ ವ್ಯಕ್ತಿಯಾಗಿದ್ದಾರೆ. ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತರಾದ ಕಾರಣ ರಂಜನ್ ಗೊಗೊಯ್ ಅವರು ಹೊಸ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಂಜನ್ ಗೊಗೊಯ್ ಅವರು 2019 ರ ನವೆಂಬರ್ ವರೆಗೂ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಆಗಿದ್ದ ದೀಪಕ್ ಮಿಶ್ರಾ ಅವರು 13 ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿದ್ದರು.

ಸುಪ್ರಿಂಕೋರ್ಟ್‌ನ ಐವರು ನ್ಯಾಯಮೂರ್ತಿಗಳಲ್ಲಿ ರಂಜನ್ ಗೊಗೊಯ್ ಅವರೇ ಹಿರಿಯರಾಗಿದ್ದರು ಹಾಗಾಗಿ ದೀಪಕ್ ಮಿಶ್ರಾ ಅವರು ರಂಜನ್ ಗೊಗೊಯ್ ಅವರನ್ನು ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದರು.












Click it and Unblock the Notifications